ಇಂದಿನಿ0ದ ಅಧಿವೇಶನ – ವಿಪಕ್ಷಗಳ ಬತ್ತಳಿಕೆಯಲ್ಲಿ ಅಸ್ತ| ಶ್ರಾವಣದ ಶುಭಘಳಿಗೆಯಲ್ಲಿ ಸದನ ಆರಂಭ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಾಲಿಗೆ ತೀವ್ರ ಸವಾಲಾಗಲಿರುವ ಮುಂಗಾರು ಅಧಿವೇಶನ ಇಂದಿAದ ಆರಂಭವಾಗಲಿದೆ. ಆಗಸ್ಟ್ 27ರವರೆಗೆ ಒಟ್ಟು 10 ದಿನಗಳ ಕಾಲ ನಡೆಯಲಿರುವ ಈ ಕಲಾಪವು, ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಆಡಳಿತ ಹಾಗೂ ನಿಭಾಯಿಸುವ ಸಾಮರ್ಥ್ಯವನ್ನು ನೋಡಲು ರಾಜ್ಯ ಕುತೂಹಲದಿಂದ ಕಾದಿದೆ. ಸದನವನ್ನು ಯಾವ ರೀತಿ ನಿಭಾಯಿಸುತ್ತಾರೆ, ಸುಗಮ ಕಲಾಪಕ್ಕೆ ಏನೆಲ್ಲಾ ನೀತಿ ನಿಲುವುಗಳನ್ನು ಕೈಗೊಳ್ಳಲಿದ್ದಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.
ಸಿದ್ದರಾಮಯ್ಯನವರ ನಿರ್ಗಮನದ ಬಳಿಕ ರಾಜ್ಯ ರಾಜಕಾರಣದಲ್ಲಿ ನಡೆದಿರುವ ಕ್ಷಿಪ್ರ ಬೆಳವಣಿಗೆಗಳು, ಸಚಿವ ಸಂಪುಟ ವಿಸ್ತರಣೆಯ ಬಳಿಕ ಭುಗಿಲೆದ್ದಿರುವ ಕಾಂಗ್ರೆಸ್‌ನ ಆಂತರಿಕ ಅಸಮಾಧಾನಗಳ ನಡುವೆಯೇ ಈ ಅಧಿವೇಶನ ನಡೆಯುತ್ತಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ತೀವ್ರ ಜಟಾಪಟಿಗೆ ಸದನ ಸಾಕ್ಷಿಯಾಗುವುದು ನಿಶ್ಚಿತವಾಗಿದೆ.
ವಿಪಕ್ಷಗಳ ಬತ್ತಳಿಕೆಯಲ್ಲಿ ಅಸ್ತçಗಳು
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸರ್ವಸನ್ನದ್ಧವಾಗಿವೆ. ಬರ ನಿರ್ವಹಣೆಯಲ್ಲಿನ ವೈಫಲ್ಯ, ಕೆಪಿಎಸ್‌ಸಿ ಹಗರಣ, ಬಿಡದಿ ಟೌನ್‌ಶಿಪ್ ವಿವಾದ, ಗೃಹಲಕ್ಷಿ÷್ಮ ಯೋಜನೆಯ ಹಣ ಪಾವತಿಯಾಗದಿರುವುದು, ಮೇಕೆದಾಟು ಯೋಜನೆ ಹಾಗೂ ಪಿಂಚಣಿ ಬಾಕಿ ವಿಚಾರಗಳನ್ನು ಮುಂದಿಟ್ಟುಕೊAಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ತಂತ್ರ ಹೆಣೆದಿವೆ. ಎಲ್ಲಕ್ಕಿಂತ ಮಿಗಿಲಾಗಿ, ವಾಲ್ಮೀಕಿ ಹಗರಣದ ಆರೋಪ ಹೊತ್ತಿರುವ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸದನದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟುಹಿಡಿದು ಪ್ರತಿಪಕ್ಷಗಳು ದೊಡ್ಡ ಮಟ್ಟದ ಹೋರಾಟ ನಡೆಸಲು ಸಿದ್ಧತೆ ನಡೆಸಿವೆ. ಇದರ ಜೊತೆಗೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ವಿಚಾರಗಳೂ ಕಲಾಪದಲ್ಲಿ ಭಾರಿ ಸದ್ದು ಮಾಡಲಿವೆ.
ಆಡಳಿತ ಸರ್ಕಾರದ ಪ್ರತ್ಯಾಸ್ತç
ವಿಪಕ್ಷಗಳ ಟೀಕಾಸ್ತçಗಳನ್ನು ಎದುರಿಸಲು ಆಡಳಿತರೂಢ ಕಾಂಗ್ರೆಸ್ ಕೂಡ ತನ್ನದೇ ಆದ ಪ್ರತ್ಯಾಸ್ತçಗಳನ್ನು ಸಿದ್ಧಪಡಿಸಿಕೊಂಡಿದೆ. ನೀಟ್ ಪರೀಕ್ಷೆಯ ವಿವಾದ, ದೆಹಲಿಯ ಜಂತರ್-ಮAತರ್‌ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಮುಂದಿಟ್ಟುಕೊAಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಆದರೂ, ಸಚಿವ ಸ್ಥಾನ ವಂಚಿತ ಶಾಸಕರ ಮುನಿಸು ಸದನದಲ್ಲಿ ಯಾವ ರೀತಿ ಸ್ಫೋಟಗೊಳ್ಳಲಿದೆ ಮತ್ತು ಆಂತರಿಕ ಭಿನ್ನಮತವನ್ನು ಬಳಸಿಕೊಂಡು ವಿಪಕ್ಷಗಳು ಮಾಡುವ ದಾಳಿಯನ್ನು ಸಿಎಂ ಡಿಕೆಶಿ ಹೇಗೆ ಎದುರಿಸುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಶುಭ ಮುಹೂರ್ತದಲ್ಲಿ ಸದನಕ್ಕೆ ಚಾಲನೆ
ಯಾವುದೇ ಹೊಸ ಕಾರ್ಯಕ್ಕೂ ಮುಹೂರ್ತ ನೋಡುವ ಸಿಎಂ ಡಿಕೆಶಿ, ಕಲಾಪಕ್ಕೂ ಶುಭಘಳಿಗೆಯನ್ನೇ ಆಯ್ಕೆ ಮಾಡಿದ್ದಾರೆ. ಸಾಮಾನ್ಯವಾಗಿ ಅಧಿವೇಶನ ಸೋಮವಾರ ಆರಂಭವಾಗುವುದು ವಾಡಿಕೆ. ಆದರೆ, ಆಷಾಡ ಕಳೆದು ಶ್ರಾವಣ ಮಾಸ ಆರಂಭವಾಗುವ ಗುರುವಾರದ ಶುಭ ದಿನದಂದೇ ತಮ್ಮ ಚೊಚ್ಚಲ ಕಲಾಪಕ್ಕೆ ಅವರು ಚಾಲನೆ ನೀಡುತ್ತಿದ್ದಾರೆ. ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ನಡೆಯಲಿದ್ದು, ಎರಡನೇ ದಿನ ವಿಧಾನಸಭಾಧ್ಯಕ್ಷರ ಚುನಾವಣೆ ನಡೆಯಲಿದೆ. ಆ ಬಳಿಕವಷ್ಟೇ ಕಲಾಪದ ಕಾವು ರಂಗೇರಲಿದೆ.
ಹಂಗಾಮಿ ಸಭಾಧ್ಯಕ್ಷರ ನೇತೃತ್ವದಲ್ಲಿ ಕಲಾಪ
ಇದೇ ಮೊದಲ ಬಾರಿಗೆ ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡರಲ್ಲೂ ಹಂಗಾಮಿ ಸಭಾಧ್ಯಕ್ಷರು ಕಲಾಪ ನಡೆಸಿಕೊಡುತ್ತಿರುವುದು ಈ ಬಾರಿಯ ವಿಶೇಷ. ವಿಧಾನಸಭೆಯ ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಹಾಗೂ ಉಪಾಧ್ಯಕ್ಷರಾಗಿದ್ದ ರುದ್ರಪ್ಪ ಲಮಾಣಿ ಅವರು ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗೆಯೇ, ವಿಧಾನಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಉಪಸಭಾಪತಿ ಎಂ.ಕೆ. ಪ್ರಾಣೇಶ್ ರಾಜೀನಾಮೆ ನೀಡಿರುವುದರಿಂದ, ಆ ಸ್ಥಾನಗಳಲ್ಲಿ ಟಿ.ಬಿ.ಜಯಚಂದ್ರ, ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಲಾಗಿದೆ.








