ಬೆಂಗಳೂರು : ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಿಸಿ ಅನುಷ್ಠಾನಗೊಳಿಸಲಾಗಿರುವ ವಿಬಿ ಜಿ ರಾಮ್ ಜಿ ಯೋಜನೆ ರಾಜ್ಯದಲ್ಲಿ ಜಾರಿಯಾದ ಮೊದಲ ತಿಂಗಳಲ್ಲೇ ಕಳೆದ ವರ್ಷಕ್ಕಿಂತ ಶೇ.78.77ರಷ್ಟು ಕಡಿಮೆ ಮಾನವ ದಿನಗಳ ಸೃಜನೆಯಾಗಿದೆ. ಆ ಮೂಲಕ ಯೋಜನೆಗೆ ಭಾರೀ ಹಿನ್ನಡೆಯುಂಟಾಗಿದೆ.
ಗ್ರಾಮೀಣ ಭಾಗದ ವಲಸೆ ತಡೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಲು ಜಾರಿಗೊಳಿಸಲಾಗಿದ್ದ ಮ-ನರೇಗಾ ಯೋಜನೆ ಬದಲಾಯಿಸಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಅನುಷ್ಠಾನಗೊಳಿಸಿದೆ.
ಜು.1ರಿಂದ ವಿಬಿ ಜಿ ರಾಮ್ ಜಿ ಕಾಯ್ದೆ ದೇಶದೆಲ್ಲೆಡೆ ಜಾರಿಯಾಗಿದೆ. ನೂತನ ಕಾಯ್ದೆಯಂತೆ ಮ-ನರೇಗಾ ಯೋಜನೆಗಿಂತ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ವಿಬಿ ಜಿ ರಾಮ್ ಜಿ ಜಾರಿಯಾದ ಮೊದಲ ತಿಂಗಳಲ್ಲಿಯೇ ಮಾನವ ದಿನಗಳ ಸೃಜನೆಯಲ್ಲಿ ಭಾರೀ ಕಡಿತವಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷ ಕೆಲಸ ಸೃಷ್ಟಿ ಪ್ರಮಾಣ ಕಡಿಮೆಯಾಗಿದೆ.
ಕೇಂದ್ರ ಸರ್ಕಾರ ಗುರುತಿಸಿರುವಂತೆ ರಾಜ್ಯದ 5,958 ಗ್ರಾಮಗಳ 4,991 ಗ್ರಾಪಂಗಳಲ್ಲಿ ಒಟ್ಟು 11,555 ಕೆಲಸಗಳ ಅನುಷ್ಠಾನ ಮಾಡಲಾಗುತ್ತಿದೆ. ಅದರ ಮೂಲಕ ಜು.1 ರಿಂದ 31ರವರೆಗೆ 13.06 ಲಕ್ಷ ಮಾನವ ದಿನಗಳು ಸೃಷ್ಟಿಯಾಗಿವೆ. ಅದೇ 2025ರ ಜುಲೈ ತಿಂಗಳಲ್ಲಿ ಮನ್ರೇಗಾ ಯೋಜನೆ ಅಡಿ ಜುಲೈ ತಿಂಗಳಲ್ಲಿ 61.49 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. ಒಟ್ಟಾರೆ ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇ. 78.77ರಷ್ಟು ಕಡಿಮೆ ಮಾನವ ದಿನಗಳು ಸೃಜನೆಯಾಗಿದೆ.
ಸರ್ಕಾರ ಹೊಸದಾಗಿ ಆರಂಭಿಸಿದ ವಿಬಿ ಜಿ ರಾಮ್ ಜಿ(ಗ್ರಾಮೀಣ ಉದ್ಯೋಗ) ಕಾರ್ಯಕ್ರಮದಡಿ ಮೊದಲ ತಿಂಗಳಲ್ಲೇ ದೇಶದಲ್ಲಿ ಅರ್ಧದಷ್ಟು ಉದ್ಯೋಗ ಸೃಷ್ಟಿ ಕುಸಿದಿದ್ದು, ಜುಲೈನಲ್ಲಿ 7.67 ಕೋಟಿಗೆ ಇಳಿದಿರುವ ಮಾನವ ದಿನಗಳ ಕೆಲಸ ಕಳೆದ ವರ್ಷ ಇದೇ ತಿಂಗಳಲ್ಲಿ 15.33 ಕೋಟಿಯಷ್ಟಿತ್ತು. ಅಧಿಕೃತ ಅಂಕಿಅAಶಗಳನ್ನು ಗಮನಿಸಿದರೆ ಉದ್ಯೋಗ ಖಾತರಿಯಾಗಬೇಕಾಗಿದ್ದ ವಿಬಿ ಜಿ ರಾಮ್ ಜಿ ಗ್ರಾಮೀಣ ಭಾರತದ ಬಡವರ ಪಾಲಿಗೆ ಉರುಳಾಗಿ ಪರಿಣಮಿಸಿದೆ.
ಜುಲೈ 1 ರಿಂದ ಕೇಂದ್ರವು ಎರಡು ದಶಕಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯನ್ನು ಬದಲಿಸಿದ ಕೇಂದ್ರ ಸರ್ಕಾರ, ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್(ಗ್ರಾಮೀಣ)ಯನ್ನು ಅನುಷ್ಠಾನಗೊಳಿಸಿದ ಕೆಲವೇ ವಾರಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.49.94ರಷ್ಟು ಉದ್ಯೋಗ ಕುಸಿತವಾಗಿರುವುದು ಕಂಡುಬAದಿದೆ.
ಮಾನವ ದಿನ ಎಂದರೆ ಮನರೇಗಾ ಕಾರ್ಯಕ್ರಮದಡಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಉದ್ಯೋಗ ಒದಗಿಸುವುದನ್ನು ಸೂಚಿಸುತ್ತದೆ ಮತ್ತು ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಉತ್ಪತ್ತಿಯಾಗುವ ಕೆಲಸವನ್ನು ಪತ್ತೆಹಚ್ಚಲು ಬಳಸುವ ಪ್ರಮಾಣಿತ ಮಾಪನವಾಗಿದೆ. ಆದರೆ, ಕೇಂದ್ರ ಸರ್ಕಾರವು ವಿಬಿ ಜಿ ರಾಮ್ ಜಿಯನ್ನು ಮನರೇಗಾಕ್ಕೆ ನವೀಕರಿಸಿದ ಆವೃತ್ತಿಯಾಗಿ ಯೋಜಿಸಿದ್ದು, ?ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿದೆ. ಜತೆಗೆ ವೇತನವನ್ನೂ ಹೆಚ್ಚಿಸುತ್ತದೆ. ಪರಿಷ್ಕöÈತ ಕಾರ್ಯಕ್ರಮವು ಶಾಶ್ವತ ಗ್ರಾಮೀಣ ಆಸ್ತಿ ಸೃಷ್ಟಿ ಮತ್ತು ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಹೊಸ ಕಾರ್ಯಕ್ರಮಕ್ಕೆ ಪರಿವರ್ತನೆಯು ಅನುಷ್ಠಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ? ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಮರ್ಥಿಸಿಕೊಂಡಿದೆ.
ಕಳೆದ ತಿಂಗಳು ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ, ಸರ್ಕಾರವು ವಿಬಿ ಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗವನ್ನು ಕೋರುವ ಶೇ.99.5ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿದೆ ಎಂದು ಹೇಳಿದೆ. ಆದರೆ, ಜುಲೈ 22ರ ವೇಳೆಗೆ 5.2 ಕೋಟಿಗೂ ಅಧಿಕ ಮಾನವ ದಿನಗಳು ಸೃಷ್ಟಿಯಾಗಿವೆ. ಆದಾಗ್ಯೂ, ಇತ್ತೀಚಿನ ಮಾಸಾಂತ್ಯದ ಅಂಕಿಅAಶಗಳು ಜುಲೈನ ಉಳಿದ ಅವಧಿಯಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿ ಕಡಿತವಾಗಿರುವುದನ್ನು ಸೂಚಿಸುತ್ತವೆ.
ಕಾನೂನಿನಲ್ಲಿ ಬರೆದಿರುವ ಗರಿಷ್ಠ ದಿನಗಳ ಸಂಖ್ಯೆಯಿAದ ಮಾತ್ರವಲ್ಲ; ಎಷ್ಟು ಕುಟುಂಬಗಳು ಕೆಲಸ ಕೇಳಿದವು, ಅವರಲ್ಲಿ ಎಷ್ಟು ಕುಟುಂಬಗಳಿಗೆ ಕೆಲಸ ಸಿಕ್ಕಿತು, ಸರಾಸರಿ ಎಷ್ಟು ದಿನ ಕೆಲಸ ಸಿಕ್ಕಿತು, ಎಷ್ಟು ಮಾನವ ದಿನಗಳು ಸೃಷ್ಟಿಯಾದವು, ಕೆಲಸ ಕೇಳಿದ ನಂತರ ಎಷ್ಟು ದಿನಗಳಲ್ಲಿ ಉದ್ಯೋಗ ನೀಡಲಾಯಿತು, ಕೂಲಿ ಎಷ್ಟು ದಿನಗಳಲ್ಲಿ ಪಾವತಿಸಲಾಯಿತು ಮತ್ತು ಕೆಲಸ ಸಿಗದವರಿಗೆ ನಿರುದ್ಯೋಗ ಭತ್ಯೆ ದೊರೆಯಿತೇ ಎಂಬ ನೆಲಮಟ್ಟದ ಸೂಚಕಗಳಿಂದ ಕಾಯ್ದೆಯ ಯಶಸ್ಸು ಸಾಬೀತಾಗುತ್ತದೆ.
ಇದೇ ಕಾರಣಕ್ಕೆ 2026ರ ಜುಲೈ ಅಂಕಿಅAಶಗಳು ಮಹತ್ವ ಪಡೆಯುತ್ತವೆ. ಒಂದೆಡೆ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ಘೋಷಣೆ ಇದ್ದರೆ, ಮತ್ತೊಂದೆಡೆ ಮೊದಲ ತಿಂಗಳ ಉದ್ಯೋಗ ವರ್ಷದಿಂದ ವರ್ಷಕ್ಕೆ 15.33 ಕೋಟಿಯಿಂದ 7.67 ಕೋಟಿಗೆ ಕುಸಿದಿರುವ ಮಾಪನವಿದೆ. ಅಂದರೆ ಕಾಗದದ ಮೇಲೆ ಶೇ.25ರಷ್ಟು ಹೆಚ್ಚು ದಿನಗಳ ಭರವಸೆ ಇದ್ದರೂ, ಹೋಲಿಕೆಯ ತಿಂಗಳಲ್ಲಿ ವಾಸ್ತವವಾಗಿ ಸೃಷ್ಟಿಯಾದ ಮಾನವ ದಿನಗಳು ಸುಮಾರು ಶೇ.50ರಷ್ಟು ಕುಸಿದಿವೆ. ಈ ವಿರೋಧಾಭಾಸವೇ ಈಗ ಉತ್ತರಿಸಬೇಕಾದ ಮುಖ್ಯ ಪ್ರಶ್ನೆಯಾಗಿದೆ.
ಇದು ಹೊಸ ವ್ಯವಸ್ಥೆಯ ಆರಂಭಿಕ ಆಡಳಿತಾತ್ಮಕ ಕಾರಣವೇ? ರಾಜ್ಯಗಳು ಇನ್ನೂ ಸಂಪೂರ್ಣವಾಗಿ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳದ ಪರಿಣಾಮವೇ? ಮಳೆಯ ಕಾರಣದಿಂದ ಕೃಷಿಯಲ್ಲಿ ಹೆಚ್ಚಿನ ಉದ್ಯೋಗ ಲಭ್ಯವಾಗಿ ಉದ್ಯೋಗ ಖಾತರಿ ಬೇಡಿಕೆ ಕಡಿಮೆಯಾಯಿತೇ? ಕೆಲಸಕ್ಕೆ ಬೇಡಿಕೆ ಇದ್ದರೂ ಕಾಮಗಾರಿಗಳನ್ನು ತೆರೆಯಲಾಗಲಿಲ್ಲವೇ? ಹಣಕಾಸು ಹಂಚಿಕೆ ಅಥವಾ ಅನುಮೋದನೆಯಲ್ಲಿ ವಿಳಂಬವಾಗಿದೆಯೇ? ಇಲ್ಲವೇ ಹೊಸ ವ್ಯವಸ್ಥೆಯ ವಿನ್ಯಾಸವೇ ಉದ್ಯೋಗ ಸೃಷ್ಟಿಯನ್ನು ನಿಯಂತ್ರಿಸುತ್ತಿದೆಯೇ? ಎಂಬ ಪ್ರಶ್ನೆಗಳು ಗಂಭೀರವಾಗಿವೆ.
ಕರ್ನಾಟಕದAತಹ ರಾಜ್ಯಕ್ಕೆ ಈ ಪ್ರಶ್ನೆ ಇನ್ನಷ್ಟು ಮುಖ್ಯ. ರಾಜ್ಯದ ಅನೇಕ ಜಿಲ್ಲೆಗಳ ಕೃಷಿ ಇನ್ನೂ ಮಳೆಯ ಮೇಲೆ ಅವಲಂಬಿತವಾಗಿದೆ. ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಮಳೆ ವಿಫಲವಾದರೆ ರೈತನಷ್ಟೇ ಅಲ್ಲದೆ ಕೃಷಿ ಕಾರ್ಮಿಕ, ಸಣ್ಣ ವ್ಯಾಪಾರಿ, ಗ್ರಾಮೀಣ ಮಹಿಳೆ, ಕೂಲಿ ಕುಟುಂಬ ಎಲ್ಲರೂ ಒಂದೇ ಆರ್ಥಿಕ ಆಘಾತಕ್ಕೆ ಸಿಲುಕುತ್ತಾರೆ. ಇಂತಹ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆ ಕೆರೆ ಹೂಳೆತ್ತುವುದು, ಜಲ ಸಂರಕ್ಷಣೆ, ಮಣ್ಣಿನ ಸಂರಕ್ಷಣೆ, ಕೃಷಿ ಹೊಂಡ, ನೀರು ಹರಿವಿನ ಕಾಲುವೆ ಮುಂತಾದ ಕೆಲಸಗಳನ್ನು ಕೈಗೊಳ್ಳುವುದರಿಂದ ಎರಡು ರೀತಿಯ ಪ್ರಯೋಜನವಾಗುತ್ತದೆ.
ತಕ್ಷಣಕ್ಕೆ ಕಾರ್ಮಿಕನ ಕೈಗೆ ಕೂಲಿ ಸಿಗುತ್ತದೆ; ದೀರ್ಘಾವಧಿಯಲ್ಲಿ ಬರವನ್ನು ಎದುರಿಸಲು ಗ್ರಾಮಕ್ಕೆ ಅಗತ್ಯವಾದ ನೀರು ಮತ್ತು ಭೂಸಂಪನ್ಮೂಲ ಆಸ್ತಿಗಳು ನಿರ್ಮಾಣವಾಗುತ್ತವೆ. ಹೀಗಾಗಿ ಉದ್ಯೋಗ ಖಾತರಿಯನ್ನು ದುರ್ಬಲಗೊಳಿಸುವುದು ಕೇವಲ ಇಂದಿನ ಕಾರ್ಮಿಕನ ಕೂಲಿಯನ್ನು ಕಡಿಮೆ ಮಾಡುವ ಪ್ರಶ್ನೆಯಲ್ಲ; ಭವಿಷ್ಯದ ಬರ ನಿರ್ವಹಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಆಡಳಿತಾತ್ಮಕ ಪರಿವರ್ತನೆ ಮತ್ತು ರಾಜ್ಯವಾರು ಅನುಷ್ಠಾನ ವಿಫಲವಾಗಿರುವುದು ಜಗಜ್ಜಾಹೀರಾಗಿದೆ. ಮನರೇಗಾದ ನಿಜವಾದ ಶಕ್ತಿ ಅದರ ?ಉದ್ಯೋಗ ಖಾತರಿ? ಎಂಬ ಪರಿಕಲ್ಪನೆಯಲ್ಲಿತ್ತು. ಸಾಮಾನ್ಯ ಸರ್ಕಾರಿ ಯೋಜನೆಯಲ್ಲಿ ಸರ್ಕಾರ ಯಾವುದೋ ಕಾಮಗಾರಿಯನ್ನು ಘೋಷಿಸುತ್ತದೆ ಮತ್ತು ಅದಕ್ಕೆ ಕಾರ್ಮಿಕರನ್ನು ನೇಮಿಸುತ್ತದೆ. ಆದರೆ ಉದ್ಯೋಗ ಖಾತರಿ ಕಾಯ್ದೆಯ ತಾತ್ವಿಕ ನೆಲೆ ಇದಕ್ಕಿಂತ ಭಿನ್ನ. ಗ್ರಾಮೀಣ ಕುಟುಂಬದ ವಯಸ್ಕ ಕೌಶಲ್ಯರಹಿತ ಸದಸ್ಯರು ದೈಹಿಕ ಕೆಲಸಕ್ಕೆ ಸಿದ್ಧರಿದ್ದರೆ ಅವರು ಉದ್ಯೋಗ ಕೇಳಬಹುದು ಮತ್ತು ಸರ್ಕಾರ ಅದಕ್ಕೆ ಸ್ಪಂದಿಸಬೇಕು ಎಂಬು ಹಕ್ಕು ಆಧಾರಿತ ವ್ಯವಸ್ಥೆ ಇದರ ಮೂಲವಾಗಿತ್ತು.
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ವಿಬಿ-ಜಿರಾಮ್‌ಜಿ ಯೋಜನೆಯನ್ನು ಸಮರ್ಪಕ ವಾಗಿ ಬಳಸಿಕೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಯಾಗದೆ, ಜನರು ಬೇರೆ ಕಡೆಗೆ ವಲಸೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಉದ್ಯೋಗ ಸೃಷ್ಟಿಸದ ಪಿಡಿಒಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳುತ್ತೇವೆ.
ಡಿ.ಕೆ. ಶಿವಕುಮಾರ್ , ಮುಖ್ಯಮಂತ್ರಿ.








