ನಕಲಿ ಫೇಸ್ ಬುಕ್ ಪ್ರೇಮಿ ಬಂಧನ..!

ಬೆಂಗಳೂರು

     ಫೇಸ್ ಬುಕ್‍ನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ಪ್ರೀತಿಸುವುದಾಗಿ ನಂಬಿಸಿ ಬೆದರಿಸಿ ಅತ್ಯಾಚಾರವೆಸಗಿ ಹಣ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ತುಮಕೂರು ಮೂಲದ ಅಭಿಷೇಕ್‍ ಗೌಡ ಎಂ. ಅಲಿಯಾಸ್ ಧನುಶ್ (26) ಬಂಧಿತ ಆರೋಪಿಯಾಗಿದ್ದಾನೆ
ಬಂಧಿತನಿಂದ 10.88 ಲಕ್ಷ ರೂ ಮೌಲ್ಯದ 272 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ ಕಳೆದ ಶುಕ್ರವಾರ ಸಂತ್ರಸ್ತೆಯ ತಾಯಿ ಜಯಲಕ್ಷ್ಮಿ ಎಂಬುವವರು ತಮ್ಮ 17 ವರ್ಷದ ಅಪ್ರಾಪ್ತ ಮಗಳನ್ನು ಅಭಿಷೇಕ್ ಗೌಡ ಎಂಬುವನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ನಂದಿನಿಲೇಔಟ್ ಪಾರ್ಕ್‍ನಲ್ಲಿ ಭೇಟಿ ಮಾಡಿ ಪ್ರೀತಿ ಮಾಡುವುದಾಗಿ ಪುಸಲಾಯಿಸಿ, ನಂತರ ಕಷ್ಟವಿದೆ ಎಂದು ಆಕೆಯಿಂದ ಹಣ ಮತ್ತು ಚಿನ್ನದ ಒಡವೆಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದ.

    ನಂತರ ಆಕೆಯು ಹಣ ಮತ್ತು ಚಿನ್ನದ ಒಡವೆಗಳನ್ನು ವಾಪಸ್ಸು ನೀಡುವಂತೆ ಕೇಳಿದಾಗ, ಆಕೆಯನ್ನು ಪುಸಲಾಯಿಸಿ ಕರೆದುಕೊಂದು ಹೋಗಿ ಲಾಡ್ಜೊಂದರಲ್ಲಿ ಬಲವಂತವಾಗಿ ಅತ್ಯಾಚಾರವೆಸಗಿರುವುದಾಗಿ ಆರೋಪಿಸಿ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಅತ್ಯಾಚಾರ, ಸುಲಿಗೆ, ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು.  

     ಬಳಿಕ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಆರೋಪಿಯ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ 2014 ನೇ ಸಾಲಿನ ಕೊಲೆ ಯತ್ನ ಪ್ರಕರಣದಲ್ಲಿರೌಡಿಪಟ್ಟಿಯನ್ನು ತೆರೆಯಲಾಗಿತ್ತು. ಅಲ್ಲದೇ, ಆರೋಪಿಯು ಫೇಸ್‍ಬುಕ್‍ನಲ್ಲಿ ಅಭಿಶೇಕ್‍ ಗೌಡ ಎಂಬ ಹೆಸರಿನ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು ಅಮಾಯಕ ಹೆಣ್ಣು ಮಕ್ಕಳನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಗಳಿಸಿ, ಪ್ರೀತಿಸುವಂತೆ ನಾಟಕವಾಡಿ, ದೈಹಿಕ ಸಂಪರ್ಕ ಬೆಳೆಸುವ ಹವ್ಯಾಸ ಹೊಂದಿದ್ದ ಎಂದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇನ್ನು, 2019ನೇ ಸಾಲಿನಿಂದ ಆರೋಪಿ ಅಪ್ರಾಪ್ತ ಬಾಲಕಿಯರನ್ನು ಅಭೀಶೇಕ್‍ ಗೌಡ ಎಂಬ ನಕಲಿ ಹೆಸರಿನ ಫೇಸ್‍ಬುಕ್ ಖಾತೆ ಮೂಲಕ ಪರಿಚಯ ಮಾಡಿಕೊಂಡು, ಪ್ರೀತಿ ಮಾಡುವ ನಾಟಕ ಮಾಡಿ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದ್ದು, ನಕಲಿ

    ಫೇಸ್‍ಬುಕ್ ಖಾತೆಯಾದ ಆತ ಸುಮಾರು 2,314 ಜನ ಮಹಿಳೆಯರನ್ನು ಫೇಸ್‍ಬುಕ್ ಫ್ರೆಂಡ್‌ ಮಾಡಿಕೊಂಡು ನಂತರ ಅವರಿಗೆ ಮೆಸೆಂಜರ್ ನಲ್ಲಿ ಸಂದೇಶ ಕಳುಹಿಸಿ ಅವರ ಮೊಬೈಲ್ ನಂಬರ್ ಪಡೆದು ಸುಮಾರು 50 ಮಹಿಳೆಯರಿಗೆ ಪ್ರೀತಿಸುವ ನಾಟಕವಾಡಿ, ದೈಹಿಕ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಅಲ್ಲದೇ, ಆರೋಪಿಗೆ ವೇಶ್ಯೆಯರ ಸಹವಾಸ ಮತ್ತು ಜೂಜಾಡುವ ಅಭ್ಯಾಸವಿದ್ದು, ಅಪ್ರಾಪ್ತ ಬಾಲಕಿ ಮತ್ತು ಆಕೆಯ ಮನೆಯಿಂದ ದೋಚಿಕೊಂಡು ಹೋಗಿದ್ದ ಚಿನ್ನಾಭರಣ ಮತ್ತು ಹಣವನ್ನು ತನ್ನ ದುಶ್ಚಟಗಳಿಗೆ ಬಳಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link