ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ

ತುಮಕೂರು:

ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಬಳಿಯಲ್ಲಿ ಖಾಸಗಿ ಬಸ್ ಅಪಘಾತಗೊಂಡು ಭೀಕರ ದುರ್ಘಟನೆ ನಂತ್ರ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ದುರಂತದ ಬಳಿಕ 7 ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರವನ್ನು, ಈ ಮಾರ್ಗದಲ್ಲಿ ಆರಂಭಿಸಿದೆ.

ಹೌದು.. ಪಳವಳ್ಳಿ ಕಟ್ಟೆ ಬಳಿಯಲ್ಲಿನ ಖಾಸಗಿ ಬಸ್ ಅಪಘಾತದ ಬಳಿಕ, 24 ಗಂಟೆಯೊಳಗೆ ಕೆ ಎಸ್ ಆರ್ ಟಿ ಸಿ ಚುರುಕುಗೊಂಡಿದ್ದು, ವೈ ಎನ್ ಹೊಸಕೋಟೆ ಟು ಪಾವಗಡ ಮಾರ್ಗಕ್ಕೆ ಭಾನುವಾರದಿಂದ ಒಂದಲ್ಲ ಎರಡಲ್ಲ 7 ಬಸ್ ಗಳನ್ನು ಸಂಚಾರಕ್ಕಾಗಿ ನಿಯೋಜಿಸಲಾಗಿದೆ.

ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್ ಅಗತ್ಯ

ಈ ಘಟನೆಯ ಬಳಿಕ ತತ್ ಕ್ಷಣವೇ ಸ್ಪಂದಿಸಿರುವಂತ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆಗೆ ಕ್ರಮ ಕೈಗೊಂಡು, ಮತ್ತೆ ಮುಂದೆ ಯಾವುದೇ ರೀತಿಯಾದಂತ, ಖಾಸಗಿ ಬಸ್ ಅಪಘಾತದಂತ ದುರಂತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಸ್ ಅಪಘಾತಕ್ಕೂ ಮುನ್ನಾದ ದೃಶ್ಯಾವಳಿ ಬುಡರೆಡ್ಡಿ ಹಳ್ಳಿ ಬಳಿಯಲ್ಲಿನ ಟೋಲ್ ಬಳಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆ ದೃಶ್ಯದಲ್ಲಿ ಎದೆ ನಡುಗಿಸುವಂತಿವೆ. ಸಂತೆಗೆ ಕುರಿಗಳನ್ನು ತುಂಬಿಕೊಂಡು ಹೋಗುವಂತೆ, ಯಮದೂತ ಬಸ್, ಜನರನ್ನು ತುಂಬಿಸಿಕೊಂಡಿರುವುದು ದೃಶ್ಯಾವಳಿಯಲ್ಲಿ ಕಂಡು ಬಂದಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link