ಹಾವೇರಿ :
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ಅಭಿವೃದ್ಧಿಗೆ ಪೂರಕವಾಗಿರದೇ ಬಂಡವಾಳಶಾಹಿಗಳ ನೆರವಿಗೆ ಬರುವಂತಿದೆ .ಬಜೆಟನ್ನು ಜನಪರವಾಗಿ ತಿದ್ದುಪಡೆ ಮಾಡುವಂತೆ ಹಾಗೂ ಕೇಂದ್ರ ಸರ್ಕಾರದಜನವಿರೋಧಿ ನೀತಿಯನ್ನು ಖಂಡಿಸಿ ಪೆ,12 ರಿಂದ 16ರ ವರಿಗೆರಾಜ್ಯದತುಂಬೆಲ್ಲಾ ಭಾರತಕಮ್ಯುನಿಷ್ಟ್ ಪಕ್ಷ(ಮಾಕ್ರ್ಸವಾದಿ)ದಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿಪಿಐ(ಎಂ)ಪಕ್ಷರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರುದೇಶಆರ್ಥಿಕವಾಗಿ ದಿವಾಳಿಯಾಗಿದ್ದು,ಜನರ ತೆರಿಗೆ ಹಣಜನರಕಾರ್ಯಕ್ಕೆ ಬಳಕೆಯಾಗಬೇಕು. ಆದರೆಜನಸಾಮಾನ್ಯರುಕಟ್ಟಿದತೆರಿಗೆ ಹಣ ಬಂಡವಾಳಶಾಹಿಗಳ ಹಿತಕ್ಕಾಗಿಉಪಯೋಗದ ಅಂಶಗಳು ಬಜೆಟ್ನಲ್ಲಿಕಾಣಬಹುದಾಗಿದೆ.ದೇಶದ ಪ್ರತಿಯೊಬ್ಬರತಲಾಆಧಾಯ 35% ರಷ್ಟುಕಂಡು ಬರುತ್ತಿದೆ.ಬಡವರು ಹೇಗೆ ಇದರಿಂದಜೀವನ ನಡೆಸುವುದು? ಎಲ್ಐಸಿ,ಬಿಎಸ್ಎನ್ಎಲ್ ಸೇರಿದಂತೆಆಧಾರ ಬರುವಂತಹಇತರ ಸೇವೆಗಳನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರಖಾಸಗೀಕರಣ ಮಾಡುವ ಹುನ್ನಾರ ಮಾಡುತ್ತಿದೆ. ಜನವಿರೋಧಿ ನೀತಿಯಾಗಿದೇಶದಜನರು ಬೀದಿಗೆ ಬಂದು ಹೋರಾಟ ಮಾಡುವ ಪರಸ್ಥಿತಿ ಉಂಟಾಗಿದೆಎಂದರು.
ರೈತರ ಸಾಲಮನ್ನಾ ಮಾಡಲುಒತ್ತಾಯ : ದೇಶದರೈತ ವರ್ಗತುಂಬಾ ಸಂಕಷ್ಟ ಅನುಭವಿಸುತ್ತಿದ್ದು,ಬೇಸಾಯದಆಧಾಯದ ಮೂಲ ಹೆಚ್ಚಿಗೆ ಮಾಡುವಯೋಜನೆ ಹಾಗೂ ಮಾರ್ಗಗಳನ್ನು ಸರ್ಕಾರಕಂಡು ಹಿಡಿಯಬೇಕಾಗಿದೆ. ರೈತರಎಲ್ಲ ಸಾಲಮನ್ನಾ ಮಾಡುವ ಮೂಲಕ ಅವರ ಕಷ್ಟಕ್ಕೆ ಪೂರ್ಣ ವಿರಾಮ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸರ್ಕಾರ ಬಜೆಟ್ನ್ನುತಿದ್ದುಪಡೆ ಮಾಡಿಕ್ರಮ ಕೈಗೊಳ್ಳಬೇಕಾಗಿದೆ .ರೈತರ ಸಬ್ಸಡಿ ಹೆಚ್ಚಿಸಬೇಕಾಗಿದೆ.ರೈತರ ಮಕ್ಕಳಿಗೆ ಕೈಗಾರಿಕೆಗಳ ಉಳಿವಿಗೆ, ಉದ್ದಿಮಿಗಳಿಗೆ ಅಧಿಕ ಪ್ರಮಾಣ ಸಾಲ ನೀಡಿಅವರ ಸಾವುಗಳ ಸಂಖ್ಯೆ ಇಳಿಮುಖ ಮಾಡಲು ಅವಕಾಶ ನೀಡಬೇಕಾಗಿದೆ.
ಪೌರತ್ವತಿದ್ದುಪಡೆಗೆ ವಿರೋಧ :ಸಂವಿಧಾನದ ಅಂಶಗಳಿಗೆ ವಿರುದ್ಧವಾಗಿರುವ ಎನ್ಆರ್ಸಿ,ಸಿಎಎ ಹಾಗೂ ಎನ್ಪಿಆರ್ ಕಾಯ್ದೆಗಳನ್ನು ಸಿಪಿಐ(ಎಂ) ಪಕ್ಷತೀವ್ರ ವಿರೋಧಿಸುತ್ತದೆ. ಬಡವರ, ಎಲ್ಲ ವರ್ಗದಜನರುಇದನ್ನು ಕೇಳಿಲ್ಲಾ.ದೇಶಆರ್ಥಿಕವಾಗಿ ಬಲಿಷ್ಠಗೊಳ್ಳಬೇಕಾಗಿದೆ .ಯುವಕರಿಗರ ಉದ್ಯೋಗ ನೀಡಿರೈತರ ಸಾಲಮನ್ನಾ ಮಾಡಿಎಂದರೆಒಡೆದು ಆಳುವ ನೀತಿಯಿಂದಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಕೇಂದ್ರ ಸರ್ಕಾರದೇಶದಅಭಿವೃದ್ಧಿ ಮಾಡುವಉದ್ದೇಶವಿದ್ದರೆಎಲ್ಲ ವರ್ಗದಜನರನ್ನುಒಟ್ಟಿಗೆತೆಗೆದುಕೊಂಡು ಹೋಗಬೇಕಾಗಿದೆ ಹೀಗೆ ಬಡವರ ಹಿಂದುಳಿದ ವರ್ಗದವರ ಹಾಗೂ ದಲಿತ ವಿರೋಧ ನೀತಿಯನ್ನು ಖಂಡಿಸಿ ಜನಪರ ಬಜೆಟ್ ಮಾಡುವಂತೆ ಒತ್ತಾಯಿಸಿ ಐದು ದಿನಗಳ ಕಾಲ ಹೋರಾಟ ಮಾಡಲು ಸಿಪಿಐ(ಎಂ) ಪಕ್ಷ ನಿರ್ಧರಿಸಿದೆ ಎಂದುಯು ಬಸವರಾಜ ತಿಳಿಸಿದರು.
ಸಿಪಿಎಂ(ಎಂ)ಪಕ್ಷದಮುಖಂಡರಾದ ಬಿಐ ಈಳಗೇರ ಮಾತನಾಡಿರಾಜ್ಯದಲ್ಲಿಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆದಕ್ಕೆಉಂಟಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆಅವರ ಮೇಲೆ ಕೇಸ್ ಹಾಕುವ ಹುನ್ನಾರ ನಡೆಯುತ್ತಿದೆ. ಸಿಎಂ ಯಡಿಯೂರಪ್ಪನವರುರಾಜ್ಯದಜನರ ಪರವಾಗಿ ನಿಲ್ಲಬೇಕಾಗಿದೆಎಂದರು.
ಡಿವೈಎಫ್ಐರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ ದೇಶದ ಯುವಜನರು ಉದ್ಯೋಗ ಹುಡಿಕಿಕೊಂಡು ಅಲೆದಾಡುವ ಪರಸ್ಥಿತಿ ಉಂಟಾಗಿದೆ.ಕೇಂದ್ರ ಸರ್ಕಾರಯುವಕರಉದ್ಯೋಗದ ಬಗ್ಗೆ ಮಾತನಾಡದೇ ಭಾವನಾತ್ಮಕ ವಿಚಾರವಾಗಿ ಆಡಳಿತ ಮಾಡುತ್ತಿದೆ.ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಬೇಕಾಗಿದೆಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
