ಬೆಂಗಳೂರು:
ಇತ್ತೀಚಿನ ದಿನಮಾನದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೊಲೆ ಸುಲಿಗೆ ಪ್ರಕರಣವಾಗುತ್ತಿರುವುದು ಸಾಮಾಜಿಕ ಜೀವನದಲ್ಲಿ ಭೀತಿ ಉಂಟು ಮಾಡದೆ . ಕೆಲದಿನಗಳಿಂದ ಲೀವ್ ಇನ್ ರಿಲೇಷನ್ ನಲ್ಲಿದ್ದ ಮಹಿಳೆ ವಿವಾಹವಾಗಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿರುವ ಘಟನೆ ವರಿಯಾಗಿದೆ .
ವೃತ್ತಿಯಲ್ಲಿ ಮೆಕ್ಯಾನಿಕ್ ಆಗರುವ ಆರೋಪಿ ನದೀಂ ಪಾಷಾ (37) ಮತ್ತು ಹತ್ಯೆಗೀಡಾದ ಮಹಿಳೆಯನ್ನು ಕೌಸರ್ ಮುಬೀನಾ ಎಂದು ಗುರುತಿಸಲಾಗಿದೆ. ಮೊದಲು ಆಟೋ ಚಾಲಕನಾಗಿದ್ದ ನದೀಂ ನಂತರ ವಿದೇಶಕ್ಕೆ ಹೋಗಿದ್ದ. ಹಿಂದಿರುಗಿದ ನಂತರ, ಆತ ಮೆಕ್ಯಾನಿಕ್ ಆಗಿ ಕೆಲಸ ಪ್ರಾರಂಭಿಸಿದ್ದ ಎನ್ನಲಾಗಿದೆ.
2009 ರಲ್ಲಿ ಸಂತ್ರಸ್ತೆ ಮಂಡ್ಯದಲ್ಲಿ ವಸೀಂ ಪಾಷಾ ಎಂಬುವವರನ್ನು ವಿವಾಹವಾಗಿದ್ದರು ಮತ್ತು 11 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ನಂತರ ಸಂತ್ರಸ್ತೆ ತನ್ನ ಮಗಳೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿ, ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು.
ಮಂಡ್ಯ ಮೂಲದ ನದೀಂ ಎಂಬಾತ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆಕೆಯನ್ನು ಭೇಟಿಯಾಗಲು ಮಂಡ್ಯದಿಂದ ನಗರಕ್ಕೆ ಬರುತ್ತಿದ್ದ. ಸಂತ್ರಸ್ತೆ ಮತ್ತು ಆಕೆಯ ಸಂಬಂಧಿಕರು ಎರಡನೇ ಮದುವೆಯನ್ನು ಇಷ್ಟಪಡದ ಕಾರಣ, ಅವಳು ಆತನನ್ನು ಮದುವೆಯಾಗಲು ನಿರಾಕರಿಸಿದಳು. ಇದರಿಂದ ಹತಾಶೆಗೊಂಡ ಆತ ಸಂತ್ರಸ್ತೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ