ಬಿಜೆಪಿಯ ಹೊಸ ತಂಡ ರಚನೆ

ನವದೆಹಲಿ: ಬಿಜೆಪಿ ಸೋಮವಾರ ತನ್ನ ಹೊಸ ರಾಷ್ಟಿçÃಯ ತಂಡವನ್ನು ಘೋಷಿಸಿದೆ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಈ ತಂಡದಲ್ಲಿ ಹಲವಾರು ಹೊಸ ಮುಖಗಳಿದ್ದು, ಅನುಭವ ಮತ್ತು ಯುವಕರ ಸಮ್ಮಿಶ್ರಣದಿಂದ ಕೂಡಿದೆ . ಮಹಿಳೆಯರಿಗೆ ಗಣನೀಯ ಪ್ರಾತಿನಿಧ್ಯ ನೀಡಲಾಗಿದೆ.

ಬಿಎಲ್ ಸಂತೋಷ್ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ಅಮೇಥಿಯ ಮಾಜಿ ಸಂಸದೆ ಸ್ಮöÈತಿ ಇರಾನಿ, ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ, ಗಜೇಂದ್ರ ಪಟೇಲ್, ಸತೀಶ್ ಪೂನಿಯಾ, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

ನಿತಿನ್ ನಬಿನ್ ಪಕ್ಷದ ಮುಖ್ಯಸ್ಥರಾದ ಸುಮಾರು ಆರು ತಿಂಗಳ ನಂತರ ಈ ಘೋಷಣೆ ಬಂದಿದೆ. ಪಕ್ಷವು ಹಲವಾರು ಹಿರಿಯ ನಾಯಕರನ್ನು ರಾಷ್ಟಿçÃಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್, ರಾಮ್ ಮಾಧವ್, ಬೈಜ್ಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯಿ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಮನ್‌ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಕರ್ನಾಟಕದ ಪ್ರೊ. ಎಂ. ನಾಗರಾಜ, ಪ್ರೊ. ತಾರಿಕ್ ಮನ್ಸೂರ್ ಮತ್ತು ಡಾ. ಮಧುಚಂದ್ರ ಕಾರ್ ಸೇರಿದ್ದಾರೆ. 13 ರಾಷ್ಟಿçÃಯ ಉಪಾಧ್ಯಕ್ಷರಲ್ಲಿ ಆರು ಮಂದಿ ಮಹಿಳೆಯರಿದ್ದಾರೆ.

ಬಿಜೆಪಿಯ ಅತ್ಯುನ್ನತ ಮಂಡಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ನಾಲ್ವರ ಮಾರ್ಗದರ್ಶಕ ತಂಡವಿದೆ. ಈ ನಾಲ್ವರು ಮಾರ್ಗದರ್ಶಕರು ಪಕ್ಷದ ಚೌಕಟ್ಟನ್ನು ರೂಪಿಸುತ್ತಾರೆ ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಿದ ಅನುಭವವನ್ನು ಧಾರೆ ಎರೆಯಲಿದ್ದಾರೆ.

ಮಾರ್ಗದರ್ಶಕ ತಂಡದ ನಂತರ 12 ಸದಸ್ಯರ ಸಂಸದೀಯ ಮಂಡಳಿ ಇದೆ. ಈ ಮಂಡಳಿಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದಾರೆ. ಮಂಡಳಿಯು ಹಿರಿಯ ಸಚಿವರು ಮತ್ತು ಸಂಘಟನಾ ಪ್ರಮುಖರನ್ನು ಒಳಗೊಂಡಿದೆ.
ಇನ್ನು ಕೇಂದ್ರ ಚುನಾವಣಾ ಸಮಿತಿ ಇದ್ದು, ಇದರಲ್ಲಿ 12 ಸಂಸದೀಯ ಮಂಡಳಿ ಸದಸ್ಯರು ಮತ್ತು ಮಹಾರಾಷ್ಟç ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಸೇರಿದ್ದಾರೆ.

ಬಾಕ್ಸ್
ನಿತಿನ್ ನಬಿನ್
ರಾಜನಾಥ್ ಸಿಂಗ್
ಅಮಿತ್ ಶಾ,
ಜೆ.ಪಿ. ನಡ್ಡಾ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ
ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್
ಒಬಿಸಿ ಸೆಲ್ ಮುಖ್ಯಸ್ಥ ಕೆ. ಲಕ್ಷ÷್ಮಣ್
ಪಂಜಾಬ್‌ನ ಇಕ್ಬಾಲ್ ಸಿಂಗ್ ಲಾಲ್‌ಪುರ
ಹರಿಯಾಣದ ಸುಧಾ ಯಾದವ್
ಮಧ್ಯಪ್ರದೇಶದ ನಾಯಕ ಸತ್ಯನಾರಾಯಣ್ ಜತಿಯಾ
ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್.

ಬಾಕ್ಸ್

ಮೋದಿ 4.0 ನಮ್ಮ ಗುರಿ
ರಾಷ್ಟಿçÃಯ ಉಪಾಧ್ಯಕ್ಷನಾಗಿರುವುದು ನನಗೆ ಬಹಳಷ್ಟು ಸಂತೋಷವಾಗುತ್ತಿದೆ. ನಾನು ಇಂತಹ ಸ್ಥಾನ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದು ರಾಜ್ಯದ ಹಿಂದುಳಿದ ವರ್ಗಗಳಿಗೆ ಈ ಜವಾಬ್ದಾರಿ ಸಿಕ್ಕಿದೆ . ನಮ್ಮ ಎಲ್ಲಾ ಜನಾಂಗದ ಪರವಾಗಿ ನಾನು ರಾಷ್ಟಿçÃಯ ಅಧ್ಯಕ್ಷರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ರಾಷ್ಟಿçÃಯ ಸಂಘಟನೆಕಾರರಾದ ಬಿ ಎಲ್ ಸಂತೋಷ್ ಮತ್ತು ಪ್ರಲ್ಹಾದ ಜೋಶಿ ಅವರಿಗೂ ಸಹ ಧನ್ಯವಾದಗಳು. ಕರ್ನಾಟಕದ 2028ರ ಚುನಾವಣೆ ನಮ್ಮ ಗುರಿ ಮತ್ತು ಫಲಿತಾಂಶ ನಮ್ಮ ಮುಂದಿರುವ ಸವಾಲು. ಬಳಿಕ ಮೋದಿ 4.0 ಕೂಡ ನಮ್ಮ ಗುರಿ. 2028ರಲ್ಲಿ ಕರ್ನಾಟಕವು ಬಿಜೆಪಿಯಿಂದ ಯಾವುದೇ ಕಾರಣಕ್ಕೂ ತಪ್ಪಲ್ಲ ಎಂದು ರಾಜ್ಯಸಭಾ ಸದಸ್ಯ ಪ್ರೋ. ಮಾ. ನಾಗರಾಜ್ ತಿಳಿಸಿದ್ದಾರೆ.

 

Recent Articles

spot_img

Related Stories

Share via
Copy link