ಬೆಂಗಳೂರು
ಕಾಟನ್ ಪೇಟೆಯಲ್ಲಿ ದಾಖಲಾದ ಮಾದಕ ಜಾಲದ ನಂಟು ಆರೋಪದಡಿ ಬಂಧಿತನಾದ ಆರೋಪಿ ವೀರೇನ್ ಖನ್ನಾಗೆ ಸುಳ್ಳು ಪತ್ತೆ ಪರೀಕ್ಷೆ [ ನಾರ್ಕೋ ಅನಾಲಿಸಸ್ ] ನಡೆಸಲು ಸಿಸಿಬಿಗೆ ಅನುಮತಿ ದೊರಕಿದೆ.ಇನ್ನು, ಎರಡು ದಿನಗಳಲ್ಲಿ ವೀರೇನ್ ಖನ್ನಾಗೆ ನಾರ್ಕೋ ಪರೀಕ್ಷೆ ನಡೆಸಲು ಸಿಸಿಬಿ ಸಿದ್ಧತೆ ನಡೆಸಿದೆ.
ಪ್ರಕರಣದ ಎ-3 ಆರೋಪಿಯಾಗಿರುವ ಖನ್ನಾ, ಸದ್ಯ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಬಾಡಿ ವಾರಂಟ್ ಪಡೆದು ಸಿಸಿಬಿ ಪೊಲೀಸರು ಆತನನ್ನು ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ.ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಎಫ್ಎಸ್ಎಲ್ ನಲ್ಲಿ ವೀರೇನ್ನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೀರೇನ್ ಮೊಬೈಲ್ ರಿಟ್ರೀವ್ ವೇಳೆ ಸಿಸಿಬಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ವೀರೇನ್ಗೆ ಬರೊಬ್ಬರಿ 262 ಡ್ರಗ್ಸ್ಗಳ ಮಾಹಿತಿ ಗೊತ್ತಿದೆ ಎಂಬುದು ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ಸಾಬೀತಾಗಿದೆ ಎನ್ನಲಾಗಿದೆ.
ವಿವಿಧ ಬಗೆಯ ಡ್ರಗ್ಸ್ಗಳನ್ನು ಹೇಗೆ ಸೇವನೆ ಮಾಡಬೇಕು ಹಾಗೂ ಅದರ ಪರಿಣಾನಗಳೇನು ಎಂಬ ಕುರಿತಾದ ಭಾವಚಿತ್ರವೊಂದು ಆತನ ಮೊಬೈಲ್ನಲ್ಲಿ ಲಭ್ಯವಾಗಿದೆ ಎನ್ನಲಾಗುತ್ತಿದೆ. ಸದ್ಯ ಪ್ರಕರಣದ ತನಿಖೆಯನ್ನು ಸಿಸಿಬಿ ಪೆÇಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/09/viren-khanna.gif)