JDS ನಲ್ಲಿ ಹಣವಿದ್ದವರಿಗೆ ಟಿಕೆಟ್; MLC ಮರಿತಿಬ್ಬೇಗೌಡ ಆಕ್ರೋಶ; ದೇವೇಗೌಡರು, HDK ವಿರುದ್ಧ ಅಸಮಾಧಾನ

ಮಂಡ್ಯ:

 ಜೆಡಿಎಸ್ ವಿರುದ್ಧ ಎಂ ಎಲ್ ಸಿ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಜೆಡಿಎಸ್ ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಸಿಗುತ್ತದೆ. ನಾಯಕರ ಬಗ್ಗೆ ನನಗೆ ಬಹಳ ಬೇಸರವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PSI ಹುದ್ದೆ ಹಗರಣದ ಪಿತಾಮಹ ಸಿಎಂ ಬೊಮ್ಮಾಯಿ ಎಂದ ಡಿಕೆಶಿ! ಎಚ್​ಡಿಕೆ ಹೇಳಿದ ಆ ಮೂಲ ಕಿಂಗ್​ಪಿನ್​ ಯಾರು?

ಹಣವಿಲ್ಲದವರಿಗೆ ಜೆಡಿಎಸ್ ನಿಂದ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿಲ್ಲ. ಇದನ್ನು ಕಳೆದ 4-6 ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷ ಸಂಘಟನೆ, ಕಾರ್ಯಕರ್ತರ ಬಗ್ಗೆ ಜೆಡಿಎಸ್ ನಾಯಕರಿಗೆ ಯಾವುದೇ ಕಾಳಜಿಯಿಲ್ಲ. ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಬಗ್ಗೆ ಕೆಟ್ಟ ನಿರ್ಧಾರ ಮಾಡಿದರು. ಇಂತ ನಿರ್ಧಾರ ಮಾಡುತ್ತಾರೆ ಎಂದು ನಿರೀಕ್ಷಿಸಿಯೂ ಇರಲಿಲ್ಲ. ಜಯರಾಂ ಬಳಿ ಹಣವಿಲ್ಲ ಎಂದು ಟಿಕೆಟ್ ಬೇಡ ಅಂದ್ರು. ಹಣವಿದೆ ಎಂಬ ಕಾರಣಕ್ಕೆ ರಾಮುಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪಿಎಸ್‌ಐ ಪರೀಕ್ಷೆ ಗೋಲ್‌ಮಾಲ್‌ ಫುಲ್‌ ಸಕ್ಸಸ್‌- ಗ್ರೂಪ್‌ ಫೋಟೋ ತೆಗೆಸಿ ಸಂತಸ ಹಂಚಿಕೊಂಡ ಆ ಕ್ಷಣ

ರಾಮು ಒಂದು ದಿನವೂ ಜೆಡಿಎಸ್ ಪಕ್ಷಕ್ಕಾಗಿ ದುಡಿದವನಲ್ಲ. ಜೆಡಿಎಸ್ ನಾಯಕರ ಈ ನಿರ್ಧಾರವನ್ನು ನಾನು ಬೆಂಬಲಿಸಲ್ಲ. ಜೆಡಿಎಸ್ ಅಭ್ಯರ್ಥಿ ಪರ ನಾನು ವೋಟ್ ಕೇಳುವುದೂ ಇಲ್ಲ. ಯಾರ ಆಯ್ಕೆ ಅಂತ ನೋಟಿಫಿಕೇಷನ್ ಬಳಿಕ ತೀರ್ಮಾನ ಮಾಡುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link