ಪಡಿತರ ಅಕ್ರಮ ಸಾಗಾಟ : ಆಹಾರ ನಿರೀಕ್ಷಕರಿಗೆ ದೂರು

ಶಿಡ್ಲಘಟ್ಟ : ತಾಲ್ಲೂಕಿನ ಸಾದಲಿ ಹೋಬಳಿಯ ಸೊಣ್ಣಗಾನಹಳ್ಳಿ ನ್ಯಾಯಬೆಲೆ ಅಂಗಡಿ ಸಂಖ್ಯೆ 45 ಎಸ್ ವಿ ರಂಗನಾಥ್ ಗ್ರಾಮದಲ್ಲಿ ಪಡಿತರ ಚೀಟಿದಾರರಿಗೆ ನೀಡಬೇಕಾದ ಆಹಾರಧಾನ್ಯಗಳನ್ನು ಅಕ್ರಮವಾಗಿ ಸರಬರಾಜು ಮಾಡುತ್ತಿರುತ್ತಾರೆಂದು ಸಾರ್ವಜನಿಕರು ಆಹಾರ ನಿರೀಕ್ಷಕರಿಗೆ ದೂರು ನೀಡಲಾಗಿತ್ತು.

ಸಾರ್ವಜನಿಕರ ದೂರನ್ನು ಆಧರಿಸಿದ ಮೆರೆಗೆ ಆಹಾರ ನಿರೀಕ್ಷಕರು ಸೋಮವಾರ ರಾತ್ರಿ 11.00 ಘಂಟೆಗೆ ದಿಬ್ಬೂರಹಳ್ಳಿ ಗ್ರಾಮಾಂತರ ಪೋಲಿಸ್ ಠಾಣೆಯ ಸಿಬ್ಬಂದಿ ಯೊಂದಿಗೆ ಗ್ರಾಮಕ್ಕೆ ಬೇಟಿ ನೀಡಿದ ಸಮಯದಲ್ಲಿ ನ್ಯಾಯಬೆಲೆ ಅಂಗಡಿ ಬಾಗಿಲನ್ನು ಬೀಗ ಹಾಕಿರುವುದು ಕಂಡು ಬಂದಿರುತ್ತದೆ.

ಮಂಗಳವಾರ ಬೆಳಗ್ಗೆ ಗ್ರಾಮಕ್ಕೆ ಆಹಾರ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದು, ನ್ಯಾಯಬೆಲೆ ಅಂಗಡಿ ಪ್ರಾಧಿಕರಣದಾರ ಎಸ್ ವಿ ರಂಗನಾಥ್ ಅವರಿಗೆ
ದೂರವಾಣಿ ಮೂಲಕ ಕರೆ ಮಾಡಿ ನ್ಯಾಯಬೆಲೆ ಅಂಗಡಿ ಬಾಗಿಲನ್ನು ತೆಗೆಯುವಂತೆ ಆಹಾರ ನಿರೀಕ್ಷಕರು ತಿಳಿಸಿದ್ದರೂ ಸ್ಥಳಕ್ಕೆ ಬಾರದೇ ಬೇಜವಾಬ್ದಾರಿ ಉತ್ತರವನ್ನು ನೀಡಿರುತ್ತಾರೆಎಂದು ತಿಳಿದು ಬಂದಿದೆ.

ದಾಸ್ತಾನು ಪರಿಶೀಲನೆ ಮಾಡಲು ಮೇಲಾಧಿಕಾರಿಗಳ ಸೂಚನೆಯಂತೆ ದಿಬ್ಬೂರಹಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿ ಹಾಗೂ ಸೊಣ್ಣಗಾನಹಳ್ಳಿ ಗ್ರಾಮಸ್ಥರ ಸಮಕ್ಷಮದಲ್ಲಿ ಬೀಗವನ್ನು ತೆಗೆಸಿ ದಾಸ್ತಾನನ್ನು ಪರಿಶೀಲಿಸಿದಾಗ, ಗ್ರಾಮದ ಅಂಗಡಿ ಮಳಿಗೆಯು ಆಹಾರ ಇಲಾಖೆಯಿಂದ ಅನುಮತಿ ಪಡೆದ ಮಳಿಗೆಯಾಗಿರುವುದಿಲ್ಲ.


ಪರಿಶೀಲನಾ ಸಮಯದಲ್ಲಿ ಅಂಗಡಿಯಲ್ಲಿ ಒಟ್ಟು 164 ಮೂಟೆ ಅಂದರೆ 82 ಕ್ವಿಂಟಾಲ್ ಅಕ್ಕಿ ಹಾಗೂ 102 ಮೂಟೆ ಅಂದರೆ 51 ಕ್ವಿಂಟಾಲ್ ರಾಗಿ ಮಾತ್ರ ದಾಸ್ತಾನಿರುವುದು ಕಂಡುಬಂದಿರುತ್ತದೆ. ಆದರೆ ಸೆಗಟು ಮಳಿಗೆಯಿಂದ ಸ್ವೀಕೃತವಾಗಿರುವ ದಾಸ್ತಾನಿಗೂ ಭೌತಿಕವಾಗಿ ಮಳಿಗೆಯಲ್ಲಿರುವ ದಾಸ್ತಾನಿಗೆ 107 ಮೂಟೆ ಅಂದರೆ 53.50 ಕ್ವಿಂಟಾಲ್ ರಾಗಿ ಹಾಗೂ 5 ಮೂಟೆ ಅಂದರೆ 2.50 ಕ್ವಿಂಟಾಲ್ ಅಕ್ಕಿ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ.

ಸೊಣ್ಣಗಾನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರಾದ ಎಸ್ ವಿ ರಂಗನಾಥ್ ರವರು ಕರ್ನಾಟಕ ಅಗತ್ಯವಸ್ತುಗಳ (ಸಾವಿಪ) ನಿಯಂತ್ರಣ ಆದೇಶ -2016ರ ಕ್ಲಾಸ್(3)ರಂತೆ ನೀಡಲ್ಪಟ್ಟ ಪ್ರಾಧಿಕರಣ ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವುದು ಕಂಡುಬಂದಿರುತ್ತದೆ.

ನ್ಯಾಯಬೆಲೆ ಅಂಗಡಿ ಪ್ರಾಧಿಕರಣವನ್ನು ಅಮಾನತ್ತುಪಡಿಸಿ ಅಗತ್ಯವಸ್ತುಗಳ ಕಾಯ್ದೆ 1955ರನ್ವಯ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ನ್ಯಾಯಬೆಲೆ ಅಂಗಡಿಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿಯಾದ ಆರ್.ತ್ಯಾಗರಾಜು ಸಾದಲಿ ಗ್ರಾಮ ಸಂಖ್ಯೆ:44ಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿದು ಬಂದಿರುತ್ತದೆ.

Recent Articles

spot_img

Related Stories

Share via
Copy link