ಹಾವೇರಿ
ಜಿಲ್ಲೆಯ ಆಡೂರಿನ ಇಪ್ಪತ್ತೊಂದು ಜನರ ಥ್ರೋಟ್ ಸ್ವ್ಯಾಬ್ ವರದಿ ನೆಗಟಿವ್ ಎಂದು ವರದಿ ಬಂದಿದ್ದು ಜಿಲ್ಲೆಯ ಜನರು
ನಿಟ್ಟುಸಿರು ಬಿಟ್ಟಿದ್ದಾರೆ. ವಿಜಯಪುರದಲ್ಲಿ ಕೊರೊನಾ ಸೋಂಕಿತರಾಗಿರುವ ಇಬ್ಬರು ಆಡೂರಿನ ಸಂಬಂಧಿಕರ ಮನೆಗೆ ಬಂದು ಹೋಗಿದ್ದರಿಂದ ಆತಂಕ ಮನೆ ಮಾಡಿತ್ತು.
ಏಪ್ರೀಲ್ 5 ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರಿಗೆ 306 ಮತ್ತು 308 ಸಂಖ್ಯೆಯ ಸೋಂಕಿತರು ಬಂದು ಹೋಗಿದ್ದರು. ಸೋಂಕಿತರು ಬಂದು ಹೋಗಿದ್ದ ಮನೆಯವರ ಥ್ರೋಟ್ ಸ್ವ್ಯಾಬ್ ಲ್ಯಾಬ್ ಗೆ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಲ್ಯಾಬ್ ಗೆ ಆರೋಗ್ಯ ಇಲಾಖೆ ಕಳಿಸಲಾಗಿತ್ತು. ಇಪ್ಪತ್ತೊಂದು ಜನರ ಸ್ಯಾಂಪಲ್ಸ್ ಕಳಿಸಿ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿತ್ತು.ಎಲ್ಲರ ವರದಿಯೂ ನೆಗಟಿವ್ ಬಂದಿವೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ ನಾಯಕ ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ