ಕಪಿಲಾ ನದಿಗೆ ಇಳಿದು ರೈತರ ಪ್ರತಿಭಟನೆ

ನಂಜನಗೂಡು: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಾಷ್ಟಿçÃಯ ಹೆದ್ದಾರಿ ತಡೆದು, ಕಪಿಲಾ ನದಿಗೆ ಇಳಿದು ಪ್ರತಿಭಟನೆ ನಡೆಸಿದರು.

ನಗರದ ದೇವರಾಜ ಅರಸು ಸೇತುವೆ ಬಳಿ ಸಂಘಟನೆಗೊAಡ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮೈಸೂರು ಊಟಿ -ರಾಷ್ಟಿçÃಯ ಹೆದ್ದಾರಿಯನ್ನು ತಡೆದು ನಂತರ ಕಾವೇರಿ ನದಿಗೆ ಇಳಿದು ರಾಜ್ಯ ಸರ್ಕಾರ ಮತ್ತು ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಬಾರದೇ ಕೆರೆಕಟ್ಟೆಗಳಲ್ಲಿ ನೀರಿಲ್ಲ, ಜೊತೆಗೆ ಅಂತರ್ಜಲ ಬತ್ತಿ ಹೋಗಿ ದನ ಕರುಗಳು ಮತ್ತು ಜನರಿಗೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ, ಲಕ್ಷಾಂತರ ಹೆಕ್ಟೇರ್ ಬೆಳೆ ನೀರಲ್ಲದೆ ಒಣಗಿವೆ, ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಅರಿತು ತಮಿಳುನಾಡಿನ ರೈತರು ಸಹ ನೀರು ಬಿಡುವಂತೆ ಬೀದಿಗಿಳಿದಿಲ್ಲ, ಆದರೂ ಸಹ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರವು 15 ದಿನಗಳ ಕಾಲ ದಿನಕ್ಕೆ 3500 ಸಾವಿರ ಕ್ಯೂಸೆಕ್ ನೀರಿನಂತೆ 4.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದೆ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರದ ನಿರ್ಧಾರಗಳು ಸಾಮಾನ್ಯವಾಗಿ ತಮಿಳುನಾಡಿನ ಪರವೇ ಇರುತ್ತದೆ ಈ ನಿರ್ಧಾರ ಖಂಡನೀಯ, ರಾಜಕಾರಣಿಗಳು ಕಾವೇರಿಯ ನದಿ ನೀರನ್ನು ರಾಜಕೀಯ ಗಾಳವಾಗಿ ಬಳಸಬೇಡಿ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಜಿಲ್ಲಾ ಅಧ್ಯಕ್ಷ ಸತೀಶ್ ರಾವ್, ಹಸಿರು ಸೇನೆ ಜಿಲ್ಲಾಧ್ಯಕ್ಷ ದೊಡ್ಡಯ್ಯ, ಮಹಿಳಾ ಜಿಲ್ಲಾಧ್ಯಕ್ಷೆ ಶ್ವೇತಾ, ಶಂಕರ ನಾಯಕ, ತಾಲೂಕು ಅಧ್ಯಕ್ಷ ಮಹದೇವನಾಯಕ, ದೇವರಾಜು, ರತ್ನಮ್ಮ, ತಿಮ್ಮ ನಾಯಕ, ಶಿವಣ್ಣ, ವರದರಾಜು, ಬೀರಪ್ಪ, ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link