ಪರಿಶಿಷ್ಟ ಫಲಾನುಭವಿಗಳಿಗೆ ಕತ್ತಲಭಾಗ್ಯ…?

ಬೆಂಗಳೂರು:

ಭಾಗ್ಯ, ಕುಟೀರಜ್ಯೋತಿ ಸಹಾಯಧನ ಮೊತ್ತಕ್ಕೆ ಮಿತಿ ನಿಗದಿ ಪ್ರಸ್ತಾವ

      ವಿಶೇಷ ವರದಿ – ಭಾಗ 01

ನೀರಾವರಿ ಪಂಪ್‍ಸೆಟ್, ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿ ಗ್ರಾಹಕರಿಗೆ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು ಮಿತಿಗೊಳಿಸಲು ಇಂಧನ ಇಲಾಖೆಯಲ್ಲಿ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ.

ವಿದ್ಯುತ್ ಪೂರೈಕೆ ಖಾಸಗೀಕರಣ ಮಸೂದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿಯಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು ಮಿತಿಗೊಳಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ‘ದಿ ಫೈಲ್’ ಗೆ ಟಿಪ್ಪಣಿ ಪ್ರತಿಗಳು ಲಭ್ಯವಾಗಿವೆ.

ಇಂಧನ ಇಲಾಖೆಯು ವಿದ್ಯುತ್ ಸಹಾಯ ಧನವನ್ನು ಎಸ್‍ಸಿಪಿ ಮತ್ತು ಟಿಎಸ್‍ಪಿಯೆಂದು ವರ್ಗೀಕರಿಸದೇ ಕೇವಲ ಲೆಕ್ಕ ಶೀರ್ಷಿಕೆ 106 ರ ಅಡಿ ಒದಗಿಸಬೇಕು ಮತ್ತು ಈ ಎರಡೂ ಉಪ ಯೋಜನೆಗಳ ಗ್ರಾಹಕರಿಗೆ ನೀಡುತ್ತಿರುವ ಸಹಾಯಧನ ಮೊತ್ತವನ್ನು ಮಿತಿಗೊಳಿಸಲು ಪ್ರಸ್ತಾವವನ್ನು ಮಂಡಿಸಿದೆ. ಇದಕ್ಕೂ ಮೊದಲು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮಿತಿಯು ಸರ್ಕಾರವು ಆಯವ್ಯಯದಲ್ಲಿ ಹಂಚಿಕೆ ಮಾಡಿ ಒದಗಿಸುವ ಸಹಾಯಧನವನ್ನು ಸಾಮಾನ್ಯ, ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆಯಾಗಿ ವರ್ಗೀಕರಿಸದೇ ಒಂದೇ ಲೆಕ್ಕ ಶೀರ್ಷಿಕೆಯಡಿ ಒದಗಿಸಬೇಕೆಂದು 2020 ರ ಫೆ. 5 ರಂದು ಸೂಚಿಸಿತ್ತು.

ದುಬಾರಿ ವೈದ್ಯಕೀಯ ಶಿಕ್ಷಣ: ಕೇಂದ್ರದಿಂದ ಗಂಭೀರ ಚಿಂತನೆ

ಗ್ರಾಹಕರಿಂದ ವಿರೋಧ ಸಾಧ್ಯತೆ :

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ಫಲಾನುಭವಿಗಳ ಅಂಕಿ ಅಂಶಗಳ ಕುರಿತು ನಿರ್ದಿಷ್ಟ ಮಾಹಿತಿ ಇಲ್ಲದ್ದರಿಂದಾಗಿ 2020-21 ರಲ್ಲಿ ಈ ಎರಡೂ ಉಪ ಯೋಜನೆಯಡಿ ಒದಗಿಸಿದ್ದ ಸಹಾಯ ಧನ ಹಂಚಿಕೆಯನ್ನು ವಿದ್ಯುತ್ ಸರಬರಾಜು ಕಂಪನಿವಾರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಅನುಮೋದಿಸಿದ್ದ ಒಟ್ಟಾರೆ ಸಹಾಯಧನದ ಅನುಪಾತದಲ್ಲಿ ಹಂಚಿಕೆ ಮಾಡಿತ್ತು.

ಆದರೀಗ ಈ ಎರಡೂ ಉಪಯೋಜನೆ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳು ಲಭ್ಯವಾಗುತ್ತಿದ್ದಂತೆ ಸಹಾಯಧನದ ಮೊತ್ತವನ್ನು ಮಿತಿಗೊಳಿಸಲು ಚಾಲನೆ ನೀಡಿರುವುದು ಈ ಎರಡೂ ವರ್ಗಗಳ ಫಲಾನುಭವಿ ಗ್ರಾಹಕರ ವಲಯದಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆಗಳೂ ಇವೆ.

ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ

ಅಂಕಿ-ಅಂಶ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿ :

ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. 2021 ರ ಡಿಸೆಂಬರ್ 31 ರ ಅಂತ್ಯಕ್ಕೆ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ 4,36,702 ಗ್ರಾಹಕರಿದ್ದರೇ, (ಶೇ.15.15) ಪರಿಶಿಷ್ಟ ಪಂಗಡದಲ್ಲಿ 1,64,851 (ಶೇ.5.72) ಗ್ರಾಹಕರು ಸೇರಿದಂತೆ ಒಟ್ಟಾರೆ 6,01,553 ಗ್ರಾಹಕರಿದ್ದಾರೆ ಎಂಬುದು ಟಿಪ್ಪಣಿ ಪ್ರತಿಗಳಿಂದ ತಿಳಿದು ಬಂದಿದೆ.

ಅದೇ ರೀತಿ 10 ಹೆಚ್‍ಪಿವರೆಗಿನ ನೀರಾವರಿ ಪಂಪ್ ಸೆಟ್‍ಗಳನ್ನು ಹೊಂದಿರುವ ಗ್ರಾಹಕರ ಪೈಕಿ ಪರಿಶಿಷ್ಟ ಜಾತಿಯಲ್ಲಿ 1,70,241 (ಶೇ.5.29) ಗ್ರಾಹಕರು, 94,851 (ಶೇ.2.95) ಸಂಖ್ಯೆಯ ಗ್ರಾಹಕರು ಪರಿಶಿಷ್ಟ ಪಂಗಡದಲ್ಲಿದ್ದಾರೆ. 10 ಹೆಚ್‍ಪಿವರೆಗಿನ ನೀರಾವರಿ ಪಂಪ್‍ಸೆಟ್ ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಯನ್ನೂ ಒಳಗೊಂಡಂತೆ ಪರಿಶಿಷ್ಟ ಜಾತಿಯ 6,06,943 (ಶೇ.9.95) ಗ್ರಾಹಕರು, ಪರಿಶಿಷ್ಟ ಪಂಗಡಕ್ಕೆ ಸೇರಿದ 2,59,702 (ಶೇ.4.26) ಗ್ರಾಹಕರಿದ್ದಾರೆ ಎಂದು ವಿದ್ಯುತ್ ಸರಬರಾಜು ಕಂಪನಿಗಳು ಇಂಧನ ಇಲಾಖೆಗೆ ಮಾಹಿತಿ ಒದಗಿಸಿದೆ ಎಂದು ಗೊತ್ತಾಗಿದೆ.

ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ

ಆರ್ಥಿಕ ಇಲಾಖೆಗೆ ಪ್ರಸ್ತಾವನೆ :

2017-18ನೇ ಸಾಲಿನಿಂದ ಸಾಮಾನ್ಯ ಕಾರ್ಯಕ್ರಮಗಳಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಎಂಬುದಾಗಿ ಹಂಚಿಕೆಯನ್ನು ವಿಂಗಡಿಸಿತ್ತು. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಉಚಿತ ವಿದ್ಯುತ್ ಸರಬರಾಜಿನ ಸಹಾಯಧನ ಹಂಚಿಕೆ ಮಾಡುವ ಸಂದರ್ಭದಲ್ಲಿ ಎರಡೂ ವರ್ಗಗಳ ಉಪ ಯೋಜನೆಯಡಿಯಲ್ಲಿ ಒದಗಿಸುತ್ತಿರುವ ಸಹಾಯಧನದ ಮೊತ್ತವನ್ನು ಮಿತಿಗೊಳಿಸುವುದಕ್ಕೆ ಇಂಧನ ಇಲಾಖೆಯು ಪ್ರಸ್ತಾಪಿಸಿರುವುದು ಟಿಪ್ಪಣಿ ಪ್ರತಿಗಳಿಂದ ಗೊತ್ತಾಗಿದೆ.

2022-23 ನೇ ಸಾಲಿನ ಆಯವ್ಯಯದಲ್ಲಿ ನೀರಾವರಿ ಪಂಪ್‍ಸೆಟ್‍ಗಳು, ಭಾಗ್ಯಜ್ಯೋತಿ/ಕುಟೀರ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ (ಲೆಕ್ಕ ಶೀರ್ಷಿಕೆ-2801-80-101-1-04-106) 32,200.52 ಕೋಟಿ ರೂ. ಸಹಾಯಧನ ವೆಚ್ಚವೆಂದು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ನಿರ್ವಹಣಾ ಮುಂಗಡ ಪತ್ರದಿಂದ ಗೊತ್ತಾಗಿದೆ.

ಅಪಘಾತ:ಗಾಯಾಳುಗಳ ಚಿಕಿತ್ಸೆ ವೆಚ್ಚ

     ಪ್ರಸ್ತಾವದಲ್ಲೇನಿದೆ? :

ಲೆಕ್ಕ ಶೀರ್ಷಿಕೆ 2801-80-101-1-04 ಅಡಿ ನೀರಾವರಿ ಪಂಪ್‍ಸೆಟ್ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯಧನ-106-ಸಹಾಯ ಧನದ ಅಡಿಯಲ್ಲಿ ಶೇ. 100ರಷ್ಟು ಸಹಾಯಧನ ಒದಗಿಸುವುದು. ಅಥವಾ ಲೆಕ್ಕ ಶೀರ್ಷಿಕೆ 2801-80-101-1-04 ನೀರಾವರಿ ಪಂಪ್‍ಸೆಟ್ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯಧನ-422-ಪರಿಶಿಷ್ಟ ಜಾತಿ ಉಪಯೋಜನೆಯಡಿ ಒದಗಿಸುವ ಸಹಾಯಧನ ಮೊತ್ತವನ್ನು ಶೇ. 10 ಕ್ಕೆ ಮಿತಿಗೊಳಿಸಿ ಒದಗಿಸುವುದು.

ಹಾಗೆಯೇ ಲೆಕ್ಕ ಶೀರ್ಷಿಕೆ 2801-80-101-1-04 ಅಡಿ ನೀರಾವರಿ ಪಂಪ್‍ಸೆಟ್ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯಧನ-423-ಗಿರಿಜನ ಉಪಯೋಜನೆಯಡಿ ಒದಗಿಸುವ ಸಹಾಯಧನ ಮೊತ್ತವನ್ನು ಶೇ. 4.50 ಕ್ಕೆ ಮಿತಿಗೊಳಿಸಿ ಒದಗಿಸುವುದು ಎಂದು ಪ್ರಸ್ತಾಪಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಒಟ್ಟಾರೆಯಾಗಿ ಲೆಕ್ಕ ಶೀರ್ಷಿಕೆ (2801-80-101-1-04-106) ಸಹಾಯಧನ ಸಾಮಾನ್ಯ ಅಡಿ ಶೆ.85.5ರಷ್ಟು ಅನುದಾನ ಒದಗಿಸುವುದು ಸೇರಿದಂತೆ ಈ ಪ್ರಸ್ತಾವನೆಗಳಿಗೆ ಅನುಮೋದನೆ ಕೋರಿ ಆರ್ಥಿಕ ಇಲಾಖೆಯ ಪರಿಶೀಲನೆ ಮತ್ತು ಸಹಮತಿಗಾಗಿ ಇಂಧನ ಇಲಾಖೆಯು ಕಡತ ಮಂಡಿಸಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link