ಮಲ್ಲೇಶ್ವರದಲ್ಲಿ ಮಲಬಾರ್ ಗೋಲ್ಡ್ ಹೊಸ ಮಳಿಗೆ ಉದ್ಘಾಟನೆ

ಬೆಂಗಳೂರು :

      ಮಲಬಾರ್ ಗೋಲ್ಡ್ & ಡೈಮಂಡ್ಸ್, 9ನೇ ಜನವರಿ, 2021ರಂದು ಬೆಂಗಳೂರಿನ
ಮಲ್ಲೇಶ್ವರದಲ್ಲಿ ಹೊಸ ಮಳಿಗೆಯನ್ನು ಉದ್ಘಾಟಿಸಿದೆ. ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥ್
ನಾರಾಯಣ ಅವರು ಸಂಪಿಗೆ ರಸ್ತೆಯಲ್ಲಿರುವ ಈ ಮಳಿಗೆಯನ್ನು ಉದ್ಘಾಟಿಸಿದರು.

      6400 ಚದರ ಅಡಿ ವಿಸ್ತೀರ್ಣದಲ್ಲಿ ಕ್ರಿಯಾಶೀಲವಾಗಿ ವಿನ್ಯಾಸಗೊಂಡಿರುವ ಈ ಮಳಿಗೆಯು ಅದ್ಭುತವಾದ
ಶಾಪಿಂಗ್ ಅನುಕೂಲ ಕಲ್ಪಿಸುತ್ತದೆಯಲ್ಲದೆ, ಅತ್ಯುತ್ತಮ ಮಾರಾಟ ನಂತರದ ಅನುಭವ ಒದಗಿಸುವಂತಿದೆ.
ವೈವಿಧ್ಯಮಯ ವಿನ್ಯಾಸ ಹಾಗೂ ಗುಣಮಟ್ಟದ ಖಾತರಿಗೆ ಈ ಬ್ರಾಂಡ್ ಹೆಸರುವಾಸಿಯಾಗಿದ್ದು ಆಭರಣಗಳ
ಯೋಜನೆಯ ವೇಳೆ ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ಈ ಮಳಿಗೆಯು ಚಿನ್ನ, ವಜ್ರ ಮತ್ತು
ಪ್ಲಾಟಿನಂನಿಂದ ತಯಾರಿಸಲಾದ ಮದುಮಗಳು, ಸಾಂಪ್ರದಾಯಿಕ ಮತ್ತು ನಿತ್ಯ ಧರಿಸುವ ಆಭರಣಗಳ
ಉತ್ತಮ ಸಂಗ್ರಹವನ್ನು ಹೊಂದಿದೆ.

       ಇದರೊಂದಿಗೆ, ಈ ಮಳಿಗೆಯು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು
ಅಳವಡಿಸಿಕೊಳ್ಳುವ ಮೂಲಕ ಸರ್ಕಾರ ವಿಧಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು
ಗ್ರಾಹಕರಿಗೆ ಒಂದು ಸುರಕ್ಷಿತ ಮತ್ತು ನೈರ್ಮಲ್ಯಯುತ ರಿಟೈಲ್ ಪರಿಸರವನ್ನು ಒದಗಿಸುತ್ತದೆ.

    “ಮಲ್ಲೇಶ್ವರದಲ್ಲಿ ಹೊಸ ಶೋರೂಮ್‍ನ ಉದ್ಘಾಟನೆಯೊಂದಿಗೆ, ಕರ್ನಾಟಕದಲ್ಲಿ ಮಲಬಾರ್ ಗೋಲ್ಡ್ &
ಡೈಮಂಡ್ಸ್‍ನ ಅಸ್ತಿತ್ವವು  ಮಲ್ಲೇಶ್ವರ ಹಾಗೂ ಬೆಂಗಳೂರಿನ ನಮ್ಮ ಗ್ರಾಹಕರಿಗೆ ನಮ್ಮ ಬದ್ಧತೆಯನ್ನು ಈಡೇರಿಸುವತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ. ಶೋರೂಮ್ ಸಂಖ್ಯೆ ಮತ್ತು ಮಾರಾಟದ ನಿಟ್ಟಿನಲ್ಲಿ ನಾವು ವಿಶ್ವದ ನಂಬರ್ ಒನ್ ಚಿನ್ನಾಭರಣ ರಿಟೈಲ್ ಬ್ರಾಂಡ್ ಆಗುವ ನಿಟ್ಟಿನಲ್ಲಿ ನಮ್ಮ ರಿಟೈಲ್ ವಿಸ್ತರಣೆಯು ನಮ್ಮ ಕಾರ್ಯತಂತ್ರವಾಗಿದೆ” ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂಪಿ
ಅಹಮದ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link