ಎಂ ಎನ್ ಕೋಟೆ :
ಶೌಚಾಲಯವನ್ನು ಕಟ್ಟಿಕೊಂಡಿರುವ ಪಾನುಭವಿಗಳು ಉಪಯೋಗಿಸಿಕೊಂಡು ಗ್ರಾಮಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ನೋಡಲ್ ಅಧಿಕಾರಿ ಎಂ ಎಸ್ ನಾಗಭೂಷಣ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದ್ದು ಎಲ್ಲ ಫಲಾನುಭವಿಗಳು ಶೌಚಾಲಯದಲ್ಲಿ ಮಲ ವಿಸರ್ಜನೆಯನ್ನು ಮಾಡಬೇಕು. ಕೇಂದ್ರ ಸರ್ಕಾರ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡು ಎಂ ಎನ್ ಕೋಟೆ ಗ್ರಾಮ ಪಂಚಾಯಿತಿಯನ್ನು ಬಹಿಲು ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ. ಫಲಾನುಭವಿಗಳು ಶೌಚಾಲಯವನ್ನು ಕಟ್ಟಿಕೊಂಡು ಸರ್ಕಾರದ ಅನುದಾನವನ್ನು ಪಡೆದುಕೊಂಡು ನಿಮ್ಮ ಗ್ರಾಮಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದರು. ನಮ್ಮ ಗ್ರಾಮ ಪಂಚಾಯಿತಿಗೆ ಒಳ ಪಡುವ 19ಹಳ್ಳಿಗಳಲ್ಲಿ ಬಯಲು ಮುಕ್ತ ಶೌಚಾಲಯವನ್ನು ನಿರ್ಮಿಸಿ ಘೋಷಣೆ ಮಾಡಲಾಗಿದೆ. ಇನ್ನು ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ಅವಕಾಶವಿದೆ ಸರ್ಕಾರದ ಅನುದಾನವನ್ನು ಪಡೆದು ಶೌಚಾಲಯವನ್ನು ನಿರ್ಮಿಸಿಕೊಂಡು ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರ್ವಮಂಗಳ ದೊಡ್ಡಯ್ಯ , ಗ್ರಾಮ ಪಂಚಾಯಿತಿ ಸದಸ್ಯೆ ಕೆಂಪಮ್ಮ , ಸಿದ್ದಲಿಂಗಪ್ಪ , ಪಿಡಿಓ ನಾಗರಾಜು , ಸಿಬ್ಬದಿಗಳಾದ ಬಸವರಾಜು , ಮಂಜುನಾಥ್ , ಗೋವಿಂದರಾಜು ಇದ್ದರು.







