
ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ ದಸರಾ ಗಜಪಡೆಯನ್ನು ಇಂದು ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಆಗಸ್ಟ್ 26 ರಂದು ಗಜಪಯಣದ ಮೂಲಕ ಆಗಮಿಸಿದ ದಸರಾ ಗಜಪಡೆ ಎರಡು ದಿನಗಳ ಕಾಲ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದು, ಈ ಗಜಪಡೆಗೆ ಇಂದು ಬೆಳಗ್ಗೆ ಅರಣ್ಯ ಇಲಾಖೆಯ ವತಿಯಿಂದ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಬಳಿಕ 9 ಗಜಪಡೆಯನ್ನು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಭದ್ರತೆಯಲ್ಲಿ ಅರಮನೆಗೆ ಕರೆತರಲಾಯಿತು.
ಗಜಪಡೆಗೆ ಅರಮನೆಯ ಆಡಳಿತ ಮಂಡಳಿಯ ವತಿಯಿಂದ ಸಾಂಪ್ರದಾಯಿಕ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಸಹ ಹಾಜರಿದ್ದರು. ವಿವಿಧ ಕಾಲ ತಂಡಗಳು ಗಜಪಡೆಯನ್ನು ಸ್ವಾಗತ ಮಾಡಿದವು.
ಈ ಸಂದರ್ಭದಲ್ಲಿ ಮಾಧ್ಯಮದವರಿಂದಿಗೆ ಮಾತನಾಡಿದ ಅರಣ್ಯ ಸಚಿವ ರಾಮಲಿಂಗರೆಡ್ಡಿ,
ಹನೂರು ಶೂಟೌಟ್ ವಿಚಾರ ತನಿಖೆ ಶುರುವಾಗಿದೆ. ಎಸಿ ವರದಿಗೂ ತನಿಖಾ ವರದಿಗೂ ಸಂಬAಧ ಇಲ್ಲ. ಇಲಾಖೆಯ ಆಸ್ತಿಯನ್ನು ನಾಶ ಮಾಡಿದವರ ಮೇಲೆ ಕ್ರಮ ಆಗುತ್ತದೆ. ಅಧಿಕಾರಿಗಳು ಹೆದರುವ ಅವಶ್ಯಕತೆ ಇಲ್ಲ. ಅಧಿಕಾರಿಗಳು ಧೈರ್ಯವಾಗಿ ಅರಣ್ಯಕ್ಕೆ ಹೋಗಿ ಕೆಲಸ ಮಾಡಿ, ಅಧಿಕಾರಿಗಳ ರಕ್ಷಣೆಗೆ ಇಲಾಖೆ ಬದ್ಧವಿದೆ” ಎಂದು ಹೇಳಿದರು.
ಅಂಬಾರಿ ಹೊರುವ ಆನೆಯ ಆಯ್ಕೆಯ ತೀರ್ಮಾನವನ್ನು ಅರಣ್ಯ ಇಲಾಖೆಗೆ ಬಿಟ್ಟಿದ್ದೇವೆ. ನಿತ್ಯ ತಾಲೀಮು ನಡೆಸುತ್ತಾರೆ. ತಾಲೀಮಿನ ನಂತರ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುವುದು.
– ರಾಮಲಿಂಗ ರೆಡ್ಡಿ ಅರಣ್ಯ ಸಚಿವ
ಮುಡಾ ವಿಚಾರದಲ್ಲಿ ಅಕ್ರಮವಾಗಿ ಸೈಟ್ ಪಡೆದ ಎಲ್ಲಾ ಸೈಟ್?ಗಳನ್ನು ರದ್ದು ಮಾಡಿದ್ದೇವೆ. ಮುಂದೆ ಕಾನೂನು ರೀತಿ ಇಲ್ಲದ ಸೈಟ್?ಗಳನ್ನು ರದ್ದು ಮಾಡುತ್ತೇವೆ. ಇನ್ನು ಸಚಿವ ನಾಗೇಂದ್ರ ಯಾವುದೇ ತಪುö್ಪ ಮಾಡಿಲ್ಲ. ತಪುö್ಪ ಮಾಡಿದ್ದರೆ ಬಿಜೆಪಿಯವರು ಚರ್ಚೆಗೆ ಬರಬೇಕಿತ್ತು. ಸದನದಲ್ಲಿ ಗದ್ದಲ ಮಾಡಿ ಅಧಿವೇಶನ ಹಾಳು ಮಾಡುತ್ತಿದ್ದಾರೆ. ಈಗ ಸಚಿವ ನಾಗೇಂದ್ರ ವಿಚಾರದಲ್ಲಿ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ.
-ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು
“ಆಗಸ್ಟ್ 28 ರಂದು 9 ಗಜಪಡೆಗಳಾದ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಹಾಗೂ ಹೆಣ್ಣು ಆನೆಗಳಾದ ಲಕ್ಷಿ ಮತ್ತು ಕಾವೇರಿ ಅರಮನೆಗೆ ಪ್ರವೇಶ ಮಾಡಿದ ಆನೆಗಳಾಗಿದ್ದು, ಈ ಆನೆಗಳ ತೂಕದ ನಂತರ ಜಂಬೂಸವಾರಿಗೆ ಸಿದ್ಧ ಮಾಡುವ ತಾಲೀಮು ಆರಂಭವಾಗುತ್ತದೆ” ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.








