ಚಿಕ್ಕಬಳ್ಳಾಪುರ:

ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನಂದಿಬೆಟ್ಟದಲ್ಲಿ ಪ್ರಪಾತಕ್ಕೆ ಬಿದ್ದಿದ್ದ ಯುವಕನನ್ನು ವಾಯುಸೇನೆ ಹೆಲಿಕಾಪ್ಟರ್ ಮೂಲಕ ರಕ್ಷಿಸಿದ್ದಾರೆ.
ದೆಹಲಿ ಮೂಲದ 19 ವರ್ಷದ ವಿದ್ಯಾರ್ಥಿ ನಿಶಾಂಕ್ ಕೌಲ್ ಎಂಬಾತ ಬ್ರಹ್ಮಗಿರಿಗೆ ಟ್ರಕ್ಕಿಂಗ್ ಮಾಡಲು ಬಂದಿದ್ದ.
ಆದರೆ ಜಾರಿ 300 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದ. ಆತನ ರಕ್ಷಣೆ ಮಾಡಲು ಪೊಲೀಸರು, ಅಗ್ನಿಶಾಮಕ, ಎಸ್ ಡಿಆರ್‌ಎಫ್ ಮತ್ತು ಜಿಲ್ಲಾಡಳಿವು ಸತತ ಪ್ರಯತ್ನಗಳನ್ನು ನಡೆಸಿತ್ತು.
ಅಂತಿಮವಾಗಿ ವಾಯುಸೇನೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು ಹೆಲಿಕಾಪ್ಟರ್ ಮೂಲಕ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ನಿಶಾಂಕ್ ಕೌಲ್ ಪ್ರಪಾತಕ್ಕೆ ಬಿದ್ದಿದ್ದು ಅವರನ್ನು ರಕ್ಷಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ.
ಯುವಕ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸಿ, ಲೋಕೇನ್ ಅನ್ನು ಹಂಚಿಕೊಂಡಿದ್ದನು. ಮೊದಲಿಗೆ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್‌ನೊಂದಿಗೆ ಪೊಲೀಸ್ ತಂಡವು ರಕ್ಷಣೆಗೆ ಹೋದರು. ಆದರೆ ಸಾಧ್ಯವಾಗಲಿಲ್ಲ. ನಂತರ, ನಾವು ಐಎಎಫ್ ಅನ್ನು ಸಂಪರ್ಕಿಸಿದ್ದೇವು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








