ಹುಳಿಯಾರು
ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸಿ ವಾರ ಕಳೆದರೂ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸುವ ಮೂಲಕ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು, ಹೊಸದುರ್ಗ, ತಿಪಟೂರು, ಚಿತ್ರದುರ್ಗ ಕಡೆಗೆ ಎಂದಿನಂತೆ ಬಸ್‍ಗಳ ಸಂಚಾರ ಆರಂಭಿಸಿದ್ದರೂ ಸಹ ಸರ್ಕಾರದ ನಿಯಮದಷ್ಟು ಅಂದರೆ 30 ಸೀಟ್ ಆಗುವಷ್ಟು ಪ್ರಯಾಣಿಕರು ಹತ್ತುತ್ತಿಲ್ಲ. ಪರಿಣಾಮ ಪ್ರಯಾಣಿಕರಿಗಾಗಿ ನಿಲ್ದಾಣದಲ್ಲಿ ಕಾಯ್ದು ಹತ್ತಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಕೊರೋನಾ ಹರಡುವ ಭೀತಿಯಿಂದ ಜನರು ಬಸ್‍ಗಳಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಬಸ್ ಸಂಚಾರ ಆರಂಭವಾದ ಹಿಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ಈಗ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಭಯಭೀತರಾಗಿ ಸಂಚಾರ ಮಾಡುತ್ತಿಲ್ಲ ಎಂದು ಹೇಳಲಾಗುತ್ತದೆ.ಚಾಲಕ ಮತ್ತು ನಿರ್ವಾಹಕರಿಗೆ ಮಾಸ್ಕ್‍ಗಳನ್ನು ನೀಡಲಾಗಿದೆ. ನಿಲ್ದಾಣದಲ್ಲಿ ಬಸ್ ಹತ್ತುವ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಲಾಗುತ್ತಿದೆ. ಬಸ್‍ಗೆ 30 ಪ್ರಯಾಣಿಕರನ್ನು ಮಾತ್ರ ಹತ್ತಿಸಿ ಅಂತರ ಕಾಪಾಡಲಾಗುತ್ತಿದೆ. ಆದರೂ ಜನ ಹೆದರುತ್ತಿದ್ದು, ಬಹುತೇಕ ಬಸ್‍ಗಳು ಖಾಲಿ ಓಡಾಡುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







