ಕೊರೋನಾ ಶಂಕೆ :RML ಆಸ್ಪತ್ರೆಯ 6 ಜನ ವೈದ್ಯರು ಮತ್ತು 4 ದಾದಿಯರು ಕ್ವಾರಂಟೈನ್ ಗೆ

 ನವದೆಹಲಿ
 
    ದೇಶದೆಲ್ಲಡೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿರುವ ವೇಳೆಯಲ್ಲಿ ನವದೆಹಲಿಯ ಆರ್ ಎಂ ಎಲ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ರೋಗಿಯೊಂದಿಗೆ ಸಂಪರ್ಕ ಹೊಂದಿದ 6 ವೈದ್ಯರು, 4 ನರ್ಸ್ ಗಳನ್ನು ಕ್ವಾರಂಟೈನ್ ನಲ್ಲಿಟ್ಟಿರುವ ಘಟನೆ ವರದಿಯಾಗಿದೆ.
     ಮೂಲಗಳ ಪ್ರಕಾರ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ವೈರಸ್ ಸೋಂಕಿತ ರೋಗಿಯೊಬ್ಬರೊಂದಿಗೆ ಆರ್ ಎಂಎಲ್ ಆಸ್ಪತ್ರೆಯ 6 ವೈದ್ಯರು, 4 ದಾದಿಯರು ಯಾವುದೇ ಮುಂಜಾಗ್ರಾತ ಪರಿಕರಗಳಿಲ್ಲದೇ ಅರಿವಿಲ್ಲದೇ ಸಂಪರ್ಕಕ್ಕೆ ಬಂದಿದ್ದಾರೆ. ಹೀಗಾಗಿ ಇವರಿಗೂ ವೈರಸ್ ಸೋಂಕು  ತಾಗಿರುವ ಸಾಧ್ಯತೆ ಮೇರೆಗೆ ಎಲ್ಲ 6 ವೈದ್ಯರು ಮತ್ತು 4 ದಾದಿಯರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link