ಮಧುಗಿರಿ :

ಗ್ರಾಮಕ್ಕೆ ರುದ್ರ ಭೂಮಿ ಇಲ್ಲದೆ ಇರುವುದರಿಂದ ದಲಿತ ಸಮುದಾಯಕ್ಕೆ ಸೇರಿದ ವೃದ್ದ ಮಹಿಳೆಯೊಬ್ಬರ ಮೃತ ದೇಹವನ್ನು ನದಿಯಲ್ಲಿ ಸಂಸ್ಕಾರ ಮಾಡಿರುವ ಘಟನೆ ನಡೆದಿದೆ.
ವೃದ್ದ ದಲಿತ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಸ್ಥಳವಿಲ್ಲದ ಕಾರಣ ಸುವರ್ಣಮುಖಿ ನದಿಯ ಹಳ್ಳದಲ್ಲೆ ಶವಸಂಸ್ಕಾರ ಮಾಡಲಾಯಿತು.
ಜಿಲ್ಲಾಧಿಕಾರಿಗಳು, ಉಪ ವಿಭಾಗ ಅಧಿಕಾರಿಗಳು ದಲಿತ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ರುದ್ರ ಭೂಮಿ ಮಂಜೂರು ಮಾಡಿದ್ದೇವೆ ಎಂದು ಸಭೆಗಳಲ್ಲಿ ಕೇವಲ ಅಂಕಿ-ಅಂಶ ತೋರಿಸುತ್ತಾರೆ.
ರುದ್ರಭೂಮಿಯನ್ನು ಮಂಜೂರು ಮಾಡಿರುವುದಾದರೆ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಸಿಡದರಗಲ್ಲು ಗ್ರಾಮದಲ್ಲಿ ನೀರು ಹರಿಯುವ ಸುವರ್ಣ ಮುಖಿ ನದಿಯಲ್ಲಿ ದಲಿತರು ಶವವನ್ನು ಹೂತಿರುವುದನ್ನು ನೋಡಿದರೆ ರುದ್ರಭೂಮಿಗೆ ಸ್ಥಳ ಮೀಸಲಿಟ್ಟಿದ್ದೇವೆಂಬುದು ಸುಳ್ಳು ಎಂಬ ಆರೋಪಗಳು ಸ್ಥಳೀಯ ದಲಿತ ಮುಖಂಡರುಗಳಿಂದ ಕೇಳಿ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








