
ಬೆಂಗಳೂರು: ಜವಾಬ್ದಾರಿ ಇದ್ದರೆ ಕೆಲಸ ಮಾಡಲು ಅನುಕೂಲ ಆಗಲಿದೆ. ಸಂಪೂರ್ಣ ಇದ್ದರೆ ಉತ್ತಮ ಫಲಿತಾಂಶ ಬರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜವಾಬ್ದಾರಿ ಇದ್ದರೆ ಕೆಲಸ ಮಾಡಲು ಅನುಕೂಲ ಆಗಲಿದೆ. ಸಂಪೂರ್ಣ ಇದ್ದರೆ ಉತ್ತಮ ಫಲಿತಾಂಶ ಬರಲಿದೆ. ದೆಹಲಿಯಲ್ಲಿ ಸಿಎಂ ಜೊತೆ ನಾನೂ ಕೆಲವು ಸಭೆ ಅಟೆಂಡ್ ಮಾಡಿದ್ದೆ. ಇಂದು ಜಿಲ್ಲಾಧಿಕಾರಿ, ಎಸ್ಪಿಗಳ ಜೊತೆ ಸಭೆ ನಡೆಸುತ್ತಿದ್ದಾರೆ ಎಂದರು.
ಉಃA ಖಾತೆ ಬಗ್ಗೆ ಅಸಮಾಧಾನ ವಿಚಾರವಾಗಿ ಮಾತನಾಡಿ, ಅಸಮಾಧಾನ ಯಾವುದೂ ಇಲ್ಲ. ಬಹಳ ಕಠಿಣವಾದ ಜವಾಬ್ದಾರಿಯನ್ನು ಸಿಎಂ ಹಾಗೂ ಪಕ್ಷ ವಹಿಸಿದೆ. ಬೆಂಗಳೂರು ಅಭಿವೃದ್ಧಿ ಬಹಳ ಸವಾಲು. ಬಹಳ ಜವಾಬ್ದಾರಿ ಕೂಡ ಇದೆ. ಬೆಂಗಳೂರು ಜನರ ನಿರೀಕ್ಷೆ, ಪಕ್ಷದ ನಿರೀಕ್ಷೆ ಬಹಳಷ್ಟು ಇದೆ. ಇಂತಹ ಸಂಧರ್ಭದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವಾಗ ಸ್ಪಷ್ಟತೆ ಇರಬೇಕು. ಖಾತೆ ಪಡೆಯುವಾಗ ಅಕೌಂಟಬಲಿಟಿ ಇರಬೇಕು. ಫಲಿತಾಂಶ ರೂಪದಲ್ಲಿ ಇರಬೇಕು. ಜವಾಬ್ದಾರಿ ಜೊತೆಗೆ ಹಂಚಿಕೆ ಬಗ್ಗೆಯೂ ಸ್ಪಷ್ಟವಾಗಿ ಇರಬೇಕು. ನಮ್ಮಿಂದ ನಿರೀಕ್ಷೆ, ಅಕೌಂಟಬಿಲಿಟಿ, ಫಲಿತಾಂಶ ಎಕ್ಸ್ಪೆಕ್ಟ್ ಮಾಡ್ತಾರೆ. ಇದರ ಬಗ್ಗೆ ಸಿಎಂಗೆ ಮನವರಿಕೆ ಮಾಡಿದ್ದೇನೆ. ಸಿಎಂ ಇತ್ಯರ್ಥ ಮಾಡೋದಾಗಿ ಹೇಳಿದ್ದಾರೆ. ಸಿಎಂ ಸ್ಪಷ್ಟವಾಗಿ ಇನ್ನೆರಡು ದಿನದಲ್ಲಿ ಹೇಳ್ತಾರೆ ಎಂದು ತಿಳಿಸಿದರು.
ಸರಿಪಡಿಸುವವರೆಗೂ ಖಾತೆ ವಹಿಸಿಕೊಳ್ಳಲ್ವಾ ಅನ್ನೋ ಪ್ರಶ್ನೆಗೆ ಸಚಿವ ಕೃಷ್ಣ ಬೈರೇಗೌಡ ಉತ್ತರಿಸದೇ ಹೊರಟರು.
ನಾವೆಲ್ಲ ಸೇವೆ ಮಾಡುವುದಕ್ಕೆ ಬಂದವರು: ವಿಧಾನಸೌಧದಲ್ಲಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಖಾತೆ ಹಂಚಿಕೆ ಬಗ್ಗೆ ಕೆಲವರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗಾಗಲೇ ರಾಮಲಿಂಗಾ ರೆಡ್ಡಿಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಗತಿ ಪರಿಶೀಲನೆ ಮಾಡಿ ಕೆಲಸ ಆರಂಭಿಸಿದ್ದಾರೆ. ಎಲ್ಲಾ ಸಚಿವರು ತಮ್ಮ ಖಾತೆಯ ಜವಾಬ್ದಾರಿಯನ್ನು ಉತ್ತಮವಾಗಿ ಮಾಡ್ತಿದ್ದಾರೆ ಎಂದರು.
ನಿಮಗೆ ಖಾತೆ ಹಂಚಿಕೆ ತೃಪ್ತಿ ಇದೆಯಾ ಎಂಬ ಪ್ರಶ್ನೆಗೆ, ನಾವೆಲ್ಲ ಸೇವೆ ಮಾಡಲು ಬಂದವರು. ಆ ಖಾತೆ, ಈ ಖಾತೆ ಎಂಬ ಪ್ರಶ್ನೆ ಇಲ್ಲ. ದಕ್ಷತೆ, ಪ್ರಾಮಾಣಿಕತೆಯಿಂದ ನಿಭಾಯಿಸಬೇಕೆಂಬ ಬದ್ಧತೆ ಇದೆ. ಅರಣ್ಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಈ ಖಾತೆಯನ್ನೂ ಚೆನ್ನಾಗಿ ಮಾಡುತ್ತೇನೆ ಎಂದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ ಶೇ.30ರಷ್ಟು ಮಾತ್ರ ರಸಗೊಬ್ಬರ ಪೂರೈಕೆ ಮಾಡಿದೆ. ರಾಜ್ಯಗಳಿಗೆ ರಸಗೊಬ್ಬರ ಕೊಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಎಷ್ಟು ಅವಶ್ಯಕತೆ ಇದೆಯೋ ಅಷ್ಟು ರಸಗೊಬ್ಬರವನ್ನು ಕೇಂದ್ರ ಸರ್ಕಾರ ಸರಬರಾಜು ಮಾಡಬೇಕು. ಸದ್ಯಕ್ಕೆ ರಸಗೊಬ್ಬರ ಎಷ್ಟಿದೆ ಎಂಬುದರ ಬಗ್ಗೆ ಇವತ್ತು ತಿಳಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಆತಂಕದಿAದ ಸಿಎಲ್?ಪಿ ಸಭೆ ಕರೆಯಲಾಗಿದೆಯಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆತಂಕ ಏನಿಲ್ಲ, ಎಸ್‌ಐಆರ್ ಸೇರಿ ಅನೇಕ ಜ್ವಲಂತ ವಿಷಯಗಳಿವೆ. ಇದೆಲ್ಲರ ಬಗ್ಗೆ ಚರ್ಚೆ ಮಾಡಲು, ಸಿಎಲ್?ಪಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.








