ಉಗ್ರರ ಸ್ಟಾಂಪ್ ಬಿಡುಗಡೆ

ಇಸ್ಲಾಮಾಬಾದ್: 
     
       ಭಾರತದಲ್ಲಿ ಉಗ್ರವಾದಿ ಎಂದು ಕರೆಸಿಕೊಳ್ಳುವ ವ್ಯಕ್ತಿ ಪಾಕಿಸ್ತಾನದಲ್ಲಿ ಸ್ವತಂತ್ರ್ಯ ಯೋಧ ರೀತಿ ಗೌರವ ಪಡೆದಿದ್ದಾನೆ ಕೆಳದ ಎರಡು ವರ್ಷದ ಹಿಂದೆ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಯಿಂದ ಹತನಾಗಿದ್ದ ಭಯೋತ್ಪಾದಕ ಬುರ್ಹಾನ್ ವನಿ ಪರವಾಗಿ ಮಾತನಾಡುವ ಪಾಕಿಸ್ತಾನ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಉಗ್ರನ  ಪೋಸ್ಟಲ್ ಸ್ಟ್ಯಾಂಪ್‌ ಬಿಡುಗಡೆ ಮಾಡಿ ಗೌರವ ಸಲ್ಲಿಸಿ ಾತನನ್ನು ಆರ್ದಶ ಪುರುಷ ಎಂದು ಹೊಗಳಿದೆ.
        ಪಾಕಿಸ್ಥಾನದಲ್ಲಿ ಪ್ರತಿ ವರ್ಷ ಾಚರಿಸುವ  ಕಾಶ್ಮೀರ ಹುತಾತ್ಮರ ದಿನ’ದಂದು ಪಾಕಿಸ್ತಾನ 20 ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಉಗ್ರ ಬುರ್ಹಾನ್ ವನಿ ಸಹಿತ ಹಲವು ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಂತೆ ಬಿಂಬಿಸಲಾಗಿದೆ. ಇದರೊಂದಿಗೆ ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್‌ ಅವರ ನೈಜ ದರ್ಶನವಾಗಿದ್ದು, ಪಾಕ್ ನ ಇಬ್ಬಗೆ ನೀತಿ ಬಯಲಾಗಿದೆ.
       ಬುರ್ಹಾನ್ ವನಿ ಚಿತ್ರವಿರುವ ಅಂಚೆ ಚೀಟಿಯಲ್ಲಿ ‘ಸ್ವಾತಂತ್ರ್ಯ ಐಕಾನ್’ ಎಂದು ಬರೆಯಲಾಗಿದ್ದು, ಇತರೆ ಅಂಚೆ ಚೀಟಿಗಳಲ್ಲೂ ಹತ್ಯೆಯಾದ ಉಗ್ರರ ಫೋಟೊಂದಿಗೆ ರಾಸಾಯನಿಕ ಶಸ್ತ್ರಾಸ್ತ್ರದ ಬಳಕೆ, ಪೆಲೆಟ್ ಗನ್ ಬಳಕೆ ಹಾಗೂ ಸಾಮೂಹಿಕ ಸಮಾಧಿ ಎಂಬ ಶೀರ್ಷಿಕೆಗಳನ್ನು ಬಳಸಲಾಗಿದೆ.
                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link