ಕರೋನಾ ವೈರಸ್‍ನಿಂದ ರೇಷ್ಮೆ ಉದ್ಯಮಕ್ಕೆ ಹೊಡೆತ

ಸುಮಾರು 1500 ರಿಂದ 2000 ಕುಟುಂಬಗಳ ಆದಾಯಕ್ಕೆ ಕುತ್ತು
ತಿಪಟೂರು
     ಚೀನಾವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಬಿಸಿ ರೇಷ್ಮೆಮ ಸೀರೆ ಉದ್ಯಮಕ್ಕೂ ತಟ್ಟಿದ್ದು, ಈ ಉದ್ಯಮ ನಂಬಿರುವ ತಾಲ್ಲೂಕಿನ 1500-2000 ಕುಟುಂಬಗಳ ಆದಾಯಕ್ಕೆ ಕುತ್ತು ಎದುರಾಗಿದೆ. ಸೋಂಕು ಹರಡುವ ಆತಂಕ ಹೆಚ್ಚಾಗುತ್ತಿದ್ದಂತೆ, ಕೇಂದ್ರ ಸರ್ಕಾರವು ಚೀನಿಯರ ಪ್ರವೇಶ ನಿಬರ್ಂಧಿಸಿದೆ. ಅಲ್ಲಿನ ವ್ಯಾಪಾರಿಗಳು ಬರುತ್ತಿಲ್ಲ. ಹೀಗಾಗಿ, ರೇಷ್ಮೆ ಸರಕುಗಳಿಗೆ ಬೆಲೆ ಏರಿಕೆ ಮತ್ತು ಬೇಡಿಕೆ ಕುಸಿದಿದೆ. ತಾಲ್ಲೂಕಿನ ಗಾಯತ್ರಿನಗರ, ಹಳೆಪಾಳ್ಯ, ಹೊಸಪಾಳ್ಯ, ಅಣ್ಣಾಪುರ, ಹಿಂಡಿಸ್ಕೆರೆ, ಶಂಕರನಗರ, ಕೋಟೆನಾಯಕನಹಳ್ಳಿ, ಮುದ್ದೇನಹಳ್ಳಿ, ಹೊನ್ನವಳ್ಳಿ, ಸುತ್ತಮುತ್ತಲ ಸಾವಿರಾರು ಜನರು ರೇಷ್ಮೆಗೆ ಸಂಬಂಧಿಸಿದಂತೆ ರೇಷ್ಮೆ ಸೀರೆಗಳ ಮಗ್ಗದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
    4000 ಉದ್ಯೋಗಿಗಳಿದ್ದು ಇದುವರೆಗೆ ಒಂದು ರೇಷ್ಮೆ ಸೀರೆ ನೆಯ್ಗೆಯಿಂದ 500-600 ರೂ. ಕೂಲಿ ದೊರೆಯುತ್ತಿತ್ತು.  ಇದರ ಜೊತೆಗೆ ವಾರ್ಪ್ ಸುತ್ತುವುದು ಮಾಡುತ್ತಿದ್ದು, ಈಗ ಕರೋನಾ ವೈರಸ್ ಭೀತಿಯಿಂದ ಚೀನಾದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಇದರಿಂದ ಕೆಲದಿನಗಳ ಹಿಂದೆ ಇದ್ದ ರೇಷ್ಮೆ ಕೆ.ಜಿ ಗೆ 3000 ರೂ. ನಿಂದ 4000 ರೂ. ಗಡಿಡಾಟಿದ್ದು, 5000 ದತ್ತ ದಾಪುಗಾಲಿಟ್ಟಿದೆ. ಇದರಿಂದ ಸ್ಥಳೀಯವಾಗಿ ಸೀರೆ ನೆಯ್ಗೆ ಮಾಡುವವರ ಹೊಟ್ಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.ರೇಷ್ಮೆ ಸೀರೆಗಳ ಜೊತೆಗೆ ಕಾಟನ್, ನೈಲಾನ್ ಸೀರೆಗಳನ್ನು ನೆಯ್ಗೆ ಮಾಡುತ್ತಿದ್ದು, ಇದರಲ್ಲಿ ಲಾಭ ಮತ್ತು ಬೇಡಿಕೆ ಎರಡು ಕಡಿಮೆ ಇದೆ.  
ಮಗ್ಗದ ಸದ್ದು ಕೇಳುತ್ತಿಲ್ಲ
    ಈ ಗ್ರಾಮಗಳಲ್ಲಿ ಯಾವುದೇ ಭಾಗಕ್ಕೆ ಹೋದರೂ ಮಗ್ಗದ ಸದ್ದು ಕೇಳಿಸುತ್ತಿಲ್ಲ. ಕೆಲವರು  ತಮ್ಮ ಬೇಡಿಕೆಯನ್ನು ನೋಡಿಕೊಂಡು ದಿನಕ್ಕೆ ಒಂದೊ ಎರಡೊ ಸೀರೆಗಳನ್ನು ನೇಯುತ್ತಾ  ದಿನ ತಳ್ಳುತ್ತಿದ್ದಾರೆ. ಗ್ರಾಮದಲ್ಲಿ ಒಂದು ಸುತ್ತು ಬಂದರೆ ಬಹುತೇಕ ಮಗ್ಗದ ಘಟಕಗಳು ಮುಚ್ಚಿರುವುದನ್ನು ಕಾಣಬಹುದು ಎಂದು ಮಗ್ಗದ ಮಾಲೀಕ ಶರತ್ ತಿಳಿಸಿದರು. 
    ತಿಪಟೂರು ನಗರದಿಂದ  ಕೇವಲ 1 ಕಿ.ಮೀ ದೂರದಲ್ಲಿರುವ ಅಣ್ಣಾಪುರ-ಹಳೆಪಾಳ್ಯಗಳಲ್ಲಿ ರೇಷ್ಮೆಯ ಬೆಲೆ ಹೆಚ್ಚಳವಾಗಿರುವು ದರಿಂದ ರೇಷ್ಮೆ ಸೀರೆಗಳು ನೇಯಲು ಸಿಗುತ್ತಿಲ್ಲ. ನಮ್ಮ ಉದರ ಪೋಷಣೆಗೆ ಇದ್ದ ಒಂದೇ ಒಂದು ಮಾರ್ಗವೆಂದರೆ ಸೀರೆ ನೆಯ್ಗೆ. ಆದರೆ ಈಗ ಬೆಲೆ ಏರಿಕೆಯಿಂದ ನಮಗೆ ಉದ್ಯೋಗ ಸಿಗುತ್ತಿಲ್ಲ.  
   
-ಪುಂಡರೀಕ, ನಾಗರಾಜು, ಧನಂಜಯ  ಸೀರೆ ನೆಯ್ಗೆಯ ಉದ್ಯೋಗಿಗಳು.
 

Recent Articles

spot_img

Related Stories

Share via
Copy link