ಅಹಮದಾಬಾದ್:
ದೇಶದ ಇತಿಹಾಸದಲ್ಲೇ ಎಂದೂಮರೆಯಲಾಗದ ಘಟನೆ 2002ರಲ್ಲಿ ಕರಸೇವಕರಿದ್ದ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಇಂದು ಶಿಕ್ಷೆ ಪ್ರಕಟಿಸಿತು. ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಸರಬಮತಿ ಎಕ್ಸ್ ಪ್ರೆಸ್ ನ ಎರಡು ಕೋಚ್ ಗಳಿಗೆ ಬೆಂಕಿ ಹಚ್ಚಿದ್ದರಿಂದ 59ಕರಸೇವಕರು ಜೀವಂತವಾಗಿ ಬೆಂಕಿಗೆ ಆಹುತಿಯಾಗಿದ್ದರು. ಪ್ರಕರಣವನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿರುವ ವಿಶೇಷ ನ್ಯಾಯಾಲಯದ ಜಡ್ಜ್ ಎಚ್ ಸಿ ವೋರಾ ಅವರು ಮೂವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ, ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಅಪರಾಧಿಗಳಾದ ಫರೂಕ್ ಭಾನಾ ಹಾಗೂ ಇಮ್ರಾನ್ ಶೇರು ಅವರುಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಹುಸೇನ್ ಸುಲೇಮಾನ್ ಮೋಹನ್, ಕಾಸಂ ಭಾಮೆಡಿ, ಫಾರುಖ್ ಧಾಂಟಿಯಾ ಅವರನ್ನು ಖುಲಾಸೆಗೊಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








