ಬೆಂಗಳೂರು:

ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿ
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಗ್ರಹಪೂರ್ವಕ ಪರಿಹಾರಕ್ಕೆ ಇದೀಗ ಮುಕ್ತಿ ಸಿಗುತ್ತಿದೆ. ಅಪರಿಚಿತ ವಾಹನಗಳಿಂದಾಗುವ (ಹಿಟ್ ಆ್ಯಂಡ್ ರನ್) ಅಪಘಾತಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಅಪಘಾತ ಮಾಡಿದ ವಾಹನ, ಆರೋಪಿ ಚಾಲಕನ ಪತ್ತೆ ಹೆಚ್ಚುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆಂಬ ಆರೋಪಗಳ ಬೆನ್ನಲ್ಲೇ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮೃತರ ಕುಟುಂಬ ಹಾಗೂ ಗಾಯಗೊಂಡವರಿಗೆ ಕೊಡುವ ಆರ್ಥಿಕ ಪರಿಹಾರದ ಮೊತ್ತವನ್ನು 50 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಗಾಯಗೊಂಡವರಿಗೆ 12500 ರೂ. ಪರಿಹಾರ ಮೊತ್ತ ಕೊಡಲಾಗುತ್ತಿದೆ. ಈ ಮೊತ್ತ 50 ಸಾವಿರ ರೂ.ಗಳಿಗೆ ಏರಿಕೆಯಾಗಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶದಂತೆ ಡಿಜಿಪಿ ಪ್ರವೀಣ್ ಸೂದ್ ಅವರು ಈ ಬಗ್ಗೆ ಮಾ.17 ರಂದು ಲಿಖಿತ ಆದೇಶ ಹೊರಡಿಸಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಮೃತವ್ಯಕ್ತಿ ಹಾಗೂ ಗಾಯಾಳುಗಳಿಗೆ ಪರಿಹಾರ ನೀಡಲು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ತನ್ನದೇ ಆದ ನಿಯಮಗಳಿವೆ.
ಸಾವಿನಲ್ಲೂ ಸಾರ್ಥಕತೆ- ಡಾಕ್ಟರ್ ಆಗಬೇಕೆಂದು ಹಂಬಲಿಸಿದ್ದ ನವೀನ್ ಮೃತದೇಹ ವಿದ್ಯಾರ್ಥಿಗಳ ಅಧ್ಯಯನಕ್ಕೆ
ಅಪಘಾತ ಮಾಡಿದ ವಾಹನಕ್ಕೆ ವಿಮೆ ಇರುವುದು ಸೇರಿದಂತೆ ಕಾನೂನಿನ ಇತಿಮಿತಿಯಲ್ಲಿ ಪರಿಹಾರವನ್ನು ನ್ಯಾಯಾಲಯಗಳು ಘೋಷಿಸುತ್ತವೆ. ವಿಮಾ ಕಂಪನಿಗಳು ಈ ಪರಿಹಾರದ ಮೊತ್ತ ನೀಡುತ್ತವೆ. ಆದರೆ ಅಪಘಾತವೆಸಗಿ ಪರಾರಿಯಾಗುವ ವಾಹನಗಳ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪರಿಹಾರ ಪಡೆಯಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಿಗಾಗಿಯೇ ಸರ್ಕಾರ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಒಂದಷ್ಟು ಪರಿಹಾರ ನೀಡುವ ಅವಕಾಶ ಕಲ್ಪಿಸಿದೆ.
ಏನಿದು ನಿಯಮ?
ಪತ್ತೆಯಾಗದ ಪ್ರಕರಣವೆಂದು ಪೊಲೀಸರು ನ್ಯಾಯಾಲಯಕ್ಕೆ `ಸಿ’ ರಿಪೋರ್ಟ್ ಸಲ್ಲಿಸಿದ ಕೇಸ್ಗಳಿಗೆ ಮಾತ್ರ ಪರಿಹಾರ ಅನ್ವಯಿಸಲಿದೆ. ಅವಲಂಬಿತ ಕುಟುಂಬ ಸದಸ್ಯರಿಗೆ ಪರಿಹಾರದ ಮೊತ್ತ ವಿತರಣೆ ವಿಳಂಬವಾಗುವುದಾದರೆ ಅಪಘಾತ ನಿಧಿಯಿಂದ ತ್ವರಿತವಾಗಿ ಪರಿಹಾರ ಮೊತ್ತ ಪಾವತಿಸಬೇಕು. ಸೊಲೋಟಿಯಂ ಯೋಜನೆಯಡಿ ಪರಿಹಾರದ ಮೊತ್ತ ಮಂಜೂರಾದ ನಂತರ ಈ ಮೊದಲು ಅಪಘಾತ ನಿಧಿಯಿಂದ ನೀಡಲಾಗಿದ್ದ ಮೊತ್ತ ಕಡಿತಗೊಳಿಸಿಕೊಂಡು ಉಳಿದ ಹಣವನ್ನು ಕುಟುಂಬ ಸದಸ್ಯರಿಗೆ ವಿತರಿಸಲೂ ಈಗ ಅವಕಾಶ ಕಲ್ಪಿಸಲಾಗಿದೆ.
ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ
ಥರ್ಡ್ಪಾರ್ಟಿ ಇನ್ಸುರೆನ್ಸ್ ವಸೂಲಿಗಾಯಾಳು ಅಥವಾ ಮೃತನ ಕುಟುಂಬಕ್ಕೆ ಪರಿಹಾರದ ಮೊತ್ತ ವಿತರಣೆಯಾದ ಬಳಿಕ ವಾಹನ ಹಾಗೂ ಅದರ ಮಾಲೀಕ ಪತ್ತೆಯಾದರೆ ವಾಹನದ ಮೇಲೆ ಥರ್ಡ್ ಪಾರ್ಟಿ ಇನ್ಸುರೆನ್ಸ್ ಮಾಡಿಸಿರುವ ಇನ್ಸುರೆನ್ಸ್ ಕಂಪನಿ ಅಷ್ಟೂ ಮೊತ್ತವನ್ನು ಪಾವತಿಸಬೇಕು.
2022 ಏಪ್ರಿಲ್ 1 ರಿಂದ ಸಂಭವಿಸುವ ರಸ್ತೆ ಅಪಘಾತದ ಹಿಟ್ ಆ್ಯಂಡ್ ರನ್ ಕೇಸ್ಗಳ ಪರಿಷ್ಕøತ ಆರ್ಥಿಕ ಪರಿಹಾರದ ಮೊತ್ತದ ಮಾಹಿತಿಯನ್ನು ಪೊಲೀಸರು ಸಂಬಂಧಪಟ್ಟವರಿಗೆ ತಿಳಿಸಬೇಕು.
ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಶೀಘ್ರವಾಗಿ ಕುಟುಂಬದ ಸದಸ್ಯರು ಅಥವಾ ಕೋರ್ಟ್ಗೆ ಒದಗಿಸಿ ಜಿಲ್ಲಾಧಿಕಾರಿಯಿಂದ ಅರ್ಜಿ ನಮೂನೆ ಗಾಯಾಳು ಹಾಗೂ ಕುಟುಂಬ ಸದಸ್ಯರಿಗೆ ಲಭಿಸುವ ವ್ಯವಸ್ಥೆ ಮಾಡಬೇಕು.
ಪರಿಷ್ಕøತ ಪರಿಹಾರದ ಮೊತ್ತದ ಬಗ್ಗೆ 2022 ಫೆ.25 ರಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿರುವ ಗೆಜೆಟ್ ಪ್ರತಿಯಲ್ಲಿನ ಮಾರ್ಗಸೂಚಿಗಳನ್ನು ಅಧ್ಯಯನ ನಡೆಸಿ ಪಾಲಿಸುವುದು.
ಅಪಘಾತ ನಿಧಿಯಿಂದ ತ್ವರಿತವಾಗಿ ಪರಿಹಾರ ಪಡೆದು, ನಂತರ ಸೊಲೋಟಿಯಂ ಯೋಜನೆಯಡಿ ಮಂಜೂರಾದ ಬಳಿಕ ಕಡಿತಗೊಳಿಸುವ ಕುರಿತು ತಿಳವಳಿಕೆ ನೀಡುವುದು.
ಪರಿಷ್ಕøತ ಆರ್ಥಿಕ ಪರಿಹಾರದ ಆದೇಶದಲ್ಲಿರುವ ಮಾಹಿತಿಯನ್ನು ಪ್ರತಿಯೊಂದು ಠಾಣೆಯ ಸೂಚನಾ ಫಲಕದಲ್ಲಿ ಹಾಕಬೇಕು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
ಮೂರು ತಿಂಗಳಿನಲ್ಲಿ ಪರಿಹಾರ ಸುಪ್ರೀಂಕೋರ್ಟ್ ಸೂಚನೆಯನ್ವಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಹಾರ ಮೊತ್ತ ಹೆಚ್ಚಿಸಿದೆ. ಅಲ್ಲದೆ, ಶೀಘ್ರ ವಿತರಣೆಗೆ ನಿಯಮಾವಳಿ ರೂಪಿಸಿದೆ. 3 ತಿಂಗಳ ಒಳಗೆ ಅವಲಂಬಿತ ಕುಟುಂಬ ಸದಸ್ಯರ ಕೈಗೆ ಕಡ್ಡಾಯವಾಗಿ ಪರಿಹಾರದ ಮೊತ್ತ ಸೇರಬೇಕು. ಅದೂ ಆನ್ಲೈನ್ ಮೂಲಕವೇ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಬೇಕು.
ಪರಿಹಾರದ ಮೊತ್ತದಲ್ಲಿ ಹೆಚ್ಚಳ
ರಸ್ತೆ ಸಂಚಾರದ ಸಮಯದಲ್ಲಿ ಕೆಲವು ವಾಹನಗಳು ಅತಿವೇಗವಾಗಿ ಚಲಿಸಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗುತ್ತವೆ. ಅಪಘಾತವೆಸಗಿದ ವಾಹನ ಯಾವುದು ಎಂಬ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅಪಘಾತವೆಸಗಿದ ವಾಹನದ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲೂ ಆಗದು. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ 50 ಸಾವಿರ ರೂ.ಗಳತನಕ ಪರಿಹಾರ ಪಡೆಯಲು ಅವಕಾಶವಿತ್ತು. ಮೋಟಾರು ವಾಹನ ಕಾಯ್ದೆಗೆ 2019 ರಲ್ಲಿ ತಂದ ತಿದ್ದುಪಡಿಯಿಂದಾಗಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.
ಎಫ್ಐಆರ್ ಕಡ್ಡಾಯ
ಅಪಘಾತ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ಎಫ್.ಐ.ಆರ್. ದಾಖಲಿಸುವುದು ಕಡ್ಡಾಯ. ಎಲ್ಲಿ ಅಪಘಾತ ನಡೆದಿರುತ್ತದೆಯೋ ಆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾಗಬೇಕು. ಆನಂತರ ಅದರ ಆಧಾರದಲ್ಲಿ ಪರಿಹಾರ ಕ್ಲೇಮ್ಗೆ ಅರ್ಜಿ ಸಲ್ಲಿಸಬೇಕು. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಸೊಲಾಟಿಯಂ ಫಂಡ್ನಿಂದ ಪರಿಹಾರ ವಿತರಿಸಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








