ಛಾಯಾ ಗ್ರಾಹಕರ ವೃತ್ತಿಗೆ ಆರ್ಥಿಕ ಬಲವರ್ಧನೆಗೆ ಆಗ್ರಹ

ಶಿಗ್ಗಾವಿ 

              ಛಾಯಾ ಗ್ರಾಹಕರ ವೃತ್ತಿ ಆರ್ಥಿಕ ವಲಯದ ವೃತ್ತಿಯಲ್ಲ ಬದಲಾಗಿ ಅದು ಸೇವಾ ವಲಯದ ವೃತ್ತಿಯಾಗಿದೆ, ಈ ವಲಯದವರಿಗೆ ಆರ್ಥಿಕವಾಗಿ ಬಲಪಡಿಸುವಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಿದೆ ಎಂದು ಭರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂಥ ದುಂಡಿಗೌಡ್ರ ಹೇಳಿದರು.
                ಪಟ್ಟಣದ ವಿಠಲ್ ರುಖುಮಾಯಿ ದೇವಸ್ಥಾನದ ಸಭಾ ಭವನದಲ್ಲಿ ತಾಲೂಕಾ ಶ್ರೀ ಸತ್ಯಸಾಯಿ ಛಾಯಾಗ್ರಾಹಕರ ಸಂಘದ ವತಿಯಿಂದ ಹಮ್ಮಿಕೊಂಡ 179 ನೇ ವಿಶ್ವ ಛಾಯಾಗ್ರಹಣ ದಿನಾಚಾರಣೆ ಕಾರ್ಯಕ್ರಮದಲ್ಲಿ ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಛಾಯಾಗ್ರಾಹಕರು ನಮ್ಮ ಚಿತ್ರಗಳನ್ನು ಕಾದಿಡುವ ಮತ್ತು ಅದನ್ನು ಉಳಿಸಿಕೊಂಡು ಬರುವ ವೃತ್ತಿ ಮಾಡುತ್ತಿದ್ದು ಇದರಿಂದ ಅವರಿಗೆ ವೃತ್ತಿ ಗೌರವ ಲಬಿಸುತ್ತಿದೆ ಮತ್ತು ನಮ್ಮ ನೆನಪುಗಳನ್ನು ಮರುಕಳಿಸುವಂತ ವೃತ್ತಿ ಇವರದ್ದಾಗಿದೆ, ಈ ಕ್ಷೇತ್ರದಲ್ಲಿ ಎಲ್ಲರೂ ಪ್ರತಿಭಾವಂತರೆ, ಇವರು ಸಾಮಾಜಿಕ ಸೇವೆಯ ವೃತ್ತಿಯನ್ನು ಮಾಡುತ್ತಿದ್ದಾರೆ, ಬೇರೆ ಕ್ಷೇತ್ರಗಳಿದ್ದಂತೆ ಈ ಕ್ಷೇತ್ರದಲ್ಲಿ ಆರ್ಥಿಕ ಬದಲಾವಣೆಗೆ ಅವಕಾಶವಿಲ್ಲ, ಇವರಿಗೆ ಸರ್ಕಾರದಿಂದ ಗೌರವ ಧನ ಸಿಗುವಂತಾಗಬೇಕು, ಸಂಘಟನೆಯೊಂದಿಗೆ ಸರ್ಕಾರದ ಗಮನ ಸೆಳೆಯುವಂತ ಕಾರ್ಯವನ್ನು ಛಾಯಾಗ್ರಾಹಕರು ಮಾಡಬೇಕಿದೆ, ಶಿಗ್ಗಾವಿ ತಾಲೂಕಿನಲ್ಲಿ ಛಾಯಾಗ್ರಾಹಕರು ಹುಬ್ಬಳ್ಳಿ ಹಾಗೂ ಹಾವೇರಿಗೆ ತಮ್ಮ ಪೋಟೋಗಳಿಗೆ ಪ್ರೀಂಟ್ ಹಾಕಿಸಲು ಹೊಗುತ್ತಾರೆ ಆದರಿಂದ ಸಂಘಟನೆಯ ಪದಾಧಿಕಾರಿಗಳು ಇಲ್ಲೆ ಪ್ರೀಟ್ ಕಾರ್ಯವನ್ನು ಮಾಡಲು ಮುಂದಾದರೆ ನಾನು ಅವರಿಗೆ ಆರ್ಥಿಕ ಸಹಾಯ ಮಾಡುವದಾಗಿ ಹೇಳಿದರು.
                  ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಮಾತನಾಡಿ ನಮ್ಮ ಪೂರ್ವಜರನ್ನು ನೋಡುವಂತಹ ಸೌಭಾಗ್ಯವನ್ನು ಕಲ್ಪಿಸಿಕೊಟ್ಟವರು ಛಾಯಾಗ್ರಾಹಕರು, ಅವರ ಕಲೆ ಅದ್ಭೂತವಾದದ್ದು ಇವರಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗಬೇಕು ಮತ್ತು ಅದಕ್ಕಾಗಿ ನಾನು ಸಹ ಶ್ರಮಿಸುವದಾಗಿ ತಿಳಿಸಿದರು.
                  ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ ಪ್ರಾಸ್ಥಾವಿಕವಾಗಿ ಮಾತನಾಡಿ ಇಂದು ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಅಭಿವೃದ್ದಿಗೆ ಹೊಂದಿಕೊಂಡು ಹೊಗುವಲ್ಲಿ ಛಾಯಾಗ್ರಾಹಕರು ಹಲವಾರು ನೂನ್ಯತೆಗಳನ್ನು ಎದುರಿಸಬೇಕಾಗಿದೆ ತನ್ನ ಬದುಕು ಕತ್ತಲೆಯಾದರೂ ಹಾಗೂ ದುಃಖದಲ್ಲಿದ್ದರು ಸಮಾಜದ ನಗುವನ್ನು ಕಾಣುವಂತವರಾಗಿದ್ದಾರೆ, ಅವರ ಬದುಕು ಕತ್ತಲೆಯಾಗಿದೆ, ಅವರಿಗೆ ಜೀವನದ ಭದ್ರತೆಯ ಅವಶ್ಯಕತೆಯಿದೆ, ಸಂಘಟಿತರಾಗಬೇಕಿದೆ ಸರ್ಕಾರದ ಮಟ್ಟದಲ್ಲಿ ಚಿಂತನೆಯಾಗಿದೆ ಸರ್ಕಾರ ಮುಂದೆ ಬರಬೇಕಿದೆ ಎಂದು ಹೇಳಿದರು.
                 ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚಿಸಿದರು, ಪುರಸಭೆ ಸದಸ್ಯ ಪರಶುರಾಮ ಸೊನ್ನದ ಮಾತನಾಡಿದರು.
                    ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಛಾಯಾಗ್ರಾಹಕ ಶಶಿಧರ ಹಿರೇಮಠ, ದೊಡ್ಡಾಟ ಕಲಾವಿದ ಫಕ್ಕಿರಪ್ಪ ಬುಶೆಟ್ಟಿಯವರನ್ನು ಸನ್ಮಾನಿಸಲಾಯಿತು. ನಟರಾಜ ನಾಟ್ಯ ಶಾಲೆಯ ವತಿಯಿಂದ ನೃತ್ಯ ಪ್ರದರ್ಶನ ಹಾಗೂ ಹಾವೇರಿಯ ಶಿವಬಸವ ಬಣಕಾರ ಅವರಿಂದ ಸಂಗೀತ ಸೇವೆ ಜರುಗಿತು.
                ಶ್ರೀ ಸತ್ಯಸಾಯಿ ಛಾಯಾಗ್ರಾಹಕರ ಸಂಘದ ತಾಲೂಕಾ ಅಧ್ಯಕ್ಷ ಉದಯಶಂಕರ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಪಾರವ್ವ ಆರೇರ್, ಗೌರವಾಧ್ಯಕ್ಷ ರಂಗನಾಥ ಗಾಯಕವಾಡ, ಜಿಲ್ಲಾಧ್ಯಕ್ಷ ಬಸವರಾಜ ಅತಡಕರ, ಸೇರಿದಂತೆ ತಾಲೂಕಿನ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಛಾಯಾಗ್ರಾಹಕರು ಉಪಸ್ಥಿತರಿದ್ದರು.
ಶಿಕ್ಷಕ ಅರುಣ ಹುಡೆದಗೌಡ್ರ ನಿರೂಪಿಸಿದರು, ಬಸವರಾಜ ಹಡಪದ ಸ್ವಾಗತಿಸಿ ವಂದಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link