ಚಿಕ್ಕನಾಯಕನಹಳ್ಳಿ : ವಾರದ ಸಂತೆ ನಡೆಸಲು ಒತ್ತಾಯಿಸಿ ತಹಶೀಲ್ದಾರ್‍’ಗೆ ಮನವಿ

ಚಿಕ್ಕನಾಯಕನಹಳ್ಳಿ :

      ಕೋವಿಡ್-19ರ 2ನೇ ಅಲೆಯ ಹಿನ್ನೆಲೆಯಲ್ಲಿ ವಾರದ ಸಂತೆಯನ್ನು ಸ್ಥಗಿತಗೊಳಿಸಿದರೆ ದಿನನಿತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಬದುಕು ದುರ್ಬರವಾಗಲಿದೆ ಹಾಗಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಸಂತೆ ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಪಟ್ಟಣದ ಹಲವು ಸಂಘಟನೆಗಳು ತಹಶೀಲ್ದಾರ್ ತೇಜಸ್ವಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

      ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ನಡೆಯುವ ವಾರದ ಸಂತೆಯನ್ನು ನಿಲ್ಲಿಸುವಂತೆ ಮೌಖಿಕವಾಗಿ ಆದೇಶ ನೀಡಲಾಗಿದೆ, ಈಗಾಗಲೇ ಒಂದು ವರ್ಷದಿಂದ ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಪರಿಣಾಮದಿಂದ ಸಾಮಾನ್ಯ ವರ್ಗದ ಜನರ ಬದುಕು ದುರ್ಬರವಾಗಿದೆ, ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೇರಿದೆ ಅಲ್ಲದೆ, ಗ್ರಾಮೀಣ ಜನರಿಗೆ ವಾರದ ಸಂತೆಯಲ್ಲಿ ಸಿಗುವ ವಸ್ತುಗಳಿಂದ ದಿನನಿತ್ಯದ ಬದುಕು ಸಾಗುತ್ತಿದೆ, ಈ ಸಂತೆಯಿಂದಲೇ ಸಣ್ಣ ಪುಟ್ಟ ವ್ಯಾಪಾರಗಳ ಮೂಲಕ ದಿನದೂಡುತ್ತಿರುವ ಜನರ ಬದುಕು ಇತ್ತೀಚೆಗೆ ಸುಧಾರಿಸುತ್ತಿದೆ, ಈಗ ಮತ್ತೊಮ್ಮೆ ಸಂತೆಯನ್ನು ನಡೆಸಲು ಅನುಮತಿ ನೀಡದೆ ನಿಲ್ಲಿಸಿದರೆ ಅನೇಕ ಜನರ ಬದುಕು ಬೀದಿಗೆ ಬಂದಂತಾಗುತ್ತದೆ ಎಂದಿರುವ ಅವರು, ರಾಜಕೀಯ ಪಕ್ಷಗಳ ಚುನಾವಣೆಗೆ ಇಲ್ಲದ ಕೋವಿಡ್ ನಿಯಮಾವಳಿಗಳು ಸಾಮಾನ್ಯ ಜನಜೀವನಕ್ಕೆ, ಸಾಂಸ್ಕೃತಿಕ ವಲಯಕ್ಕೆ ಮಾತ್ರ ಅನ್ವಯವಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ, ಹಾಗಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಸಂತೆ ನಡೆಸಲು ಅನುಮತಿ ನೀಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link