ಉಕ್ರೇನ್ – ರಷ್ಯಾದ:
ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ತೈಲ ಆಮದುಗಳ ಮೇಲೆ ನಿಷೇಧವನ್ನು ಹೇರಿರುವುದು ದುರಂತ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೋವಾಕ್ ಎಚ್ಚರಿಕೆ ನೀಡಿದ್ದಾರೆ.
ರಷ್ಯಾದ ತೈಲಗಳ ಮೇಲಿನ ನಿಷೇಧವು ಜಾಗತಿಕ ಮಾರುಕಟ್ಟೆಗೆ ದುರಂತದ ಪರಿಣಾಮಕ್ಕೆ ಕಾರಣವಾಗುತ್ತದೆ. ಅನಿರೀಕ್ಷಿತ ಬೆಲೆ ಏರಿಕೆ ಉಂಟಾಗುತ್ತದೆ. ಪ್ರತಿ ಬ್ಯಾರಲ್ಗೆ 300 ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್ ವಾರ್ನಿಂಗ್ ನೀಡಿದ್ದಾರೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ರಷ್ಯಾದ ತೈಲವನ್ನು ತ್ವರಿತವಾಗಿ ಬದಲಾಯಿಸುವುದು ಅಸಾಧ್ಯವೆಂದು ನೋವಾಕ್ ಹೇಳಿದ್ದಾರೆ.
ಇದು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ ಇದು ಯುರೋಪಿಯನ್ ಗ್ರಾಹಕರ ಪಾಲಿಗೆ ದುಬಾರಿಯೆನಿಸಲಿದೆ ಎಂದು ಹೇಳಿದರು.
ರಷ್ಯಾದ ತೈಲದ ದರದ ಮೇಲಿನ ನಿರ್ಬಂಧದ ಮಾತುಕತೆಗಳು ಅಸ್ಥಿರತೆಯನ್ನು ಸೃಷ್ಟಿಸುತ್ತದೆ ಹಾಗೂ ಗ್ರಾಹಕರಿಗೆ ಇದು ಹಾನಿಯನ್ನು ಉಂಟು ಮಾಡಬಹುದು ಎಂದು ನೋವಾಕ್ ಅಂದಾಜಿಸಿದ್ದಾರೆ.
ನಾರ್ಡ್ ಸ್ಟ್ರೀಮ್ 2 ಪೈಪ್ಲೈನ್ ಯೋಜನೆಯ ಸ್ಥಗಿತಕ್ಕೆ ಪ್ರತೀಕಾರವಾಗಿ, ರಷ್ಯಾವು ನಾರ್ಡ್ ಸ್ಟ್ರೀಮ್ 1 ಪೈಪ್ಲೈನ್ ಮೂಲಕ ಸರಬರಾಜುಗಳನ್ನು ನಿಲ್ಲಿಸಬಹುದು .ಇಲ್ಲಿಯವರೆಗೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ನೊವಾಕ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ