ಶಿಗ್ಗಾವಿ :
ಬಳ್ಳಾರಿ ಜಿಲ್ಲೆಯ ವಿಭಾಗೀಯ ವ್ಯಾಪ್ತಿಯಲ್ಲಿ ವಾಣಿಜ್ಯ ನ್ಯಾಯಾಲಯವನ್ನು ಸ್ಥಾಪಿಸಿರುವುದನ್ನು ವಿರೋಧಿಸಿ ಶಿಗ್ಗಾವಿ ತಾಲೂಕಿನ ನ್ಯಾಯವಾದಿಗಳ ಸಂಘ ಒಂದು ದಿನ ಕಾರ್ಯಕಲಾಪಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡುವ ಮೂಲಕ ವಿರೋಧಿಸಿ ತಾಲೂಕಾ ತಹಶೀಲ್ದಾರರಿಗೆ ಮಂಗಳವಾರ ಮನವಿ ಅರ್ಪಿಸಿದರು.
ಈ ಕುರಿತು ನ್ಯಾಯವಾದಿಗಳ ಸಂಘದ ತುರ್ತು ಸಭೆಯನ್ನು ಕರೆದು ತಾಲೂಕಾ ನ್ಯಾಯವಾದಿಗಳ ಸಂಘದ ಅದ್ಯಕ್ಷ ಎಸ್ ಬಿ ಲಕ್ಕಣ್ಣನವರ ಅವರ ಅದ್ಯಕ್ಷತೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು ಸಂಘದ ವಿಭಾಗೀಯ ವ್ಯಾಪ್ರತಿಯಲ್ಲಿ ವಾಣಿಜ್ಯ ನ್ಯಾಯಾಲಯವನ್ನು ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರದಲ್ಲಿ ಸ್ಥಾಪನೆ ಮಾಡಿದ್ದು ಆ ನ್ಯಾಯಾಲಯದ ವ್ಯಾಪ್ತಿಗೆ ಹಾವೇರಿ ಜಿಲ್ಲೆಯನ್ನು ಸೇರಿಸಲಾಗಿದೆ
ಈ ರೀತಿಯ ನಿರ್ಧಾರ ಮಾಡಿರುವುದರಿಂದ ಹಾವೇರಿ ಜಿಲ್ಲೆಯ ಮತ್ತು ಶಿಗ್ಗಾವಿ ತಾಲೂಕಿನ ಕಕ್ಷಿದಾರರಿಗೆ ತುಂಭಾ ತೊಂದರೆಯಾಗುತ್ತದೆ , ಒಂದು ಪ್ರಕರಣಕ್ಕೆ ಒಬ್ಬ ಕಕ್ಷಿದಾರನು ಬಳ್ಳಾರಿಗೆ ಹೋಗಬೇಕಾದರೆ ನ್ಯಾಯಾಲಯದಲ್ಲಿ ತನ್ನ ನಿಗಧಿ ಪಡಿಸಿದ ದಿನಾಂಕಕ್ಕಿಂತ ಮೊದಲೇ ಬಳ್ಳಾರಿಗೆ ಹೋಗಬೇಕು ಹಾಗೂ ತನ್ನ ಪರ ವಾದ ಮಾಡಲು ಒಬ್ಬ ವಕೀಲರನ್ನು ನೆಮಕ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಪಕ್ಷಗಾರನಿಗೆ ತುಂಬಾ ಹಣಕಾಸಿನ ಹೊರೆಯಾಗುತ್ತದೆ ಮತ್ತು ಸಮಯ 2-3 ದಿನಗಳು ಬೇಕಾಗುತ್ತದೆ ಜೊತೆಗೆ ವಕೀಲರಿಗೂ ಕೂಡಾ ತುಂಬಾ ಅನಾನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಕೂಡಲೇ ವಾಣಿಜ್ಯ ನ್ಯಾಯಾಲಯವನ್ನು ಬಳ್ಳಾರಿ ನಗರದಲ್ಲಿ ಸ್ಥಾಪಿಸಿರುವುದನ್ನು ಹಿಂದಕ್ಕೆ ಪಡೆಯಬೇಕು ಎಂದು ಅಗ್ರಹಿಸಿ ಮನವಿಯಲ್ಲಿ ತಿಳಿಸಲಾಗಿದೆ.
ನ್ಯಾಯವಾದಿಗಳಾದ ಎಸ್ ಕೆ ಅಕ್ಕಿ, ಎಫ್ ಎಸ್ ಕೋಣನವರ, ಬಿ ಜಿ ಕೂಲಿ, ಎಮ್ ಆರ್ ಕಮ್ಮರ, ಎಫ್ ಎಮ್ ಹಾಧಿಮನಿ, ವಿ ಕೆ ಕೊಣಪ್ಪನವರ, ಶ್ರೀಕಾಂತ ಪೂಜಾರ, ಎಸ್ ಜಿ ಟೋಪಣ್ಣನವರ, ಎಸ್ ಎಮ್ ಗಾಣಗೇರ, ಬಿ ಎ ಹಿರೇಮಠ, ಆರ್ ಎಮ್ ಹಾರೋಗೇರಿ, ಕೆ ಎನ್ ಭಾರತಿ, ಎನ್ ವಿ ಮುದಣ್ಣವರ ಸೇರಿದಂತೆ ನ್ಯಾಯವಾದಿಗಳ ಸಂಘದ ಸದಸ್ಯರು ಹಾಜರಿದ್ದರು.
