ನವದೆಹಲಿ :

ಲಾಕ್ ಡೌನ್ ನಂತರ ಬಂದ್ ಮಾಡಲಾಗಿದ್ದ ಕೇರಳ – ಕರ್ನಾಟಕಕ್ಕೆ ಗಡಿಯನ್ನು ತುರ್ತು ಸಂದರ್ಭದಲ್ಲಿ ತೆರೆಯುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.
ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ, ಕರ್ನಾಟಕ ಕೇರಳ-ಕರ್ನಾಟಕ ಗಡಿಭಾಗವನ್ನು ಬಂದ್ ಮಾಡಿತ್ತು. ಈ ಮೂಲಕ ಕೇರಳದಿಂದ ಕರ್ನಾಟಕಕ್ಕೆ ಜನರು ಬರುವುದನ್ನು ತಡೆಗಟ್ಟುವ ಮೂಲಕ, ಕೊರೊನಾ ಸೋಂಕು ಮತ್ತಷ್ಟು ಜನರಿಗೆ ಸೋಂಕು ತಗುಲುವುದನ್ನು ತಪ್ಪಿಸಲಾಗಿತ್ತು. ಈ ವಿಚಾರವಾಗಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಅಫಿಡವಿಟ್ ಸಲ್ಲಿಸಿತ್ತು.

ಈ ಕುರಿತಂತೆ ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ, ಕೇಂದ್ರ ಸರ್ಕಾರ ಕೇರಳ-ಕರ್ನಾಟಕ ಗಡಿ ವಿವಾದಕ್ಕೆ ಅಂತ್ಯ ತರುವಂತ ಅಫಿಡವಿಟ್ ಸಲ್ಲಿಸಿದೆ. ತುರ್ತು ಸಂದರ್ಭದಲ್ಲಿ ಮಾತ್ರವೇ ಕೇರಳದಿಂದ ಕರ್ನಾಟಕಕ್ಕೆ ಬರುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬುದಾಗಿ ಕರ್ನಾಟಕ-ಕೇರಳದ ಜೊತೆಗೆ ಮಾತಕತೆ ನಡೆಸಿದ ನಂತ್ರ ಕೇಂದ್ರ ಸರ್ಕಾರ ಅಫಿಡವಿಟ್ ನಲ್ಲಿ ತಿಳಿಸಿದೆ. ಈ ಮೂಲಕ ಕೇರಳ-ಕರ್ನಾಟಕ ಗಡಿ ಬಂದ್ ವಿವಾದ ಅಂತ್ಯ ಕಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








