ಹಾಲು ಮತ ಸಮಾಜಕ್ಕೆ ಋಣಿಯಾಗಿದ್ದೇನೆ.: ಶಾಸಕ ಪಿ.ಟಿ.ಪರಮೇಶ್ವರನಾಯ್ಕ

 ಹೂವಿನಹಡಗಲಿ:

      ಹಾಲು ಮತ ಸಮಾಜಕ್ಕೆ ನಾನು ಋಣಿಯಾಗಿದ್ದೇನೆ ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ಅವರು ಪಟ್ಟಣದ ಕನಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕನಕ ಪತ್ತಿನ ಸಹಕಾರಿ ಸಂಘದ ಕಟ್ಟಡದ ಭೂಮಿ ಪೂಜೆ, ಶ್ರೀಗಳಿಗೆ ತುಲಾ ಭಾರ , ಶಾಸಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

      2013 ರ ಚುನಾವಣೆಯಲ್ಲಿ ರಾಜ್ಯದ ಧೀಮಂತ ನಾಯಕರು ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯುನವರು ತಾಲೂಕಿನ ಕಾಲ್ವಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲು ಮತ ಸಮಾಜಕ್ಕೆ ನನ್ನನ್ನು ಬೆಂಬಲಿಸುವಂತೆ ಸಊಚನೆ ನೀಡಿದ್ದರು. ಅದೇ ರೀತಿ ಕಾಗಿನೆಲೆ ಕನಕ ಗುರು ಪೀಠದ ಶ್ರೀಗಳಾದ ನಿರಂಜನಾಂದ ಪುರಿಗಳು ಕೂಡಾ ನನ್ನನ್ನು ಆಶೀರ್ವದಿಸಿದ್ದರು.

      2018 ರ ಚುನಾವಣೆಯಲ್ಲಿ ಹಾಲು ಮತ ಸಮಾಜ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು ಹೇಳಿ ಕೊಳ್ಳಲು ನನಗೆ ಯಾವುದೇ ಅಂಜಿಕೆ ಇಲ್ಲ ಎಂದರು.

      ಸಮಾಜದ ಹಿತ ಕಾಯಲು ಸದಾ ಸನ್ನದ್ಧ ನಾಗಿದ್ದೇನೆ ಎಂದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಕನಕ ಸಮುಯದಾಯ ಭವನ ಕಟ್ಟಡದ ಸಂಪೂರ್ಣ ಜವಬ್ದಾರಿ ಮತ್ತು ಕಾಂಪೌಡ್ ಅಲ್ಲದೇ ಉತ್ತಮ ಕಚೇರಿಯನ್ನು ಸಹ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

      ಆಶೀರ್ವಚನ ನೀಡಿ ಮಾತನಾಡಿದ ಕಾಗಿನೆಲೆ ಕನಕ ಗುರು ಪೀಠದ ನಿರಂಜನಾನಂದ ಪುರಿ ಸ್ವಾಮಿಗಳು ಕನಕ ಸಹಕಾರ ಪತ್ತಿನ ಸಂಘವು ಒಂದು ಕೋಟಿಗೂ ಹೆಚ್ಚು ರೂಗಳ ಲಾಭವನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ವ್ಯವಸ್ಥೆಯಲ್ಲಿ ಬದಲಾವಣೆ ಬರಬೇಕಾದ ಅವಶ್ಯಕೆತೆ ಇದ್ದು ಸಹಕಾರ ಸಂಘದ ಪಧಾಧಿಕಾರಿಗಳು ಪ್ರಮಾಣಿಕತೆಯನ್ನು ರೂಢಿಸಿಕೊಂಡು ಸಂಘದ ಏಳಿಗೆಗೆ ಶ್ರಮಿಸಬೇಕೆಂದು ಹೇಳಿದರು. ಪ್ರಾಸ್ತವಿಕವಾಗಿ ರಾಜ್ಯ ಕುರುಬ ಸಂಘದ ನಿರ್ದೇಶಕ ಹನುಮಂತಪ್ಪ ಮಾತನಾಡಿದರು.

      ಕಾರ್ಯಕ್ರಮ ಅಧ್ಯಕ್ಷತೆಯನ್ನು ಕನಕ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಹಳ್ಳಿಗುಡಿ ವಿಶ್ವನಾಥ ವಹಿಸಿದ್ದರು.
ಈ ಸಂಧರ್ಭದಲ್ಲಿ ಕಾಗಿನೆಲೆ ಗುರು ಪೀಠದ ಧರ್ಮದರ್ಶಿ ಕೆ.ಎಂ. ಹಾಲಪ್ಪ, ಕುರುಬ ಸಮಾಜದ ಜಿಲ್ಲಾ ಧ್ಯಕ್ಷ ಎರೇಗೌಡ, ಕುರಿ ಮತ್ತು ಹುಣ್ಣೆ ನಿಗಮದ ಮಾಜಿ ಅಧ್ಯಕ್ಷ ಕೃಷ್ಣ, ಕಲ್ ಕಂಬದ ಪಂಪಾಪತಿ, ಗುರುವಿನ ಕೊಟ್ರಯ್ಯ, ವೆಂಕಟೇಶ ರಾಮಸ್ವಾಮಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಹೊಸಕೇರಿ ಬೀರಪ್ಪ, ಜಿ.ಪಂ. ಸದಸ್ಯೆ ವೀಣಾ ಪರಮೇಶ್ವರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪರಮೇಶ್ವರಪ್ಪ, ಪುರಸಭೆ ಉಪಾಧ್ಯಕ್ಷ ಎಸ್. ತಿಮ್ಮಣ್ಣ, ಪಿಕಾರ್ಡ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ. ಬಸಪ್ಪ, ಗುರುವಿನ ರಾಜು, ಈಟಿ ಹನುಮೇಶಿ, ಆರ್ . ಪಕ್ಕೀರಪ್ಪ, ವೈ.ಶಿವರಾಯನಗೌಡ ಸೇರಿದಂತೆ ಹಲವರು ಇದ್ದರು.
ಇದೇ ಸಂದರ್ಭದಲ್ಲಿ ಬಿ. ಪ್ರೇಮಕ್ಕ ಹನುಮಂತಪ್ಪ ಕುಟುಂಬ ವರ್ಗದಿಂದ ಶ್ರೀ ಗಳಿಗೆ ತುಲಾ ಭಾರ ನೆರವೇರಿಸಲಾಯಿತು. ಹಾಗೂ ಸಮಾಜದ ವತಿಯಿಂದ ಕಂಬಳಿ ಹೊದಿಸಿ ಶಾಸಕರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link