ಏಷ್ಯನ್ ಗೇಮ್ಸ್: ಒಲಂಪಿಕ್ ಚಾಂಪಿಯನ್ ಮಣಿಸಿ ಚಿನ್ನ ಗೆದ್ದ ಬಾಕ್ಸರ್ ಅಮಿತ್ ಪಂಘಾಲ್!

ಜಕಾರ್ತಾ:

            ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಬಾಕ್ಸರ್ ಅಮಿತ್ ಪಂಘಾಲ್ ಪುರುಷರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.ಉಜ್ಬೇಕಿಸ್ತಾನದ ಒಲಂಪಿಕ್ ಚಾಂಪಿಯನ್ ಹಸನ್ಬಾಯ್ ಡಸ್ಮಮಾವ್ ಅವರನ್ನು ಮಣಿಸಿ  ಅಮಿತ್ ಪಂಘಾಲ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಪಂದ್ಯದಲ್ಲಿ ಎದುರಾಳಿ ಪ್ರಾಬಲ್ಯಕ್ಕೆ ಅವಕಾಶ ನೀಡದೇ ಪಂಚ್ ನೀಡಿರುವ ಅಮಿತ್ ಪಂಘಾಲ್ ಫೈನಲ್ಸ್ ನಲ್ಲಿ ಗೆದ್ದಿರುವ ಭಾರತದ ಏಕೈಕ ಬಾಕ್ಸರ್ ಆಗಿದ್ದಾರ್. ಪ್ರಾರಂಭದ ಹಂತದಲ್ಲಿ ಎದುರಾಳಿಯ ವಿರುದ್ಧ ಅಮಿತ್ ಪಂಘಾಲ್ ಸ್ವಲ್ಪ ಮಟ್ಟಿಗಿನ ಹಿನ್ನಡೆ ಎದುರಿಸಿದರಾದರೂ ಎರಡನೇ ಸುತ್ತಿನಲ್ಲಿ ಎದುರಾಳಿಯ ವಿರುದ್ಧ ಪ್ರಾಬಲ್ಯ ಮೆರೆದರು. ಕಳೆದ ವರ್ಷ ಹಮ್ಬರ್ಗ್ ವಿಶ್ವ ಚಾಂಪಿಯನ್ಶಿಪ್  ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಪಂಘಾಲ್ ಇದೇ  ಡಸ್ಮಮಾವ್ ಎದುರು ಸೋತಿದ್ದರು.  2016 ರ ರಿಯೋ ಒಲಂಪಿಕ್ಸ್ ನಲ್ಲಿ ಉಜ್ಬೇಕಿಸ್ತಾನದ ಹಸನ್ಬಾಯ್ ಡಸ್ಮಮಾವ್ ಚಿನ್ನದ ಪದಕ ಗೆದ್ದಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link