ತುಮಕೂರು
ಶನಿವಾರದಂದು ಜಿಲ್ಲೆಯಲ್ಲಿ 23 ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 653ಕ್ಕೆ ಏರಿಕೆಯಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಪಾಸಿಟಿವ್ ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ತುಮಕೂರು ತಾಲ್ಲೂಕಿನಲ್ಲಿ 16, ಕುಣಿಗಲ್ ತಾಲ್ಲೂಕಿನಿಂದ 3, ಕೊರಟಗೆರೆ-2, ಚಿ.ನಾ.ಹಳ್ಳಿ ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಶನಿವಾರ 20ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇವರೂ ಸೇರಿದಂತೆ ಈವರೆಗೆ 287 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 346 ಸಕ್ರಿಯ ಪ್ರಕರಣಗಳು ಇವೆ. ಒಟ್ಟು ಮರಣ ಹೊಂದಿದವರ ಸಂಖ್ಯೆ 20. ಐಸಿಯುನಲ್ಲಿ 10 ಮಂದಿ ಪಾಸಿಟಿವ್ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು
ತುಮಕೂರು ನಗರ ಜಯನಗರ ಬಡಾವಣೆಯಲ್ಲಿ 58 ವರ್ಷದ ಮಹಿಳೆಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇವರು ಉಸಿರಾಟದ ತೊಂದರೆಯಿಂದ ಜುಲೈ 16 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಸದಾಶಿವನಗರದ 23ವರ್ಷದ ಮಹಿಳೆ ಜುಲೈ 9 ರಂದು ಗಂಟಲು ದ್ರವ ಮಾದರಿ ತೆಗೆಯಲಾಗಿದ್ದು, ಇದೀಗ ಪಾಸಿಟಿವ್ ವರದಿ ಬಂದಿರುತ್ತದೆ. ಬಟವಾಡಿಯ 30 ವರ್ಷದ ಮಹಿಳೆ, ಶಾಂತಿನಗರದ 35 ವರ್ಷದ ಪುರುಷ, ಶಿರಾಗೇಟ್ನ 55 ವರ್ಷದ ಪುರುಷ, ಕ್ಯಾತ್ಸಂದ್ರ ಸಂತೇಬೀದಿಯ 55 ವರ್ಷದ ಪುರುಷ, ಕ್ಯಾತ್ಸಂದ್ರ ಮೈದಾಳ ರಸ್ತೆಯಲ್ಲಿರುವ ಟಿವಿಎಸ್ ಲೇಔಟ್ನಲ್ಲಿ 47 ವರ್ಷದ ಮಹಿಳೆ, ಕೆಹೆಚ್ಬಿ ಕಾಲೋನಿ-ಜೈಪುರ ನಿವಾಸಿ 59 ವರ್ಷದ ಮಹಿಳೆ, ವಿನಾಯಕನಗರದ 55 ವರ್ಷದ ಮಹಿಳೆ, ವಿನಾಯಕ ನಗರದ 46 ವರ್ಷದ ಪುರುಷ, ಶಿರಾಗೇಟ್ ಎ.ಎಂ.ಪಾಳ್ಯದ 48 ವರ್ಷದ ಪುರುಷ, ಕುವೆಂಪು ನಗರದ 32 ವರ್ಷದ ಗಂಡು, ಸದಾಶಿವನಗರದ 52 ವರ್ಷದ ಗಂಡು, ಎಸ್ಎಲ್ಎನ್ ಬಡಾವಣೆಯ 50 ವರ್ಷದ ಮಹಿಳೆ, ಬಟವಾಡಿಯ 5 ವರ್ಷದ ಗಂಡು ಮಗು, ಭೀಮಸಂದ್ರದ 62 ವರ್ಷದ ಪುರುಷ ಇವರೆಲ್ಲರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕುಣಿಗಲ್
ಕುಣಿಗಲ್ ಕುವೆಂಪು ನಗರದ 48 ವರ್ಷದ ಪುರುಷನ ಗಂಟಲು ದ್ರವದ ಮಾದರಿಯನ್ನು ಜುಲೈ 17 ರಂದು ತೆಗೆದು ಪರೀಕ್ಷೆಗೆ ಒಳಪಡಿಸಲಾಗಿ ಪಾಸಿಟಿವ್ ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕದ 4 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ತೆರೆದಕುಪ್ಪೆ ಪೋಸ್ಟ್ ಸೂಳೆ ಕೊಪ್ಪದ 62 ವರ್ಷದ ಮಹಿಳೆಯು ಜುಲೈ 16 ರಂದು ತುಮಕೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದು, ಗಂಟಲು ದ್ರವ ಮಾದರಿ ಪರೀಕ್ಷಿಸಲಾಗಿ ಕೋವಿಡ್ ದೃಢಪಟ್ಟಿರುತ್ತದೆ.
ಪ್ರಾಥಮಿಕ ಸಂಪರ್ಕದ 3 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಕುಣಿಗಲ್ನ ಹುಡಸಂಜೆ ಎದುರಿನ ರಸ್ತೆಯ 55 ವರ್ಷದ ಪುರುಷನು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದು, ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಲಾಗಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 4 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಗುಬ್ಬಿ ತಾಲ್ಲೂಕು ಸೋಮಲಾಪುರದ 60 ವರ್ಷದ ಪುರುಷನಿಗೆ ಜ್ವರ, ಮೈಕೈ ನೋವು ಇದ್ದ ಕಾರಣ ಜು.16 ರಂದು ತುಮಕೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾಗ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರಟಗೆರೆ ಪಟ್ಟಣದ ಕುಂಬಾರ ರಸ್ತೆ ಮುನೇಶ್ವರ ದೇವಸ್ಥಾನದ ಬಳಿ 26 ವರ್ಷದ ಮಹಿಳೆಗೆ ಮೈಕೈ ನೋವು ಸುಸ್ತು ಉಂಟಾಗಿ ಜು.6 ರಂದು ಕೊರಟಗೆರೆ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದರು. ನಂತರ ಜಿಲ್ಲಾಸ್ಪತ್ರೆಗೆ ಕರೆತಂದು ಲ್ಯಾಬ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ದೃಢಪಟ್ಟಿರುತ್ತದೆ.
4 ಮಂದಿ ಪ್ರಾಥಮಿಕ ಸಂಪರ್ಕದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕೊರಟಗೆರೆ ಮುಖ್ಯ ರಸ್ತೆಯ 61 ವರ್ಷದ ಮಹಿಳೆಗೆ ಮೈಕೈ ನೋವು , ಸುಸ್ತು ಇದ್ದ ಕಾರಣ ಜುಲೈ 16 ರಂದು ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಮಂಡ್ಯ ಲ್ಯಾಬ್ನಲ್ಲಿ ಗಂಟಲು ದ್ರವ ಪರೀಕ್ಷಿಸಿದಾಗ ಕೋವಿಡ್ ದೃಢಪಟ್ಟಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








