ಶಂಕರಾಪುರ ಬಡಾವಣೆಯಲ್ಲಿ ನೀರಿನ ಹಾಹಾಕಾರ

ಹುಳಿಯಾರು:

     ಪಟ್ಟಣ ಪಂಚಾಯ್ತಿಯ ನಿರ್ಲಕ್ಷ್ಯದಿಂದಾಗಿ ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ಕಳೆದೆರಡು ತಿಂಗಳಿನಿಂದ ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಶಂಕರಾಪುರ ಬಡಾವಣೆಗೆ ಸಿಹಿ ಮತ್ತು ಉಪ್ಪು ನೀರು ಸರಬರಾಜಿವಿನ ಎರಡು ವ್ಯವಸ್ಥೆಯಿತ್ತು. ಇದರಲ್ಲಿ ಸಿಹಿನೀರು ಸರಬರಾಜು ಮಾಡುವ ಪೈಪ್‍ನಲ್ಲಿ ಅಕ್ರಮವಾಗಿ ನಲ್ಲಿಗಳನ್ನು ಹಾಕಿಕೊಂಡ ಪಡಿಣಾಮ ಬ್ರಾಹ್ಮಣರ ಬೀದಿಗೆ ಹನಿ ನೀರು ಬಾರದಾಗಿದೆ.

     ಇನ್ನು ಉಪ್ಪು ನೀರು ಸರಬರಾಜು ಮಾಡುವ ಪೈಪ್ ಇತ್ತೀಚೆಗೆ ಸಿಸಿ ರಸ್ತೆ ಮಾಡುವಾಗ ಹೊಡೆದಿದೆ. ಇದನ್ನು ಸರಿಪಡಿಸದ ಪರಿಣಾಮ ಇಡೀ ಶಂಕರಾಪುರ ಬಡಾವಣೆಗೆ ಉಪ್ಪು ನೀರು ಬಾರದೆ ನೀರಿನ ತಾತ್ವರ ಆರಂಭವಾಗಿದೆ. ಇಲ್ಲಿನ ನಿವಾಸಿಗಳಲ್ಲಿ ಶೇ.80 ರಷ್ಟು ಕೂಲಿಕಾರ್ಮಿಕರಾಗಿದ್ದು ಕೊರೊನಾದಿಂದಾಗಿ ಕೂಲಿನಾಲಿ ಸಿಗದೆ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂಕಷ್ಟದಲ್ಲಿ ದುಡ್ಡು ಕೊಟ್ಟು ನೀರು ಖರೀಧಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ.

    ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್‍ಗೆ ಎಷ್ಟು ಬಾರಿ ಮನವಿ ಮಾಡಿದರೂ ಸ್ಪಂಧಿಸದೆ ನಿರ್ಲಕ್ಷ್ಯಿಸಿದ್ದಾರೆ. ಇನ್ನಾದರೂ ಮೇಲಾಧಿಕಾರಿಗಳು ನೀರಿನ ಸಮಸ್ಯೆಗೆ ಸ್ಪಂಧಿಸಿ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link