ನವದೆಹಲಿ:
ನೆನ್ನೆಯಷ್ಟೇ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಗಿರೀಶ್ ಮುರ್ಮು ಅವರನ್ನು ಭಾರತದ ನೂತನ ಮಹಾಲೆಕ್ಕ ಪರಿಶೋಧಕ ಹಾಗೂ ಮಹಾಲೇಖಪಾಲ (ಸಿಎಜಿ) ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಆ.09 ರಂದು ಜಿ.ಸಿ ಮುರ್ಮು ಸಿಎಜಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ ಅವರಿಗೆ 65 ವರ್ಷ ಪೂರ್ಣಗೊಳ್ಳಲಿದ್ದು, ಈ ವಾರ ನಿವೃತ್ತರಾಗಲಿದ್ದಾರೆ. ಸಿಎಜಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಾಗಿಯೇ ಜಿ.ಸಿ ಮುರ್ಮು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








