ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ

ಹೊಸದಿಲ್ಲಿ:

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ಹನ್ನೆರಡು ದಿನಗಳ ನಂತರ ಮಂಗಳವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಇದೇ ವೇಳೆ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗೆ 50 ರೂ.ಹೆಚ್ಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ದಿಲ್ಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ನ ಚಿಲ್ಲರೆ ಬೆಲೆಯು ತಲಾ 80 ಪೈಸೆಗಳಷ್ಟು ಹೆಚ್ಚಾಗಿದೆ. ಇದು ಡಿಸೆಂಬರ್ 1, 2021 ರಿಂದ ಮೊದಲ ಪರಿಷ್ಕರಣೆಯಾಗಿದೆ

ಮಂಗಳವಾರ ದಿಲ್ಲಿ ರಾಜಧಾನಿ ಸೇವಾ ಕೇಂದ್ರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 96.21 ರೂ.ಗೆ ಏರಿತು. ಡೀಸೆಲ್ ದರವು ಲೀಟರ್‌ಗೆ 87.47 ರೂ.ಗೆ ಏರಿತು.

ರಾಜ್ಯದಲ್ಲಿ ಗುರುವಾರದವರೆಗೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ | ಹೈ ಅಲರ್ಟ್ ಘೋಷಣೆ

ಅಕ್ಟೋಬರ್ ನಂತರ ಮೊದಲ ಬಾರಿಗೆ ಗೃಹ ಅಡುಗೆ ಅನಿಲ (ಅಥವಾ ಎಲ್‌ಪಿಜಿ) ಬೆಲೆಯನ್ನು ಮಂಗಳವಾರ ಪ್ರತಿ ಸಿಲಿಂಡರ್‌ಗೆ ರೂ. 50 ಹೆಚ್ಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು ಮಂಗಳವಾರ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಿಸಿರುವುದರಿಂದ 14.2 ಕೆ.ಜಿ. ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಈಗ ದಿಲ್ಲಿಯಲ್ಲಿ 949.50 ರೂ.ಆಗಿದೆ.

ಉಡುಪಿಯಲ್ಲಿ ಸಿಲಿಂಡರ್ ಸ್ಫೋಟ! ಇಬ್ಬರು ದುರ್ಮರಣ ಓರ್ವನಿಗೆ ಗಂಭೀರ ಗಾಯ

ಮೂಲಗಳ ಪ್ರಕಾರ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 349 ರೂ ಆಗಿದ್ದರೆ, 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಈಗ 2,003.50 ರೂ. ಆಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ಮುಗಿದಿರುವುದರಿಂದ ಇಂಧನ ಬೆಲೆ ಏರಿಕೆಯಾಗಬಹುದು ಎಂಬ ಊಹಾಪೋಹಗಳಿದ್ದವು. ಅದೀಗ ನಿಜವಾಗಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link