ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದಲ್ಲಿ ಶ್ರೀ ಗ್ರಾಮದೇವತೆ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತ್ತು. ಜಾತ್ರೆಯ ಅಂಗವಾಗಿ ಊರಿನ ಗ್ರಾಮಸ್ಥರೆಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಜಾತ್ರೆ ಮಾಡಿದರು.ಜಾತ್ರೆಯ ಅಂಗವಾಗಿ ಕುರುಬ ಜನಾಂಗದಿಂದ ಬಾನದ ಸೇವೆ ಸಂಜೆ ಆರತಿ ಉತ್ಸವ ಅದ್ದೂರಿಯಾಗಿ ನಡೆಯಿತ್ತು. ಜಾತ್ರೆಯ ಅಂಗವಾಗಿ ಅಮ್ಮನವರಿಗೆ ಹಸಿರು ಚಪ್ಪರ ಹಾಕಿ ಅಮ್ಮನವರನ್ನು ಕೂರಿಸಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆಯಿಂದಲೇ ಅಮ್ಮನವರ ದೇವಾಲಯಕ್ಕೆ ಭಕ್ತರು ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಮುಖಂಡರಾದ ದೇವರಾಜು,ಮಾರುತಿ ಕುಮಾರು,ಶಿವರಾಜು,ಸಿದ್ದಪ್ಪ,ಲಿಂಗರಾಜು,ನಾಗಣ್ಣ,ವೀರಭದ್ರಚಾರ್, ರಮೇಶ್,ಇತರರು ಭಾಗವಹಿಸಿದ್ದರು.