ರಸ್ತೆ ಅಪಘಾತ ಸಾಫ್ಟ್ ವೇರ್ ಇಂಜಿನಿಯರ್ ಸಾವು

ಬೆಂಗಳೂರು:

             ವೇಗವಾಗಿ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರು ರಸ್ತೆ ಉಬ್ಬು (ಹಂಪ್) ಎಗರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಹೆಚ್‍ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೋರ್‍ವೆಲ್ ಬಸ್ ನಿಲ್ದಾಣದ ಬಳಿ ನಡೆದಿದೆ.

              ಮೃತಪಟ್ಟವರನ್ನು ಮಾರತ್‍ಹಳ್ಳಿಯ ಡ್ಯಾನಿಯಲ್ ಬಾಬಿ ಕುಮಾರ್ (23)ಎಂದು ಗುರುತಿಸಲಾಗಿದೆ.ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಬಿ ಕುಮಾರ್ ಮಾರತ್‍ಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.

              ರಾತ್ರಿಪಾಳೆಯದಲ್ಲಿ ಕೆಲಸ ಮುಗಿಸಿಕೊಂಡು ಬುಧವಾರ ಮಧ್ಯರಾತ್ರಿ 1.15ರ ವೇಳೆ ಮನೆಗೆ ಹೋಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ವೇಗವಾಗಿ ಬರುತ್ತಿದ್ದ ಬಾಬಿ ಕುಮಾರ್ ಮಾರ್ಗಮಧ್ಯೆ ಬೋರ್‍ವೆಲ್ ಬಸ್ ನಿಲ್ದಾಣದ ಬಳಿ ಕತ್ತಲಲ್ಲಿ ಸರಿಯಾಗಿ ಕಾಣದೆ ಹಂಪ್ ಎಗರಿಸಿ ಆಯಾತಪ್ಪಿ ಕೆಳಗೆ ಬಿದಿದ್ದಾರೆ.

              ಗಂಭೀರವಾಗಿ ತಲೆಗೆ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿರುವ ಹೆಚ್.ಎ.ಎಲ್. ವಿಮಾನ ನಿಲ್ದಾಣದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ನೇಹಿತನ ಮೇಲೆ ಹಲ್ಲೆ.

                 

Recent Articles

spot_img

Related Stories

Share via
Copy link