ಬೆಂಗಳೂರು:

ಟಾಲಿವುಡ್ ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಪುಷ್ಪ ದಿ ಫೈಯರ್ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ ಕೋಟಿಗಟ್ಟಲೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಸಿನಿಮಾ ಕ್ರೇಜ್ ಹೆಚ್ಚಾಗುತ್ತಿದ್ದಂತೆ ನಿರ್ದೇಶಕರು ಭಾಗ ಎರಡು ಮಾಡಲು ಮುಂದಾಗಿದ್ದಾರೆ.ಕಲಾವಿದರ ಸಂಭಾವನೆ ಮಾತುಕತೆ ನಡೆಸಿ ಚಿತ್ರೀಕರಣ ಆರಂಭಿಸಿದ್ದಾರೆ.
ಪುಷ್ಪ ಸಿನಿಮಾದಲ್ಲಿ ಸಿನಿ ರಸಿಕರ ಗಮನ ಸೆಳೆದಿದ್ದು ಅಲ್ಲು ಅರ್ಜುನ್ ಪ್ರತಿಯೊಂದು ಡೈಲಾಗ್. ಹಾಡುಗಳು ಸೂಪರ್ ಹಿಟ್ ಅದರ ಬಗ್ಗೆ ಮಾತನಾಡುವುದೇ ಬೇಡ ಆದರೆ ಡೈಲಾಗ್ ಹವಾ ಇನ್ನೂ ಕಮ್ಮಿ ಆಗಿಲ್ಲ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಮಾತ್ರ ಹಿಟ್ ಅಂದುಕೊಳ್ಳಬೇಡಿ ಕೋಲ್ಕತ್ತಾದಲ್ಲೂ ಹವಾ ಜೋರಾಗಿದೆ ಎನ್ನುವದಕ್ಕೆ ಸಾಕ್ಷಿ ಇಲ್ಲಿದೆ.
ವೆಸ್ಟ್ ಬೆಂಗಾಲ್‌ನಲ್ಲಿ 10ನೇ ತರಗತಿ ಪರೀಕ್ಷೆ ಮಾರ್ಚ್7 ರಿಂದ ಆರಂಭವಾಗಿ ಮಾರ್ಚ್ 16ರ ವರೆಗೂ ನಡೆದಿದೆ. ಮೌಲ್ಯಮಾಪನ ಪ್ರಕ್ರಿಯೆ ಶುರುವಾಗಿದ್ದು ಒಬ್ಬ ವಿದ್ಯಾರ್ಥಿ ಪುಷ್ಪ ಸಿನಿಮಾದ ಡೈಲಾಗ್ ಬರೆದಿದ್ದಾನೆ. ಉತ್ತರ ಪತ್ರಿಕೆಯ ಉತ್ತರ ಬರೆಯದೆ ಉದ್ದಕ್ಕೂ ದೊಡ್ಡದಾಗಿ ದಪ್ಪ ಅಕ್ಷರಗಳಲ್ಲಿ ಬರೆದಿರು ಪುಷ್ಪ ಡೈಲಾಗ್ ನೋಡಿ ಶಿಕ್ಷಕರು ಶಾಕ್ ಆಗಿದ್ದಾರೆ ತಕ್ಷಣವೇ ಫೋಟೋ ಕ್ಲಿಕ್ ಮಾಡಿಕೊಂಡು ಸಂಬಂದಪಟ್ಟ ಅಧಿಕಾರಿಗಳ ಬೆಳಕಿಗೆ ತಂದಿದ್ದಾರೆ. ಫೋಟೋದಲ್ಲಿ ಇರುವ ಪ್ರಕಾರ ‘Pushpa Pushpa raz apum likhega nahi sala’ ಎಂದ ಯುವಕ ಬರೆದಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








