ತಿಪಟೂರು :
ಯುಗಾದಿ ವರ್ಷಾರಂಭದಲ್ಲೇ ಮೊದಲ ಮಳೆಗೆ ಆಗಮನ ವಾಗಿದ್ದು ರೈತರಿಗೆ ಖುಷಿ ತಂದಿದೆ ತಾಲ್ಲೂಕಿನ ಕಸಬಾ-24 ಮಿ.ಮಿ, ಹೊನ್ನವಳ್ಳಿ 8.0ಮಿ.ಮಿ. ಕಿಬ್ಬನಹಳ್ಳಿ 28ಮಿ.ಮಿ. ನೊಣವಿನಕೆರೆ-10ಮಿ.ಮಿ ಮಳೆಬಿದ್ದಿದ್ದು ಭೂಮಿ ತಂಪಾಗಿದ್ದು ರೈತರಚಟುವಟಿಕೆ ಆರಂಭಿಸಲು ಸೂಕ್ತ ಕಾಲವಾಗಿದೆ ಎಂದು ಸಹಾಯಕ ಕೃಷಿ ನಿದೇಶಕ ಡಾ|| ಎನ್.ಕೆಂಗೇಗೌಡ ತಿಳಿಸಿದರು.
ತಾಲ್ಲೂಕಿನ ವಾಸು ದೇವರಹಳ್ಳಿ ಗ್ರಾಮದ ರೈತ ಯೋಗಿಶ್ತಾಕಿನಲ್ಲಿಗುರುವಾರಬಿದ್ದ ಹದ ಮಳೆಗೆ ಕೈಗೊಳ್ಳುತ್ತಿರುವ ಕೃಷಿ ಚಟುವಟಿಕೆ ವೀಕ್ಷಿಸಿ ತಿಳಿಸಿದ ಅವರು ವಾಡಿಕೆಯಂತೆ ಪೂರ್ವ ಮುಂಗಾರು ಬೆಳೆಗಳಾದ ಹೆಸರು ಅಲಸಂದೆ ಉದ್ದು ಹಾಗು ಎಳ್ಳು ಬಿತ್ತನೆಗೆ ಪೂರ್ವ ತಯಾರಿಯಾಗಿ ಮಾಗಿ ಉಳುಮೆ ಕೈಗೊಳ್ಳಬೇಕಿದೆ ಮುಂಗಾರು ಬೆಳೆ ಕಟಾವಾಗಿ ಭೂಮಿಯಲ್ಲಿ ತೇವಾಂಶವಿದ್ದಾಗ ಮುಂಗಾರು ಮಳೆ ಬಿದ್ದತಕ್ಷಣ ಉಳುಮೆ ಮಾಡುವುದರಿಂದ ಹಲವು ಪ್ರಯೋಜನಗಳಿವೆ ಮಾಗಿ ಮಾಡುವುದರಿಂದ ಮಳೆ ನೀರು ಸ್ಥಳದಲ್ಲೆ ಇಂಗಿ ಹೆಚ್ಚು ಕಾಲ ತೇವಾಂಶ ಉಳಿದು ಮುಂದಿನ ಬೇಸಾಯ ಕೈಗೊಳ್ಳಲು ಹಾಗು ಅಂತರ್ರ್ಜಲಾ ಮಟ್ಟ ಸುಧಾರಿಸಲು ಸಾಧ್ಯವಾಗುತ್ತದಲ್ಲದೆ ಭೂಮಿಯಲ್ಲಿರುವ ಕಳೆ ಬೀಜ ಕೋಶಾವ್ಯಸ್ಥೆಯಲ್ಲಿರುವ ಕೀಟಗಳು ರೋಗಕಾರಕ ಶೀಲಿಂದ್ರಗಳನ್ನು ಹೊರ ಹಾಕಿದಾಗ ಗಾಳಿ ಬಿಸಿಲು ಹಕ್ಕಿಗಳಿಂದ ನಾಶವಾಗುತ್ತವೆ ಬಹು ಮುಖ್ಯವಾಗಿ ಭೂಮಿಯ ಮೇಲೆ ಬಿದ್ದಿರುವ ಎಲೆ ಕಸ-ಕಡ್ಡಿ ಕೂಳೆ ಇತ್ಯಾದಿಗಳು ಭೂಮಿಯೊಳಗೆ ಸೇರಿ ಕೊಳೆತು ಮಣ್ಣಿನ ಸಾವಯವ ಇಂಗಾಲ ಹೆಚ್ಚಿ ಫಲವತ್ತತೆ ವೃಧ್ದಿಯಾಗುತ್ತದೆ ಎಂದರು ರೈತರು ಮಾಗಿ ಉಳುಮೆ ಪೂರ್ವದಲ್ಲಿ ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ಇದ್ದಲ್ಲಿ ಜಮೀನಿಗೆ ಹಾಕಿ ನಂತರ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿ ಚೆನ್ನಾಗಿ ಬೆರೆತು ಬೆಳೆಗಳಿಗೆ ಪೋಷಕಾಂಶಗಳು ಸುಲಭವಾಗಿ ಲಬಿಸುತ್ತವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ