ಅವೈಜ್ಞಾನಿಕ ಕಾಮಗಾರಿ  : ಹೇಳೋರು ಕೇಳೋರು ಯಾರು ಇಲ್ಲ?

ಗುಬ್ಬಿ: ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಸಂಸದ ವಿ ಸೋಮಣ್ಣ ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್ ಘಡ್ಕರಿ ಯವರನ್ನು ಒಪ್ಪಿಸಿ ಸುಮಾರು 28 ಕೋಟಿಯಷ್ಟು ಹಣ ತಂದು ಕಾಮಗಾರಿಗೆ ಚಾಲನೆ ನೀಡಿದ್ದು ಸರಿಯಷ್ಟೇ, ಇದುವರೆವಿಗೂ ಇಲ್ಲಿ ಇದಕ್ಕೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳ ಸಮನ್ವಯತೆ ಇಲ್ಲದಿರುವುದು ಎದ್ದು ಕಾಣುತ್ತಿದೆ ಇಷ್ಟೊಂದು ದೊಡ್ಡ ಮಟ್ಟದ ಕಾಮಗಾರಿಯನ್ನು ಪ್ರಾರಂಭಿಸಿರುವ ಗುತ್ತಿಗೆದಾರರರು ಕೇವಲ ಬೆರಳೆಣಿಕೆಯಷ್ಟು ಕೆಲಸಗಾರರನ್ನು ಇಟ್ಟು ಕೊಂಡು ಕೆಲಸ ಪ್ರಾರಂಭಿಸಿ ಇನ್ನು ಪೂರ್ಣಗೊಳಿಸದೆ ಇರುವುದು ನಿತ್ಯ ಪಾದಚಾರಿಗಳು ದೂಳು ಸಂಚಾರ ದಟ್ಟಣೆಯಿಂದ ಹೈರಾಣಾಗಿದ್ದಾರೆ, ಇದರ ಬಗ್ಗೆ ಕಿಂಚಿತ್ತೂ ಅಧಿಕಾರಿಗಳು ತಲೆಕೆಡೆಸಿಕೊಳ್ಳುತ್ತಿಲ್ಲ,

ಎಂದು ಗುಬ್ಬಿ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಹೆಚ್ ಡಿ ಎಲ್ಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ,

ಮೂಲ ರಸ್ತೆಯಮೇಲೆ ಪ್ಲಾಸ್ಟಿಕ್ ಹಾಳೆಯೊಂದನ್ನು ಹಾಕಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಇದು ಪೂರ್ಣಗೊಂಡಿಲ್ಲ 

ಚರಂಡಿ ನಿರ್ಮಿಸದೆ ರಸ್ತೆ ಮಾಡುತ್ತಿರುವುದು ಮಳೆ ನೀರು ಅಂಗಡಿಗಳಿಗೆ ನುಗ್ಗುವ ಸಾಧ್ಯತೆ ಇದೆ

 

ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೇ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಇದರ ಬಗ್ಗೆ ಹೆದ್ದಾರಿ ಅಧಿಕಾರಿಗಳು ಬೆಸ್ಕಾಂ ಮೇಲೆ ದೂರು ಹೇಳಿದರೆ, ಬೆಸ್ಕಾಂ ಅಧಿಕಾರಿಗಳು ಬೇಸಿಗೆಯಾದ್ದರಿಂದ ನಾವು ರೈತರಿಗೆ ಗುಬ್ಬಿ ಪಟ್ಟಣಕ್ಕೆ ನಿರಂತರ ವಿದ್ಯುತ್ ನೀಡಬೇಕಿದೆ ಇವರು ಕಂಬಗಳನ್ನು ಸ್ಥಳಾಂತರಿಸಲು ನಾವು ವಿದ್ಯುತ್ ಸಂಪರ್ಕ ದಿನಗಟ್ಟಲೆ ತೆಗೆದರೆ ರೈತರ ಪಾಡೇನು ಸ್ವಲ್ಪ ಮಳೆ ಬಂದಮೇಲೆ ಕಂಬ ಸ್ಥಳಾಂತರಿಸಿಕೊಳ್ಳಿ ಎಂದು ಹೇಳಿದ್ದೇವೆ ಎಂದು ಬೆಸ್ಕಾಂ ಎ ಇ ಇ ಜಲಜೇಶ್ ತಿಳಿಸಿದ್ದಾರೆ, ಮಾಹಿತಿ ಕೊರತೆಯಿಂದ ನಮ್ಮ ಮೇಲೆ ದೂರಿರುವುದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು

Recent Articles

spot_img

Related Stories

Share via
Copy link