ಬಸ್ ಚಾಲಕರಿಗೂ ಹೆಲ್ಮೆಟ್ ಬಂತು……????

ಕೂಚ್ ಬೆಹರ್: 

    ನಮ್ಮ ದೇಶದಲ್ಲಿ ಪಾರಂಪರಿಕ ರಾಜ್ಯ ಎಂದು ಕರೆಸಿ ಕೊಳ್ಳುವ  ಪಶ್ಚಿಮ ಬಂಗಾಳದ ಇಸ್ಲಾಮ್​ಪುರ ಸಮೀಪದ ದಿಂಜ್​ಪುರ ಎಂಬಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ ವಿದ್ಯಾರ್ಥಿಯೊಬ್ಬ ಹತನಾಗಿದ್ದ. ಹೀಗಾಗಿ ಬಿಜೆಪಿ ಬುಧವಾರದಂದು ರಾಜ್ಯವ್ಯಾಪಿ 12 ಗಂಟೆಗಳ ಬಂದ್​ಗೆ ಕರೆ ನೀಡಿದೆ.

    ಬಂದ್​ ವೇಳೆ ಪ್ರತಿಭಟನಾಕಾರರು ಸರ್ಕಾರಿ ಮತ್ತು ಖಾಸಗಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕಲ್ಲು ತೂರಾಟದ ದಾಳಿಯಿಂದ ತಪ್ಪಿಸಿಕೊಳ್ಳಲು ಬಸ್ ಚಾಲಕರು ಹೆಲ್ಮೆಟ್​ಗಳ ಮೊರೆ ಹೋಗಿದ್ದಾರೆ. ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಕ್ಷಣೆ ಪಡೆಯಲು ಚಾಲಕರು ಹೆಲ್ಮೆಟ್​ ಧರಿಸುತ್ತಿದ್ದಾರೆ .

                         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link