ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗೆ ಚಾಲನೆ

ಬಳ್ಳಾರಿ:

  ನಗರದ ಅನಂತಪೂರ ರಸ್ತೆಯ ಬಿಪಿಎಸ್‍ಸಿ ಶಾಲೆಯಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ಗೆ ಶನಿವಾರ ಚಾಲನೆ ನೀಡಲಾಯಿತು. ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರ ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ ಹಾಗೂ ಹೆಬ್ಬಟ್ಟಿನ ಗುರುತು ಪಡೆದು ಅಂಚೇ ಕಚೇರಿ ಸಿಬ್ಬಂದಿಯೋಬ್ಬರು ಕೇಂದ್ರ ಸರ್ಕಾರದ ನೂತನ ಯೋಜನೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನಲ್ಲಿ ಮೂರೇ ನಿಮಿಷದಲ್ಲಿ ಖಾತೆ ತೆರೆದರು.

  ಈ ಸಂದರ್ಭದಲ್ಲಿ ವಿವಿಧ ಗಣ್ಯರು ಹಾಗೂ ಅಂಚೆ ಇಲಾಖೆ ಅಧಿಕಾರಿಗಳು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ್, ಹೊಸ ಶಾಖೆಯ ವ್ಯವಸ್ಥಾಪಕ ಶ್ರೀರಾಮ್ ದಿವಾನ್, ಅಂಚೆ ಕಚೇರಿಯ ಅಧೀಕ್ಷಕ ಕೆ.ಬಸವರಾಜ್, ಬಿಎಸ್‍ಸಿ ಕಾಲೇಜು ಪ್ರಾಚಾರ್ಯ ಹರಿಕುಮಾರ್, ಬಿಪಿಎಸ್‍ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೆಂಕಟ ಮಹಿಪಾಲ್, ಪಾಲಿಕೆ ಸದಸ್ಯ ಎಸ್.ಮಲ್ಲನಗೌಡ, ಅಂಚೆ ಕೊಟ್ರೇಶ್ ಸೇರಿದಂತೆ ಇತರರು ಇದ್ದರು. ಈ ಸಂದರ್ಭದಲ್ಲಿ ಭಗವಂತ, ಮಲ್ಲಮ್ಮ, ದೇವರೆಡ್ಡಿ ಎನ್ನುವವರಿಗೆ ಹೊಸ ಯೋಜನೆಯ ಬ್ಯಾಂಕ್ ಖಾತೆಯ ಕಾರ್ಡ್‍ಗಳನ್ನು ವಿತರಿಸಲಾಯಿತು.

Recent Articles

spot_img

Related Stories

Share via
Copy link