ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಂದ ಭೂಪ

ಬೆಂಗಳೂರು:

      ಊಟ ಕೊಡದೆ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಆಕ್ರೋಶಗೊಂಡು ಗೋಡೆಗೆ ತಲೆಗೆ ಗುದ್ದಿ ಪತ್ನಿಯನ್ನು ಕೊಲೆ ಮಾಡಿ ಹಸು ಕೊಂಬಿನಿಂದ ತಿವಿದು ಮೃತಪಟ್ಟಿದ್ದಳೆ ಎಂದು ಕತೆ ಕಟ್ಟಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಪತಿಯನ್ನು ಚಿಕ್ಕಬಳ್ಳಾಪುರದ ಗುಡಿಬಂಡೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಗುಡಿಬಂಡೆಯ ಕೊಂಡರೆಡ್ಡಿಹಳ್ಳಿಯ ರತ್ನಮ್ಮ (43) ಕೊಲೆಯನ್ನು ಕೊಲೆಗೈದ ಪತಿ ಸೂರಪ್ಪರೆಡ್ಡಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

      ಇಪ್ಪತ್ತು ವರ್ಷಗಳ ಹಿಂದೆ ಸೂರಪ್ಪರೆಡ್ಡಿಯನ್ನು ವಿವಾಹವಾಗಿದ್ದ ರತ್ನಮ್ಮ ಕೃಷಿ ಕೆಲಸ ಮಾಡಿಕೊಂಡಿದ್ದರು . ಕೋಪಿಷ್ಟನಾಗಿದ್ದ ಸೂರಪ್ಪ ರೆಡ್ಡಿಯು ಆಗಾಗ ಪತ್ನಿ ಜೊತೆ ಜಗಳ ಮಾಡುತ್ತಿದ್ದನು.ಸೂರಪ್ಪರೆಡ್ಡಿ ಶನಿವಾರ ತೋಟದಿಂದ ಕೆಲಸ ಮುಗಿಸಿಕೊಂಡು ಹಸಿವಿನಿಂದ ಮನೆಗೆ ಊಟಕ್ಕೆ ಮನೆಗೆ ಬಂದಿದ್ದು ಪತಿಯನ್ನು ಗಮನಿಸದೇ ಪತ್ನಿ ರತ್ನಮ್ಮ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು ಇದನ್ನು ಕಂಡು ರೆಡ್ಡಿ ಗಲಾಟೆ ಮಾಡಿದ್ದಾನೆ.ಈ ಜಗಳ ತಾರಕಕ್ಕೇರಿ ರತ್ನಮ್ಮಳಿಗೆ ಕಪಾಳಮೋಕ್ಷ ಮಾಡಿ, ನಂತರ ಆಕೆಯ ತಲೆಯನ್ನ ಹಿಡಿದು ಗೋಡೆಗೆ ಗುದ್ದಿದ್ದಾನೆ.ನೆಲಕ್ಕೆ ಕುಸಿದುಬಿದ್ದ ಅಸ್ವಸ್ಥರಾಗಿದ್ದ ರತ್ನಮ್ಮಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದರು.

ತಮ್ಮನಿಂದ ಸಿಕ್ಕಿಬಿದ್ದ:

      ಇದರಿಂದ ಭಯಬೀತಗೊಂಡ ಸೂರಪ್ಪರೆಡ್ಡಿ, ಮನೆ ಬಳಿ ಹಸು ತಲೆಗೆ ತಿವಿದು ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರೆಲ್ಲರಿಗೂ ಹೇಳಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿದ್ದಾನೆ. ಆದರೆ ಅಕ್ಕನ ಸಾವಿನ ಬಗ್ಗೆ ಅನುಮಾನಗೊಂಡ ರತ್ನಮ್ಮಳ ತಮ್ಮ ಮಹೇಶ್ ಈ ಬಗ್ಗೆ ಗುಡಿಬಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಕೂಡಲೇ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿವಿಚಾರಣೆ ನಡೆಸಿದಾಗ ಸೂರಪ್ಪರೆಡ್ಡಿ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link