ಕೇಂದ್ರದ ತಿದ್ದುಪಡಿ ಕಾಯಿದೆ ವಿರೋಧಿಸಿ ಶಿರಾದಲ್ಲಿ ಪ್ರತಿಭಟನೆ

ಶಿರಾ

    ಕೇಂದ್ರ ಸರ್ಕಾರದ ಕೃಷಿ ವಿರೋಧಿ, ಭೂಸುಧಾರಣೆ ತಿದ್ದುಪಡಿ, ಎ.ಪಿ.ಎಂ.ಸಿ. ತಿದ್ದುಪಡಿ ಕಾಯಿದೆ ಸೇರಿದಂತೆ ಹಲವು ಕಾಯಿದೆಗಳ ಅನುಷ್ಠಾನ ಕುರಿತು ಸೋಮವಾರ ನಡೆದ ರಾಜ್ಯಾದ್ಯಂತ ಬಂದ್ ಹಿನ್ನೆಲೆಯಲ್ಲಿ ಶಿರಾ ನಗರದಲ್ಲೂ ರೈತ ಸಂಘ, ಹಸಿರು ಸೇನೆ, ಕಾರ್ಮಿಕ ಸಂಘಟನೆ, ದಲಿತ ಸಂಘಟನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಸಿ.ಐ.ಟಿ.ಯು. ಕಾಂಗ್ರೆಸ್, ಜೆ.ಡಿ.ಎಸ್. ಪಕ್ಷಗಳೂ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾಗಶಃ ಶಿರಾ ಬಂದ್ ಯಶಸ್ವಿಯಾಯಿತು.

     ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಪ್ರತಿಭಟನಾಕಾರರು ಸಭೆ ಸೇರಿದ ನಂತರ ಮುಖ್ಯರಸ್ತೆಯ ಮೂಲಕ ನಾರಾಯಣಸ್ವಾಮಿ ಕಲ್ಯಾಣ ಮಂಟಪ, ಖಾಸಗಿ ಬಸ್ ನಿಲ್ದಾಣದ ಮೂಲಕ ಹೊರಟ ಮೆರವಣಿಗೆಯು ತಹಸೀಲ್ದಾರ್ ಕಚೆÉೀರಿಗೆ ತೆರಳಿ ಮನವಿ ಪತ್ರ ಸಲ್ಲಿಸಿತು.

     ರೈತ ಸಂಘದ ಜಿಲ್ಲಾ ಗೌ.ಅಧ್ಯಕ್ಷ ಧನಂಜಯಾರಾಧ್ಯ ಮಾತನಾಡಿ, ರಾಜ್ಯದ ರೈತರು ಹಾಗೂ ಕಾರ್ಮಿಕರ ವಿರೋಧಿ ಶಾಸನಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಇದರಿಂದ ರೈತರು ಹಾಗೂ ಕಾರ್ಮಿಕರು ಬೀದಿ ಪಾಲಾಗುವ ಸಾಧ್ಯತೆಗಳಿವೆ. ಇಡೀ ದೇಶದ ಜನತೆ ಕೋವಿಡ್‍ನಂತಹ ಮಹಾಮಾರಿಯಯ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಇಂತಹ ಕಾನೂನುಗಳ ಅಗತ್ಯವಾದರೂ ಏನಿತ್ತು ಎಂದು ಆರೋಪಿಸಿದರು.

    ಮಾಜಿ ಸಚಿವ ಟಿ.ಬಿ.ಜಯಚಂದ್ರ, ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಕಲ್ಕೆರೆ ರವಿಕುಮಾರ್, ತಾ. ರೈತ ಸಂಘದ ಅಧ್ಯಕ್ಷ ಸಣ್ಣ ದ್ಯಾಮೇಗೌಡ, ಪ್ರ. ಕಾರ್ಯದರ್ಶಿ ನಾದೂರು ಕೆಂಚಪ್ಪ, ದಲಿತ ಮುಖಂಡರಾದ ಜೆ.ಎನ್.ರಾಜಸಿಂಹ, ಟೈರ್ ರಂಗನಾಥ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಎಸ್.ಬಿ.ರಮೇಶ್, ಕಾರ್ಮಿಕ ಸಂಘಟನೆಯ ಗಿರೀಶ್, ರೈತ ಮುಖಂಡರಾದ ಪರಮಶಿವಯ್ಯ, ಲಕ್ಷ್ಮಣಗೌಡ, ತೇರಮಲ್ಲಪ್ಪ, ಬಸವರಾಜು, ನಂದೀಶ್, ಸಿ.ಐ.ತಿ.ಯು. ನಿಸಾರ್ ಅಹಮದ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಜರಿದ್ದರು.

   ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತಲ್ಲದೆ ಪ್ರವಾಸಿ ಮಂದಿರದ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೂ ಸಂಜೆಯವರೆಗೂ ನಗರದ ಅಂಗಡಿ, ಮುಂಗಟ್ಟುಗಳು ಭಾಗಶಃ ಮುಚ್ಚಲ್ಪಟ್ಟಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap