ಬೆಂಗಳೂರು
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೃಷ್ಣಗಿರಿಯ ಯುವ ರಾಜಕೀಯ ಮುಖಂಡ ತೋರಪಲ್ಲಿ ಮುನಿರಾಜುನನ್ನು ಕತ್ತು ಕತ್ತರಿಸಿ ಕೊಲೆ ಮಾಡಿ ಆನೇಕಲ್‍ನ ಬೃಂದಾವನ ಲೇಔಟ್ ಬಳಿ ಮೃತದೇಹ ಎಸೆದು ಹೋಗಿದ್ದ ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಆನೇಕಲ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮುನಿರಾಜುನನ್ನು ಕೊಲೆಗೈದ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಕೇಶವ (32), ಹರೀಶ (29), ಬಾಗಲೂರಿನ ಯಶ್ವಂತ (23) ಆನೇಕಲ್‍ನ ಗೋಪಸಂದ್ರದ ಸಂತೋಷ್ (26) ಬಂಧಿಸಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಶಿವಕುಮಾರ್ ತಿಳಿಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳು ತೋರಪಲ್ಲಿ ಮುನಿರಾಜುನನ್ನು ಕತ್ತು ಕತ್ತರಿಸಿ ಕೊಲೆ ಮಾಡಿ ಮೃತದೇಹವನ್ನು ಬೃಂದಾವನ ಲೇಔಟ್ ಬಳಿ ಎಸೆದು ಪರಾರಿಯಾಗಿದ್ದರು ಕಳೆದ ಸೆ. 17 ರಂದು ಸ್ಥಳೀಯರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಆನೇಕಲ್ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಪ್ರಮುಖ ಆರೋಪಿ ಕೇಶವ ಹಾಗೂ ಕೊಲೆಯಾದ ಮುನಿರಾಜು ನಡುವೆ ಹಣಕಾಸು ವ್ಯವಹಾರ ನಡೆಯುತ್ತಿದ್ದು, ಇಬ್ಬರ ನಡುವೆ ಕೌಟುಂಬಿಕ ವಿಚಾರವಾಗಿ ಜಗಳವುಂಟಾಗಿದ್ದು ಕೊಲೆಗೆ ಕಾರಣವಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಅಪರಾಧ ಹಿನ್ನಲೆ
ಜಗಳದಿಂದ ಆಕ್ರೋಶಗೊಂಡಿದ್ದ ಕೇಶವ, ಇತರ ನಾಲ್ವರ ಜತೆ ಹೊಸೂರಿನ ಬಾಗಲೂರು ಹೌಸಿಂಗ್ ಕಾಲೋನಿಯಿಂದ ಕಳೆದ ಸೆ. 15 ರಂದು ಪಾರ್ಟಿ ಮಾಡುವುದಾಗಿ ಕರೆದುಕೊಂಡು ಆನೇಕಲ್‍ನ ಬೃಂದಾವನ ಲೇಔಟ್ ಬಳಿಗೆ ಕರೆತಂದು ಮಚ್ಚಿನಿಂದ ಕತ್ತು ಕತ್ತರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಕೇಶವ ಕಾರು ಚಾಲಕನಾಗಿದ್ದು, ಇದೇ ಮೊದಲ ಬಾರಿ ಅಪರಾಧ ಕೃತ್ಯಕ್ಕಿಳಿದಿದ್ದರೆ, ಹರೀಶ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ್, ಅತ್ತಿಬೆಲೆಯ ಗೋಪಸಂದ್ರದ ಸಿದ್ದು ಎಂಬಾತನ ಕೊಲೆ ಕೃತದಲ್ಲಿ ಭಾಗಿಯಾಗಿದ್ದಾನೆ . ಮತ್ತೊಬ್ಬ ಆರೋಪಿ ಯಶ್ವಂತ್ ಕೃಷಿಕನಾಗಿದ್ದು, ಕಳೆದ ವರ್ಷ ಹೊಸಳ್ಳಿ ಗಾರ್ಮೆಂಟ್ಸ್ ಬಳಿ ಮಂಜುನಾಥ ಮತ್ತು ಭರತ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿದ್ದ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








