ಆಟೋ ಪರವಾನಗಿ ನೀಡುವುದನ್ನು ನಿಲ್ಲಿಸಿದ ಸಾರಿಗೆ ಇಲಾಖೆ..!

ಬೆಂಗಳೂರು:

     ಸಾರಿಗೆ ಇಲಾಖೆಯು ಹೊಸ ಆಟೋಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ, ಬದಲಿಗೆ ಇರುವ ಆಟೋಗಳಿಗೆ ಇ- ಪರ್ಮಿಟ್ ನೀಡುವತ್ತ ಗಮನ ಹರಿಸಿದೆ, ಇತ್ತೀಚೆಗೆ ಡಿಸಿಎಂ ಲಕ್ಷ್ಮಣ ಸವದಿ ಸಾರಿಗೆ ಇಲಾಖೆಗೆ ನೋಟಿಸ್ ನೀಡಿದ್ದು, ವಾಹನಗಳ ಇ-ಪರ್ಮಿಟ್ ನೀಡುವತ್ತ ಗಮನ ಕೇಂದ್ರೀಕರಿಸಬೇಕೆಂದು ಸೂಚಿಸಿದ್ದಾರೆ.

ನಿಯಮಗಳ ಪ್ರಕಾರ ಪ್ರತಿ ವರ್ಷ ರಾಜ್ಯ ಸರ್ಕಾರ 5 ಸಾವಿರ ಹೊಸ ಆಟೋಗಳಿಗೆ  ಪರವಾನಗಿ ನೀಡಬೇಕು, ಆದರೆ ಈ ವರ್ಷ ಕೇವಲ 2 ಸಾವಿರ ಆಟೋಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ.

      ಆಟೋರಿಕ್ಷಾಗಳಿಗಾಗಿ ನಮ್ಮ ಆರ್‌ಟಿಒ ಕಚೇರಿಯಲ್ಲಿ ನಾವು ಕಡಿಮೆ ಸಿಬ್ಬಂದಿ ಹೊಂದಿದ್ದೇವೆ. ಸಚಿವರು ಅನುಮತಿ ನೀಡಿದ ಮೇಲೆ ನಾವು ಈ ವಿಭಾಗಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುತ್ತೇವೆ ಸಾರಿಗೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ. ಕರ್ನಾಟಕದಲ್ಲಿ 2.30 ಲಕ್ಷ ಆಟೋ ರಿಕ್ಷಾಗಳಿವೆ.

    ಆಟೋಗಳಿಗೆ ಇ ಪರ್ಮಿಟ್ ನೀಡಲು 5 ವೆಬ್ ಕ್ಯಾಮೆರಾ  ಮತ್ತು ಒಂದು ಅಲ್ಟ್ರಾ ಮಾಡೆಲ್ ಪ್ರಿಂಟರ್ ಅಳವಡಿಸಿಕೊಂಡು ಇ ಪರ್ಮಿಟ್ ನೀಡಲು ಬಳಸಿಕೊಳ್ಳುತ್ತಿದ್ದೇವೆ ಎಂದು ಹೆಚ್ಚುವರಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link