ಶಿರಸಿ:
ಇಂದು ಬೆಳಿಗ್ಗೆ ಶಿರಸಿ ನಗರದ ಗಾಂಧಿನಗರ ಸಂಪಿಗೆ ಕೆರೆ ಸಮೀಪದ ಮನೆಯೊಂದಕ್ಕೆ ಬೆಂಕಿ ತಗುಲಿ ಅಂದಾಜು 3 ಲಕ್ಷ ರೂಪಾಯಿಗಳಿಗೂ ಅಧಿಕ ಗೃಹಪಯೋಗಿ ಉಪಕರಣಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ಶ್ರೀಮತಿ ರೇಷ್ಮಾ ಸೈಮನ್ ಡಿಸೋಜಾ ಎಂಬವರ ಮನೆಗೆ ಮುಂಜಾನೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಸಾಧ್ಯತೆ ಬಗ್ಗೆ ಹೇಳಲಾಗಿದೆ. ಬಡ ಕುಟುಂಬದವರಾಗಿದ್ದು ಸಂಸಾರ ಸಾಗಲು ಅವಶ್ಯವಾದ ಗ್ರಹಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದು ದಿಕ್ಕು ತೋಚದ ಸ್ಥಿತಿಯಲ್ಲಿ ಕುಟುಂಬವಿದೆ.ಸ್ಥಳೀಯರು ಪ್ರಾರಂಭದಲ್ಲಿ ಬೆಂಕಿ ಆರಿಸಿದ್ದು ಅವರೊಂದಿಗೆ ಅಗ್ನಿಶಾಮಕ ದಳ ಅಧಿಕಾರಿ,ವಾಹನ ಸಿಬ್ಬಂದಿಗಳು ಬೆಂಕಿ ಆರಿಸಲು ನೆರವಾದರು.ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಪಲ್ಲವಿ ಭೇಟಿ ನೀಡಿದ್ದರು.








