ಚಿಕ್ಕನಾಯಕನಹಳ್ಳಿ :

ಈ ಹಿಂದಿನ ಎರಡು ವರ್ಷಗಳಿಂದ ಗಣರಾಜ್ಯೋತ್ಸವ ಆಹ್ವಾನ ಪತ್ರಿಕೆಯಲ್ಲಿ ಪುರಸಭಾ ಅಧ್ಯಕ್ಷರ ಹೆಸರು ಇರಲಿಲ್ಲ ಹಾಗೂ ನಾನು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಇದ್ದಿದ್ದರಿಂದ ಪುರಸಭಾಧ್ಯಕ್ಷರ ಹೆಸರನ್ನು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಮನಿಸಲು ಸಾಧ್ಯವಾಗಲಿಲ್ಲ, ನಾನು ಜಾತ್ಯಾತೀತವಾಗಿ ಕೆಲಸ ಮಾಡುತ್ತಿದ್ದೇನೆ ನಮ್ಮಿಂದ ನೋವಾಗದ್ದರೆ ಕ್ಷಮೆ ಇರಲಿ ಎಂದು ತಹಶೀಲ್ದಾರ್ ತೇಜಸ್ವಿನಿ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಮಾತನಾಡಿ, ಪುರಸಭಾ ಅಧ್ಯಕ್ಷರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ವಿಷಯದಲ್ಲಿ ಎದ್ದಿದ್ದ ವಿವಾದಕ್ಕೆ ತೆರೆ ಎಳೆದರು.
ಸಭೆಯಲ್ಲಿ ದಲಿತ ಮುಖಂಡರುಗಳು ಮಾತನಾಡಿ, ಪರಿಶಿಷ್ಠ ಜಾತಿಯವರು ತಾಲ್ಲೂಕು ಕಛೇರಿಗೆ ಬಂದರೆ ತಹಶೀಲ್ದಾರರು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ, ನಾವು ಪರಿಶಿಷ್ಟ ಜಾತಿಯವರಾದರೂ ಸಹ ಸಮುದಾಯದಲ್ಲಿ ಒಳ್ಳೆ ಭಾವನೆ ಇದೆ, ಇನ್ನು ಮುಂದಾದರೂ ಪರಿಶಿಷ್ಟ ಜಾತಿಯವರು ಕೆಲಸದ ನಿಮಿತ್ತ ಬಂದರೆ ದಯಮಾಡಿ ಅವರ ಅಹವಾಲನ್ನು ಸ್ವೀಕರಿಸಿ, ಕಾನೂನಡಿಯಲ್ಲಿ ಇರುವ ಕೆಲಸಗಳನ್ನು ಹೆಚ್ಚು ಓಡಾಡಿಸಿದೆ ಮಾಡಿಕೊಡಿ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಬೇವಿನಹಳ್ಳಿ ಚನ್ನಬಸವಯ್ಯ, ಜೆ.ಸಿ.ಪುರದ ಗೋವಿಂದಪ್ಪ, ಕಂಟಲಗೆರೆ ರಂಗಸ್ವಾಮಿ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







