ಒಳ್ಳೆಯ ಫಲಿತಾಂಶ ಪಡೆಯಲು ಮಕ್ಕಳಿಗೆ ಕರೆ

0
22

ಎಂ ಎನ್ ಕೋಟೆ

     ಶಾಲೆಗೆ ಒಳ್ಳೆಯ ಫಲಿತಾಂಶವನ್ನು ತಂದಿರುವುದು, ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಕೂಡ ಒಳ್ಳೆಯ ಕೆಲಸವಾಗಿದೆ. ಮುಂಬರುವ ಮಕ್ಕಳು ಕೂಡ ಇದೆ ತರ ಒಳ್ಳೆಯ ಫಲಿತಾಂಶವನ್ನು ತರಬೇಕು ಎಂದು ತಾಲ್ಲೂಕ್ ಪಂಚಾಯಿತಿ ಸದಸ್ಯ ಅ.ನ.ಲಿಂಗಪ್ಪ ತಿಳಿಸಿದರು.

     ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಇರುವ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಿ ಇವತ್ತು ಶಾಲೆಗೆ ಹೆಚ್ಚು ಫಲಿತಾಂಶವನ್ನು ತರಲು ಶ್ರಮಿಸುತ್ತಿರುವ ಶಿಕ್ಷಕರ ಪಾತ್ರ ಬಹು ಮುಖ್ಯವಾದದ್ದು, ಇದೇ ರೀತಿ ಮುಂಬರುವ ವಿದ್ಯಾರ್ಥಿಗಳು ಕೂಡ ಅಂಕಗಳನ್ನು ತರಬೇಕು. ಶಾಲೆಗೆ ಇಲಾಖೆಯಿಂದ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಿ, ಅವರ ಗೌರವಧನವನ್ನು ನಾನು ಕೊಡಲು ಸಿದ್ದನಾಗಿದ್ದೇನೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ಇದೆ ರೀತಿ ನೂರಕ್ಕೆ ನೂರು ಫಲಿತಾಂಶವನ್ನು ತರಲು ಪ್ರಯತ್ನ ಮಾಡಲಿ ಎಂದು ತಿಳಿಸಿದರು.

     ನಿವೃತ್ತ ಶಿಕ್ಷಣಾಧಿಕಾರಿ ಕೆಂಪರಂಗಯ್ಯ ಮಾತನಾಡಿ ಪ್ರತಿ ವರ್ಷವು ಕೂಡ ನಾನು ಪ್ರತಿಭಾ ಪುರಸ್ಕಾರವನ್ನು ಕೊಡುತ್ತೇನೆ. ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿ ನಿಮ್ಮ ಶಾಲೆಗೆ ಹಾಗೂ ಶಿಕ್ಷಕರಿಗೆ ಒಳ್ಳೆಯ ಹೆಸರನ್ನು ತರಬೇಕು. ಆದ್ದರಿಂದ ಶಾಲಾ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅತಿ ಹೆಚ್ಚು ಅಂಕಗಳನ್ನು ಪಡೆಯಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷರನ್ನು ಕೂಡ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು.

      ಈ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಚಿತ್ರಲಿಂಗಯ್ಯ, ಮುಖ್ಯ ಶಿಕ್ಷಕಿ ಮಹೇಶ್ವರಿ, ಶಿಕ್ಷಕರಾದ ಚಲುವರಂಗಯ್ಯ , ಮುಖಂಡರಾದ ಮಂಜಣ್ಣ, ಪಾಚಿ ಶ್ರೀರಂಗಯ್ಯ, ದೇವರಾಜು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here